ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MS Dhoni: ಯುಎಸ್ ಓಪನ್‌ನಲ್ಲಿ ಜೊಕೊವಿಕ್ ಪಂದ್ಯ ವೀಕ್ಷಿಸಿದ ಧೋನಿ

ಜೋಕೋ ಹಾಗೂ ಅಲ್ಕರಾಜ್‌ ಈವರೆಗೂ 8 ಬಾರಿ ಮುಖಾಮುಖಿಯಾಗಿದ್ದು, ಜೋಕೋ 5-3 ಗೆಲುವಿನ ದಾಖಲೆ ಹೊಂದಿದ್ದಾರೆ. ಇಬ್ಬರ ನಡುವಿನ ಕೊನೆ 2 ಪಂದ್ಯಗಳಾದ ಒಲಿಂಪಿಕ್ಸ್‌, ವಿಂಬಲ್ಡನ್‌ನಲ್ಲಿ ಜೋಕೋ ಗೆದ್ದಿದ್ದರು. ಜೋಕೋ 5ನೇ ಯುಎಸ್‌ ಓಪನ್‌ ಹಾಗೂ ಒಟ್ಟಾರೆ 25ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದರೆ, ಆಲ್ಕರಜ್‌ 2022ರ ಬಳಿಕ ಮತ್ತೊಂದು ಯುಎಸ್‌ ಓಪನ್‌ ಕಿರೀಟ ಗೆಲ್ಲುವ ಕಾತರದಲ್ಲಿದ್ದಾರೆ.

US Open: ಯುಎಸ್ ಓಪನ್‌ನಲ್ಲಿ ಜೊಕೊವಿಕ್ ಪಂದ್ಯ ವೀಕ್ಷಿಸಿದ ಧೋನಿ

-

Abhilash BC Abhilash BC Sep 4, 2025 12:03 PM

ನ್ಯೂಯಾರ್ಕ್‌: ಯುಎಸ್ ಓಪನ್(US Open) ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್(Novak Djokovic) ಟೇಲರ್ ಫ್ರಿಟ್ಜ್ ಅವರನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ(MS Dhoni) ಕೂಡ ಹಾಜರಿದ್ದರು. ನ್ಯೂಯಾರ್ಕ್‌ನ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಸಮಯದಲ್ಲಿ ಧೋನಿ ಜನಸಮೂಹದಲ್ಲಿ ಕಾಣಿಸಿಕೊಂಡರು. ಉದ್ಯಮಿ ಹಿತೇಶ್ ಸಾಂಘ್ವಿ ಸಾಮಾಜಿಕ ಮಾಧ್ಯಮದಲ್ಲಿ ಧೋನಿ ಜತೆಗಿನ ಫೋಟೊ ಮತ್ತು ಪಂದ್ಯದ ವಿಡಿಯೊ ಹಂಚಿಕೊಂಡರು.

ಧೋನಿ ಈ ಹಿಂದೆಯೂ ಹಲವು ಬಾರಿ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಪಂದ್ಯಗಳನ್ನು ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ ಹಲವು ವರ್ಷಗಳಾಗಿದ್ದರೂ ಕೂಡ ಧೋನಿ ಫಿಟ್ನೆಸ್‌ ಕಾಯ್ದುಕೊಳ್ಳಲು ತಮ್ಮ ಗೆಳೆಯರೊಂದಿಗೆ ಆಗಾಗ ಟೆನಿಸ್‌ ಆಡುತ್ತಿರುತ್ತಾರೆ.

ನೋವಾಕ್‌ ಜೋಕೋವಿಕ್‌ ಹಾಗೂ ಸ್ಪೇನ್‌ನ ಯುವ ಸೂಪರ್‌ಸ್ಟಾರ್‌ ಕಾರ್ಲೊಸ್‌ ಅಲ್ಕರಾಜ್‌ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಇಬ್ಬರ ನಡುವಿನ ಅತಿ ಮಹತ್ವದ ಪಂದ್ಯ ಶನಿವಾರ ನಡೆಯಲಿದೆ.

ಜೋಕೋ ಹಾಗೂ ಅಲ್ಕರಾಜ್‌ ಈವರೆಗೂ 8 ಬಾರಿ ಮುಖಾಮುಖಿಯಾಗಿದ್ದು, ಜೋಕೋ 5-3 ಗೆಲುವಿನ ದಾಖಲೆ ಹೊಂದಿದ್ದಾರೆ. ಇಬ್ಬರ ನಡುವಿನ ಕೊನೆ 2 ಪಂದ್ಯಗಳಾದ ಒಲಿಂಪಿಕ್ಸ್‌, ವಿಂಬಲ್ಡನ್‌ನಲ್ಲಿ ಜೋಕೋ ಗೆದ್ದಿದ್ದರು. ಜೋಕೋ 5ನೇ ಯುಎಸ್‌ ಓಪನ್‌ ಹಾಗೂ ಒಟ್ಟಾರೆ 25ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದರೆ, ಆಲ್ಕರಜ್‌ 2022ರ ಬಳಿಕ ಮತ್ತೊಂದು ಯುಎಸ್‌ ಓಪನ್‌ ಕಿರೀಟ ಗೆಲ್ಲುವ ಕಾತರದಲ್ಲಿದ್ದಾರೆ.

ಇದನ್ನೂ ಓದಿ US Open 2025: 5 ವರ್ಷಗಳ ನಂತರ ಯುಎಸ್ ಓಪನ್ ಸೆಮಿಫೈನಲ್ ತಲುಪಿದ ಒಸಾಕಾ