ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಕ್ರೋಚ್ ಜನತಾ ಪಕ್ಷದ ಇನ್‌ಸ್ಟಾಗ್ರಾಮ್‌ ಖಾತೆ ಹ್ಯಾಕ್: ಸಂಸ್ಥಾಪಕ ಅಭಿಜೀತ್ ದಿಪ್ಕೆ ಹೇಳಿದ್ದೇನು?

CJP Instagram account hacked: ದೇಶದ ಯುವಜನರಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಕಾಕ್‌ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಹೊಸ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದ್ದು, ಅದನ್ನು ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ದಿಪ್ಕೆ ಹೇಳಿದ್ದಾರೆ.

ಕಾಕ್ರೋಚ್ ಜನತಾ ಪಕ್ಷದ ಇನ್‌ಸ್ಟಾಗ್ರಾಮ್‌ ಖಾತೆ ಹ್ಯಾಕ್

ನವದೆಹಲಿ, ಮೇ 23: ದೇಶದ ಯುವಜನರಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ (Abhijeet Dipke) ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಹೊಸ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್‌ (Instagram) ಖಾತೆ ಹ್ಯಾಕ್ ಆಗಿದ್ದು, ಪಕ್ಷದ ಬ್ಯಾಕಪ್ ಇನ್‌ಸ್ಟಾಗ್ರಾಂ ಖಾತೆಯನ್ನೂ ತಾತ್ಕಾಲಿಕವಾಗಿ ತೆಗೆದುಹಾಕಲಾಗಿತ್ತು ಎಂದು ದಿಪ್ಕೆ ತಿಳಿಸಿದ್ದಾರೆ. ಆದರೆ ಕೆಲವು ಗಂಟೆಗಳ ಬಳಿಕ ಆ ಖಾತೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್‌ ಖಾತೆ ಹ್ಯಾಕ್ ಆಗಿದ್ದು, ಅದನ್ನು ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ದಿಪ್ಕೆ ಹೇಳಿದ್ದಾರೆ. ದಿಪ್ಕೆ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಮೆಟಾದ ಖಾತೆ ಮರುಪಡೆಯುವ ಪ್ರಕ್ರಿಯೆಯ ಮೂಲಕ ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಂ ಖಾತೆಯನ್ನು ಮರಳಿ ಪಡೆಯಲು ಅವರು ಹಲವು ಬಾರಿ ಪ್ರಯತ್ನಿಸಲಾಗಿದೆ. ಆದರೆ ಪ್ರತಿಯೊಂದು ಸಲವೂ ಆ ಪ್ರಯತ್ನ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಈಗಲೇ ಮರುಪಡೆಯಿರಿ ಆಯ್ಕೆಯನ್ನು ಕ್ಲಿಕ್ ಮಾಡಿದಾಗಲೆಲ್ಲಾ ನಿಮ್ಮ ಸುರಕ್ಷತೆಗಾಗಿ ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಲಾಕ್ ಮಾಡಲಾಗಿದೆ. ನಿಮ್ಮ ಖಾತೆಯನ್ನು ಮರುಪಡೆಯಲು, ನೀವು ನಿಮ್ಮ ಗುರುತನ್ನು ಪರಿಶೀಲಿಸಬೇಕು ಮತ್ತು ಹೊಸ ಪಾಸ್‌ವರ್ಡ್ ಅನ್ನು ರಚಿಸಬೇಕು ಎಂಬ ಸಂದೇಶ ಕಾಣುತ್ತಿದೆ ಎಂದು ಹೇಳಿದ್ದಾರೆ. ಹಲವು ಬಾರಿ ಮರುಪಡೆಯಲು ಆಯ್ಕೆಯನ್ನು ಕ್ಲಿಕ್ ಮಾಡಿದಾಗಲೆಲ್ಲಾ ಅದೇ ಸಂದೇಶ ಮತ್ತೆ ಮತ್ತೆ ಕಾಣಿಸಿಕೊಂಡಿದೆ. ಹೀಗಾಗಿ ಖಾತೆಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

Cockroach Janta Party: ದೇಶದ ಗಡಿ ದಾಟಿದ ಜಿರಳೆ; ಪಾಕಿಸ್ತಾನಕ್ಕೂ ತಲುಪಿದ ಭಾರತದ ಕಾಕ್ರೋಚ್‌ ಚಳುವಳಿ

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಸಿಜೆಪಿಯ ಇನ್ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತನ್ನ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿದೆ. ಬ್ಯಾಕಪ್ ಖಾತೆಯನ್ನು ಸಹ ತೆಗೆದುಹಾಕಲಾಗಿದೆ ಎಂದು ಹೇಳಿ ಪೋಸ್ಟ್ ಮಾಡಿದರು.

ನಮ್ಮ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಪ್ರಸ್ತುತ ತೆರೆಯಲು ಸಾಧ್ಯವಾಗುತ್ತಿಲ್ಲ. ಇದರ ನಂತರ ಮಾಡಿದ ಯಾವುದೇ ಪೋಸ್ಟ್ ಜಿರಳೆ ಜನತಾ ಪಕ್ಷದ ಅಧಿಕೃತ ಹೇಳಿಕೆಯಲ್ಲ ಎಂಬುದಾಗಿ ಗಮನಿಸಿ ಎಂದು ದಿಪ್ಕೆ ಎಕ್ಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ, ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಯನ್ನು 30 ವರ್ಷದ ಯುವಕ ಅಭಿಜೀತ್‌ ದಿಪ್ಕೆ ಎಂಬುವವರು ಸ್ಥಾಪಿಸಿದ್ದಾರೆ. ಪಕ್ಷ ಸ್ಥಾಪನೆಯಾದ ಕೇವಲ 5 ದಿನಗಳಲ್ಲಿ ಇದು ಇನ್ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 10 ಮಿಲಿಯನ್‌ ಫಾಲೋವರ್ಸ್‌ಗಳನ್ನು ಗಳಿಸಿದೆ. ಬಿಜೆಪಿಗಿಂತಲೂ ಹೆಚ್ಚು ಫಾಲೋವರ್ಸ್ ಈ ಪಕ್ಷಕ್ಕೆ ಸಿಕ್ಕಿರುವುದು ವಿಶೇಷ. ಮಿಲೇನಿಯಲ್ ಹಾಗೂ ವಿಶೇಷವಾಗಿ ಜೆನ್ ಝೀ ಪೀಳಿಗೆಯು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.