ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Congress v/s BJP: ಭಾರತದಲ್ಲಿ ನೇಪಾಳದಂತ ಪರಿಸ್ಥಿತಿ; ಕಾಂಗ್ರೆಸ್ ನಾಯಕರ ಹೇಳಿಕೆಗೆ ಬಿಜೆಪಿ ಆಕ್ರೋಶ

ಭಾರತದಲ್ಲಿ ನೇಪಾಳದಂತ ಪರಿಸ್ಥಿತಿ ಇದೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಇದು ಅಪಾಯಕಾರಿ ಮತ್ತು ರಾಷ್ಟ್ರ ವಿರೋಧಿ ಎಂದು ಹೇಳಿದೆ. ಕಾಂಗ್ರೆಸ್ ನಾಯಕ ಉದಿತ್ ರಾಜ್ ಹೇಳಿಕೆ ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಈ ಕುರಿತು ಎಕ್ಸ್‌ನಲ್ಲಿ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದೆ.

ನವದೆಹಲಿ: ಸಂವಿಧಾನದ (Constitution) ಬಲವಿಲ್ಲದೆ ಇದ್ದರೆ ಭಾರತವು ನೇಪಾಳದಂತಹ (Nepal) ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ (Congress leader Udit Raj) ಹೇಳಿದ್ದು, ಬಿಜೆಪಿಯಿಂದ (BJP) ತೀವ್ರ ಟೀಕೆಗೆ ಗುರಿಯಾಗಿದೆ. ಭಾರತದ ಪರಿಸ್ಥಿತಿಯನ್ನು ನೇಪಾಳದಲ್ಲಿನ ಇತ್ತೀಚಿನ ಪ್ರಕ್ಷುಬ್ಧತೆಯೊಂದಿಗೆ ಜೋಡಿಸುವ ಕಾಂಗ್ರೆಸ್ ನಾಯಕರ ಹೇಳಿಕೆಗಳು ಅಪಾಯಕಾರಿ ಮತ್ತು ರಾಷ್ಟ್ರ ವಿರೋಧಿ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಈ ಕುರಿತು ಪರ ವಿರೋಧವಾದ ಹೇಳಿಕೆಗಳು ಸಾಮಾಜಿಕ ಮಾಧ್ಯಮವಾದ (Social Media) ಎಕ್ಸ್ (x)ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಉದಿತ್ ರಾಜ್, ʼʼಜನರು ಭಾರತದ ಪರಿಸ್ಥಿತಿಯನ್ನು ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿನ ಇತ್ತೀಚಿನ ಏರಿಳಿತಗಳೊಂದಿಗೆ ಹೋಲಿಸುತ್ತಿದ್ದಾರೆ. ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರ ಹೀಗೆ ಕೆಲವು ಸಂದರ್ಭಗಳು ಕೆಟ್ಟದಾಗಿದ್ದರೂ ಭಾರತದ ಪ್ರಜಾಪ್ರಭುತ್ವವು ಕಾಂಗ್ರೆಸ್‌ನಿಂದ ಆಳವಾಗಿ ಬೇರು ಬಿಟ್ಟಿದೆ. ಇದು ಅಂತಹ ಅಶಾಂತಿಯನ್ನು ಅಸಂಭವವಾಗಿಸಿದೆʼʼ ಎಂದು ಅವರು ತಿಳಿಸಿದ್ದಾರೆ.



ʼʼನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಸಾರ್ವಜನಿಕರು ಅಧಿಕಾರವನ್ನು ಹೇಗೆ ಬೇರು ಸಹಿತ ಕಿತ್ತುಹಾಕಿದ್ದಾರೆ ಎಂಬುದರ ಬಗ್ಗೆ ಜನರು ಚರ್ಚಿಸುತ್ತಿದ್ದಾರೆ. ಭಾರತದಲ್ಲಿ ಅಂತಹದ್ದೇನಾದರೂ ಆಗಲು ಸಾಧ್ಯವಿಲ್ಲವೇ? ಕೆಲವರು ಅದು ಸಂಭವಿಸುವ ಸಾಧ್ಯತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವವಾಗಿ, ಸಂದರ್ಭಗಳು ಒಂದೇ ಆಗಿವೆ. ಕೆಲವು ಸಂದರ್ಭಗಳಲ್ಲಿ ಇನ್ನೂ ಹೆಚ್ಚು. ಆದರೆ ನಮ್ಮ ಸಂವಿಧಾನವು ನಮ್ಮನ್ನು ಹಾಗೆ ಮಾಡದಂತೆ ತಡೆಯುತ್ತದೆ. ನಮ್ಮ ಪ್ರಜಾಪ್ರಭುತ್ವದ ಬೇರುಗಳು ತುಂಬಾ ಆಳವಾಗಿವೆ, ಅವುಗಳನ್ನು ಕಾಂಗ್ರೆಸ್ ನೆಟ್ಟಿದೆʼʼ ಎಂದು ಅವರು ತಿಳಿಸಿದ್ದಾರೆ.

ತಮ್ಮ ಹೇಳಿಕೆಯ ಬಗ್ಗೆ ಮಾಧ್ಯಮದ ಜತೆ ಮಾತನಾಡಿದ ರಾಜ್, ʼʼಬಿಜೆಪಿ ಸಂವಿಧಾನವನ್ನು ಬದಲಾಯಿಸಲು ಬಯಸಿತು. ಆದರೆ ಸಾಂವಿಧಾನಿಕ ಸಂಸ್ಥೆಗಳು ಪ್ರಬಲವಾಗಿರುವುದರಿಂದ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ ನೇಪಾಳದಂತಹ ಪರಿಸ್ಥಿತಿ ಇಲ್ಲೂ ಸಂಭವಿಸುತ್ತಿತ್ತುʼʼ ಎಂದು ಹೇಳಿದರು.

ಉದಿತ್ ರಾಜ್ ಅವರ ಈ ಹೇಳಿಕೆಗಳನ್ನು ಬಿಜೆಪಿ ಖಂಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಕ್ಷದ ವಕ್ತಾರ ಸಿ.ಆರ್. ಕೇಶವನ್, ಇದು ಅಪಾಯಕಾರಿ ಎಂದು ಕರೆದರು. ಕಾಂಗ್ರೆಸ್ ಅಶಾಂತಿಯನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದರು.

ಈ ಹೇಳಿಕೆಗಳು 1975ರಲ್ಲಿ ಪ್ರಜಾಪ್ರಭುತ್ವ ಹಕ್ಕುಗಳನ್ನು ಅಮಾನತುಗೊಳಿಸಲು ಕಾರಣವಾದ ಅದೇ ತುರ್ತು ಪರಿಸ್ಥಿತಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದರು. ಹಿರಿಯ ಕಾಂಗ್ರೆಸ್ ನಾಯಕರ ಈ ಅಪಾಯಕಾರಿ ಹೇಳಿಕೆಗಳು ಸ್ಪಷ್ಟವಾಗಿ ರಾಷ್ಟ್ರ ವಿರೋಧಿ ಮತ್ತು ಉದ್ದೇಶಪೂರ್ವಕವಾಗಿ ಅಶಾಂತಿಯನ್ನು ಪ್ರಚೋದಿಸುತ್ತಿವೆ. ಹಿಂದಿನ ಮತ್ತು ವರ್ತಮಾನದ ಕಾಂಗ್ರೆಸ್ ನಾಯಕತ್ವವು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಯಾವಾಗಲೂ ದೊಡ್ಡ ಬೆದರಿಕೆಯಾಗಿದೆ. 1975ರಲ್ಲಿ ಕಾಂಗ್ರೆಸ್ ನಮ್ಮ ಸಂವಿಧಾನವನ್ನು ಕೊಲೆ ಮಾಡಿತು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Kirk Murder case: ಚಾರ್ಲಿ ಕಿರ್ಕ್ ಹತ್ಯೆ: ಆರೋಪಿಯ ಚಿತ್ರ ರಿಲೀಸ್‌ ಮಾಡಿದ ಎಫ್‌ಬಿಐ

ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದರು. ಭಾರತದಲ್ಲಿ ನೇಪಾಳದಂತಹ ಅಶಾಂತಿಯ ಬಗ್ಗೆ ಊಹಾಪೋಹ ಅಸಂಬದ್ಧ ಎಂದು ಅವರು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author