GST Reforms: ತಂಬಾಕು, ಸಿಗರೇಟ್ ಸೇದೋರಿಗೆ ಶಾಕ್; ಶೇಕಡಾ 40ರಷ್ಟು ಜಿಎಸ್‌ಟಿ ಹೇರಿದ ಸರ್ಕಾರ
ತುಂಬಾಕು ಉತ್ಪನ್ನಗಳಾದ ಪಾನ್ ಮಸಾಲಾ, ಗುಟ್ಕ್, ಸಿಗರೇಟ್ ದರ ಏರಿಕೆಯಾಗಲಿದೆ. ಇದು, ಸಾಮಾಜಿಕವಾಗಿ ಜನರನ್ನು ದುಷ್ಟಚಟಗಳಿಂದ ರಕ್ಷಿಸಲು ಪ್ರೋತ್ಸಾಹಿಸುವ ಸರ್ಕಾರದ ಸ್ಪಷ್ಟ ಉದ್ದೇಶದಿಂದ ಈ ರೀತಿ ಮಾಡಿ ಮಾಡಲಾಗಿದೆ. ಈ ದೀಪಾವಳಿಗೆ ಜನರಿಗೆ ಗಿಫ್ಟ್ ನೀಡಲಾಗುವುದು ಎಂದು ಮೋದಿ ತಿಳಿಸಿದ್ದರು.

-

ನವದೆಹಲಿ: ಜಿಎಸ್‌ಟಿ ಕೌನ್ಸಿಲ್ (GST Reforms) ಈ ಬಾರಿ ಸೂಪರ್ ಐಷಾರಾಮಿ ವಸ್ತುಗಳ ಮೇಲಿನ ತೆರಿಗೆಯನ್ನು ಶೇಕಡಾ 40 ರ ವಿಶೇಷ ದರದಲ್ಲಿ ಹೆಚ್ಚಿಸಿದೆ. ಪಾನ್ ಮಸಾಲಾ, ತಂಬಾಕು ಉತ್ಪನ್ನಗಳು, ಸಿಗರೇಟ್ ಮತ್ತು 1,200 ಸಿಸಿಗಿಂತ ಹೆಚ್ಚಿನ ಮತ್ತು 4,000 ಎಂಎಂ ಗಿಂತ ಹೆಚ್ಚಿನ ಎಲ್ಲಾ ಆಟೋಮೊಬೈಲ್‌ಗಳ ಮೇಲಿನ ತೆರಿಗೆ ಶೇಕಡಾ 40 ರಷ್ಟು ಜಿಎಸ್‌ಟಿಯನ್ನು ಹೆಚ್ಚಿಸಲಾಗಿದೆ. ಸೇವೆಗಳ ಮೇಲಿನ ಜಿಎಸ್‌ಟಿ ದರಗಳಲ್ಲಿನ ಬದಲಾವಣೆಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ.
ಐಷಾರಾಮಿ ವಸ್ತುಗಳು ಮತ್ತು ಕಾನೂನುಬದ್ಧ ಮಾದಕ ವಸ್ತುಗಳನ್ನು ಈ ವರ್ಗಕ್ಕೆ ಸೇರಿಸಲಾಗಿದೆ. ಅಂದ್ರೆ, ತುಂಬಾಕು ಉತ್ಪನ್ನಗಳಾದ ಪಾನ್ ಮಸಾಲಾ, ಗುಟ್ಕ್, ಸಿಗರೇಟ್ ದರ ಏರಿಕೆಯಾಗಲಿದೆ. ಇದು, ಸಾಮಾಜಿಕವಾಗಿ ಜನರನ್ನು ದುಷ್ಟಚಟಗಳಿಂದ ರಕ್ಷಿಸಲು ಪ್ರೋತ್ಸಾಹಿಸುವ ಸರ್ಕಾರದ ಸ್ಪಷ್ಟ ಉದ್ದೇಶದಿಂದ ಈ ರೀತಿ ಮಾಡಿ ಮಾಡಲಾಗಿದೆ ಎಂದು ಹೇಳಬಹುದು. ತಂಬಾಕು ಮಾತ್ರವಲ್ಲ, ಕೂಲ್ ಡ್ರಿಂಕ್ಸ್ಗಳ ಮೇಲಿನ ಜಿಎಸ್‌ಟಿ ದರವು ಏರಿಕಯಾಗಿದೆ. ಇನ್ನೂ ಇದಕ್ಕೂ ಮುನ್ನ ಕೂಲ್ ಡ್ರಿಂಕ್ಸ್ಗಳ ಮೇಲಿನ ಜಿಎಸ್ಟಿಯು ಶೇ. 28 ರಷ್ಟಿತ್ತು. ಆದ್ರೆ ಆ ಜಿಎಸ್‌ಟಿ ಸ್ಲ್ಯಾಬ್ ರದ್ದುಗೊಂಡು, 40% ಸ್ಲ್ಯಾಬ್ ಸೇರ್ಪಡೆಗೊಂಡಿದೆ.
ಇನ್ನು ಲಾಟರಿ ಟಿಕೆಟ್‌ಗಳು, ಕ್ಯಾಸಿನೊ ಸೇವೆಗಳು ಮತ್ತು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕೆಲವು ಸಂದರ್ಭಗಳಲ್ಲಿ ಹೆಚ್ಚುವರಿ ಸೆಸ್ ಇಲ್ಲದೆ 40% ತೆರಿಗೆಯನ್ನು ಹಾಕಲಾಗಿದೆ. ಹೆಚ್ಚಿನ ಸಕ್ಕರೆ, ಉಪ್ಪು ಅಥವಾ ಕೊಬ್ಬಿನ ಅಂಶವಿರುವ ಫಾಸ್ಟ್ ಫುಡ್ ಮತ್ತು ಪ್ಯಾಕ್ ಮಾಡಿದ ತಿಂಡಿಗಳಂತಹ ವಸ್ತುಗಳು ಸಹ 40% ಏರಿಕೆಯಾಗಲಿದೆ. 1,500 ಸಿಸಿ ಎಂಜಿನ್‌ಗಿಂತ ಹೆಚ್ಚಿನ ಸಾಮರ್ಥ್ಯದ ಎಸ್‌ಯುವಿಗಳಂತಹ ಉನ್ನತ ದರ್ಜೆಯ ಕಾರುಗಳು ಮತ್ತು 4 ಮೀಟರ್‌ಗಿಂತ ಉದ್ದದ ವಾಹನಗಳು 40% ಜಿಎಸ್‌ಟಿ ಅನ್ವಯಿಸುತ್ತದೆ.
ಈ ಸುದ್ದಿಯನ್ನೂ ಓದಿ: GST Reforms: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡಗೆ; ಕ್ಯಾನ್ಸರ್ ಔಷಧಗಳು, ಅಪರೂಪದ ಕಾಯಿಲೆಗಳ ಔಷಧಿಗಳ ಮೇಲಿನ ಜಿಎಸ್‌ಟಿ ಕಡಿಮೆ
ಪ್ರಧಾನಿ ನರೇಂದ್ರ ಮೋದಿಯವರು ಈ ದೀಪಾವಳಿಗೆ ಜನರಿಗೆ ಗಿಫ್ಟ್ ನೀಡಲಾಗುವುದು ಎಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ತಿಳಿಸಿದ್ದರು. ಆದರೆ ದೀಪಾವಳಿಗೂ ಮೊದಲೇ ಈ ಕ್ರಮ ಜಾರಿಗೆ ಬಂದಿದೆ. 2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ ಅಡಿ ವಸ್ತುಗಳಿಗೆ 5% , 12%, 18%, 28 % ತೆರಿಗೆ ವಿಧಿಸಲಾಗುತ್ತಿತ್ತು.