ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶ್ರೀನಗರ ಹೆದ್ದಾರಿಯಲ್ಲಿ ಭೀಕರ ಅಪಘಾತ; CRPF ಯೋಧ ಸೇರಿ ನಾಲ್ವರು ಬಲಿ

Road Accident: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸಿಆರ್‌ಪಿಎಫ್ ಯೋಧ ಸೇರಿ ನಾಲ್ವರು ಸಾವು ಮೃತಪಟ್ಟಿದ್ದಾರೆ. . ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಶಾರದಾ ಮಾತಾ ಬಳಿ ಖೈರಿ ಪ್ರದೇಶದಲ್ಲಿ ಉಧಂಪುರ ಕಡೆಗೆ ಹೋಗುತ್ತಿದ್ದ ಒಂದು ಬಸ್ ಅತಿ ವೇಗದಲ್ಲಿ ಚಲಿಸುತ್ತಿತ್ತು.

ಸಂಗ್ರಹ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಉಧಂಪುರ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸಿಆರ್‌ಪಿಎಫ್ ಯೋಧ ಸೇರಿ ನಾಲ್ವರು ಸಾವು ಮೃತಪಟ್ಟಿದ್ದಾರೆ. . ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಶಾರದಾ ಮಾತಾ ಬಳಿ ಖೈರಿ ಪ್ರದೇಶದಲ್ಲಿ ಉಧಂಪುರ ಕಡೆಗೆ ಹೋಗುತ್ತಿದ್ದ ಒಂದು ಬಸ್ ಅತಿ ವೇಗದಲ್ಲಿ ಚಲಿಸುತ್ತಿತ್ತು. ರಸ್ತೆಯಲ್ಲಿ ಚಲಿಸುತ್ತಿದ್ದ ಮೋಟಾರ್ ಸೈಕಲ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯಿಂದ ಮೋಟಾರ್ ಸೈಕಲ್ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೆಕ್ಯಾನಿಕ್ ಮತ್ತು ಲೋಡ್ ಕ್ಯಾರಿಯರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ತುರ್ತು ಕಿಟಕಿಯಿಂದ ಹೊರಗೆ ಎಸೆಯಲ್ಪಟ್ಟು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಬಲಿಯಾದವರಲ್ಲಿ ಒಬ್ಬ ಸಿಆರ್‌ಪಿಎಫ್ ಯೋಧ ಸೇರಿದ್ದಾರೆ. ರಜೆಯ ಮೇಲೆ ಮನೆಗೆ ಪ್ರಯಾಣಿಸುತ್ತಿದ್ದ ಈ ಯೋಧ ಉಧಂಪುರ ಕಡೆಗೆ ಹೋಗುತ್ತಿದ್ದ ಬಸ್‌ನಲ್ಲಿದ್ದರು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಬಸ್‌ನ ಹಲವು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಜಮ್ಮು-ಶ್ರೀನಗರ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು, ರಸ್ತೆಯ ಸ್ಥಿತಿ ಮತ್ತು ವಾಹನಗಳ ಸಾಂದ್ರತೆಯಿಂದಾಗಿ ಈ ಭಾಗದಲ್ಲಿ ದುರಂತಗಳು ಪದೇಪದೇ ಸಂಭವಿಸುತ್ತಿವೆ.

: ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ-ಇಬ್ಬರು ಸ್ಥಳದಲ್ಲೇ ಸಾವು

ಕಾಶ್ಮೀರದ ದೋಡಾದಲ್ಲಿ ಕಳೆದ ವಾರ ಸೇನಾ ವಾಹನವು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು, 10 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಘಟನೆಯಲ್ಲಿ ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಕಾರ್ಯಾಚರಣೆಗಾಗಿ ತೆರಳುತ್ತಿದ್ದ ಕ್ಯಾಸ್ಪಿರ್ ಎಂಬ ಗುಂಡು ನಿರೋಧಕ ಸೇನಾ ವಾಹನವು ಖನ್ನಿ ಮೇಲ್ಭಾಗದಲ್ಲಿ ಭದೇರ್ವಾ-ಚಂಬಾ ಅಂತರರಾಜ್ಯ ರಸ್ತೆಯಿಂದ ತೆರಳುತ್ತಿದ್ದಾಗ ಕಮರಿಗೆ ಉರುಳಿ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 17 ಯೋಧರನ್ನು ಹೊತ್ತೊಯ್ಯುತ್ತಿದ್ದ ವಾಹನವು ಚಾಲಕನ ನಿಯಂತ್ರಣ ಕಳೆದುಕೊಂಡು 200 ಅಡಿ ಆಳದ ಕಂದಕಕ್ಕೆ ಬಿದ್ದಿತ್ತು.