ನವದೆಹಲಿ: ಕೇಂದ್ರ ಸರ್ಕಾರವು ತರಾತುರಿಯಲ್ಲಿ ಜಾರಿಗೆ ತರಲು ಹೊರಟಿರುವ ಮಹಿಳಾ ಮೀಸಲಾತಿ ಮಸೂದೆಯ (womens reservation bill) ಹಿಂದಿರುವ ಕುತಂತ್ರ ನೋಡಿದ್ದರೆ ಚಾಣಕ್ಯನಿಗೆ ಆಘಾತವಾಗಿರುತ್ತಿತ್ತು ಎಂದು ಕಾಂಗ್ರೆಸ್ ಸಂಸದೆ (Congress MP) ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದರು. ಲೋಕಸಭೆಯಲ್ಲಿ (Lok Sabha) ಗುರುವಾರ ಕೇಂದ್ರ ಸರ್ಕಾರದ ಪ್ರಸ್ತಾವಿತ ಮಸೂದೆ ಮಹಿಳಾ ಮೀಸಲಾತಿ ಕುರಿತು ಪ್ರಿಯಾಂಕಾ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಚಾಣಕ್ಯ ಎಂದು ಕರೆದು ಟೀಕಿಸಿದರು.
ಲೋಕಸಭೆಯಲ್ಲಿ ಗುರುವಾರ ಕೇಂದ್ರ ಸರ್ಕಾರ ಪ್ರಸ್ತಾವಿತ ಮಹಿಳಾ ಮೀಸಲಾತಿ ಮಸೂದೆ ಸಂಬಂಧಿಸಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು, ಗೃಹ ಸಚಿವ ಅಮಿತ್ ಶಾ ಅವರನ್ನು ತತ್ತ್ವಜ್ಞಾನಿ ಮತ್ತು ರಾಜಕೀಯ ತಂತ್ರಜ್ಞ, ಚಾಣಕ್ಯ ಎಂದು ಕರೆಯುವ ಮೂಲಕ ವಾಗ್ದಾಳಿ ನಡೆಸಿದರು.
ಮಿಲಿಟರಿ ಸಂಘರ್ಷದಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ
ಮಹಿಳಾ ಸಂಸದರಿಗೆ ಮೀಸಲಾತಿಯನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ಆದರೆ ಮಸೂದೆ ಜಾರಿಗೆ ತರಲು ರಾಜಕೀಯ ಮಾಡಲಾಗಿದೆ ಎಂದ ಅವರು, ಮಹಿಳಾ ಮೀಸಲಾತಿಯು ಚುನಾವಣೆ ಪ್ರಯೋಜನ ಪಡೆಯಲು ಅವಸರವಸರವಾಗಿ ಜಾರಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಇದು ಎನ್‌ಡಿಎ ಆಡಳಿತದ ಕೇಂದ್ರದ ಚುನಾವಣಾ ಪ್ರಯೋಜನವನ್ನು ಉಳಿಸಿಕೊಳ್ಳುವ ಟ್ರಂಪ್ ಕಾರ್ಡ್ ಎಂದರು.
ಬಿಜೆಪಿಯು ಭಾರತದ ಸಂವಿಧಾನವನ್ನು ಹಾನಿಗೊಳಿಸುವ ಮೂಲಕ ತಮ್ಮ ಪಕ್ಷದ ಅಡಿಪಾಯವನ್ನು ಬಲಪಡಿಸುತ್ತಿದೆ ಎಂದ ಅವರ ಮಾತಿಗೆ ಅಮಿತ್ ಶಾ ಮತ್ತು ಇತರ ಹಲವಾರು ಬಿಜೆಪಿ ಸಂಸದರು ನಗುತ್ತಿರುವುದನ್ನು ನೋಡಿದ ಪ್ರಿಯಾಂಕಾ ಗಾಂಧಿ, ಎಲ್ಲರೂ ಇವತ್ತು ಸಂಪೂರ್ಣ ಯೋಜನೆ ಮಾಡಿ ಬಂದಿದ್ದೀರಿ. ಒಂದು ವೇಳೆ ಇಂದು ಚಾಣಕ್ಯ ಬದುಕಿದ್ದರೆ ಅವರೂ ನಿಮ್ಮ ಕುತಂತ್ರವನ್ನು ನೋಡಿ ಆಘಾತಕ್ಕೊಳಗಾಗುತ್ತಿದ್ದರು ಎಂದರು.
ಬಳಿಕ ಅವರು ತಮ್ಮ ಮಾತನ್ನು ಮುಂದುವರಿಸಿ, ಮಹಿಳೆಯರು ಸುಳ್ಳು ಹೇಳುವವರನ್ನು ಗ್ರಹಿಸುವಲ್ಲಿ ನಿಪುಣರು. ಹೀಗಾಗಿ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2023ರಲ್ಲಿ ಈ ಕುರಿತು ಪತ್ರವನ್ನು ಓದಿದ ಕೆಲವು ವರ್ಷಗಳ ಅನಂತರ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು 2023 ರಲ್ಲಿ ಈ ಕಾಯ್ದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಆಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಸಿದ್ಧಾಂತಕ್ಕೆ ಅನುಗುಣವಾಗಿ ಅದನ್ನು ಸಂಪೂರ್ಣವಾಗಿ ಬೆಂಬಲಿಸಿತು. ಕಾಂಗ್ರೆಸ್ ಯಾವಾಗಲೂ ಮಹಿಳಾ ಮೀಸಲಾತಿಯನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಲೋಕಸಭೆಯ 543 ಸ್ಥಾನಗಳಲ್ಲಿ ಶೇ. 33 ರಷ್ಟು ಮೀಸಲಾತಿ ನೀಡಲು ಸಾಧ್ಯವಿಲ್ಲ. ಈ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಅಂತ್ಯಗೊಳ್ಳುತ್ತದೆ ಎಂದ ಅವರು, ಈ ವಿಷಯದ ಕುರಿತು ಹಿನ್ನಲೆ ನೀಡಲು ಬಯಸುವುದಾಗಿ ಹೇಳಿದರು.
ಬಳಿಕ ಅವರು ತಮ್ಮ ಮಾತು ಮುಂದುವರಿಸಿ ಮೋತಿಲಾಲ್ ನೆಹರು ಅವರು 1928 ರಲ್ಲಿ ಒಂದು ವರದಿ ಸಿದ್ಧಪಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಗೆ ಮಂಡಿಸಿದರು. ಅದರಲ್ಲಿ, ಅವರು 19 ಮೂಲಭೂತ ಹಕ್ಕುಗಳನ್ನು ಪಟ್ಟಿ ಮಾಡಿದ್ದರು. 1931ರಲ್ಲಿ ಸರ್ದಾರ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಇದು ಮಹಿಳೆಯರ ಸಮಾನ ಹಕ್ಕುಗಳು ನಮ್ಮ ದೇಶದ ರಾಜಕೀಯದ ಭಾಗವಾಗುವುದರ ಆರಂಭವನ್ನು ಗುರುತಿಸುತ್ತದೆ ಎಂದರು.
ನಾಸಿಕ್ ಟಿಸಿಎಸ್ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ, ಮತಾಂತರದ ಹಗರಣ: ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್
ಆಗ ಒಂದು ಮತ, ಒಬ್ಬ ನಾಗರಿಕ, ಒಂದು ಮೌಲ್ಯ ಎಂಬ ತತ್ತ್ವವನ್ನು ಜಾರಿಗೆ ತರಲಾಗಿದ್ದು, ಇದರಿಂದ ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳಲ್ಲಿ ಸುಮಾರು 150 ವರ್ಷಗಳ ಕಾಲ ಈ ಹಕ್ಕಿಗಾಗಿ ಕಾಯಬೇಕಾಯಿತು ಮತ್ತು ಹೋರಾಡಬೇಕಾಯಿತು. ನಮ್ಮಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವುದು ದೇಶದ ರಾಜಕೀಯ ವ್ಯವಸ್ಥೆಯು ವಿಶ್ವದಲ್ಲೇ ಒಂದು ವಿಶಿಷ್ಟ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ಪುರಸಭೆಗಳು ಮತ್ತು ಪಂಚಾಯತ್‌ಗಳಲ್ಲಿ ಶೇ. 33 ರಷ್ಟು ಮೀಸಲಾತಿಯನ್ನು ಮೊದಲು ಕಾಂಗ್ರೆಸ್ ಸರ್ಕಾರವು ಪರಿಚಯಿಸಿತ್ತು. ಇದನ್ನು ನಮ್ಮ ತಂದೆ ಮತ್ತು ಪ್ರಧಾನಿ ರಾಜೀವ್ ಗಾಂಧಿ ಅವರ ನೇತೃತ್ವದಲ್ಲಿ ಜಾರಿಗೆ ತರಲಾಯಿತು ಎಂದ ಅವರು, ಪ್ರಧಾನಿ ಮೋದಿ ಅವರು ಈ ಹಿಂದೆ ಮಹಿಳಾ ಕೋಟಾವನ್ನು ವಿರೋಧಿಸಿದ್ದರು. ಇದರಿಂದ ತೊಂದರೆ ಅನುಭವಿಸಿದರು ಎಂದರು.