ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ಬಾಂಬ್‌ ತಯಾರಿಕೆಗೆ ಹಿಟ್ಟಿನ ಗಿರಣಿ ಬಳಕೆ; ಸ್ಫೋಟಕ್ಕೆ ಬಳಸುತ್ತಿದ್ದ ವಸ್ತುಗಳು ಹೇಗೆ ತಯಾರಾಗ್ತಿತ್ತು?

Red Fort Blast: ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಬಂಧಿತ ಉಗ್ರರಿಂದ ಎನ್‌ಐಎ ಒಂದೊಂದೇ ಮಾಹಿತಿಯನ್ನು ಕಲೆ ಹಾಕುತ್ತಿದೆ. ಆರೋಪಿ ಮುಝಮ್ಮಿಲ್ ಶಕೀಲ್ ಗನೈ ಸ್ಫೋಟಕಗಳಿಗೆ ರಾಸಾಯನಿಕಗಳನ್ನು ತಯಾರಿಸಲು ಹಿಟ್ಟಿನ ಗಿರಣಿಯನ್ನು ಬಳಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಬಾಂಬ್‌ ತಯಾರಿಕೆಗೆ ಹಿಟ್ಟಿನ ಗಿರಣಿ ಬಳಕೆ; ಉಗ್ರರ ಪ್ಲಾನ್‌ ಏನಿತ್ತು?

ಸ್ಫೋಟಕ್ಕೆ ಬಳಸಿದ ಹಿಟ್ಟಿನ ಗಿರಣಿ -

Vishakha Bhat
Vishakha Bhat Nov 21, 2025 3:07 PM

ನವದೆಹಲಿ: ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಬಂಧಿತ ಉಗ್ರರಿಂದ ಎನ್‌ಐಎ (NIA) ಒಂದೊಂದೇ ಮಾಹಿತಿಯನ್ನು ಕಲೆ ಹಾಕುತ್ತಿದೆ. ಆರೋಪಿ ಮುಝಮ್ಮಿಲ್ ಶಕೀಲ್ ಗನೈ ಸ್ಫೋಟಕಗಳಿಗೆ ರಾಸಾಯನಿಕಗಳನ್ನು ತಯಾರಿಸಲು ಹಿಟ್ಟಿನ ಗಿರಣಿಯನ್ನು ಬಳಸುತ್ತಿದ್ದ (Delhi Blast) ಎಂದು ಮೂಲಗಳು ತಿಳಿಸಿವೆ. ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ನಿವಾಸಿ ಗನೈಯನ್ನು ಈಗಾಗಲೇ ಬಂಧಿಸಲಾಗಿದೆ. ಈ ವೇಳೆ ಆತನ ಮನೆಯಿಂದ ಬಾಂಬ್‌ನ ರಾಸಾಯನಿಕಗಳನ್ನು ತಯಾರಿಸಲು ಬಳಸುತ್ತಿದ್ದ ಹಿಟ್ಟಿನ ಗಿರಣಿಯನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

ಫರಿದಾಬಾದ್‌ನಲ್ಲಿರುವ ತನ್ನ ಬಾಡಿಗೆ ಕೋಣೆಯಲ್ಲಿ ಹಿಟ್ಟಿನ ಗಿರಣಿಯನ್ನು ಬಳಸುತ್ತಿದ್ದ. ಯೂರಿಯಾವನ್ನು ಹಿಟ್ಟಿನ ಗಿರಣಿಯಲ್ಲಿ ಪುಡಿಮಾಡಿ ಅದನ್ನು ನುಣ್ಣಗೆ ಮಾಡುತ್ತಿದ್ದ. ನಂತರ ಅದನ್ನು ವಿದ್ಯುತ್ ಯಂತ್ರದಿಂದ ಸಂಸ್ಕರಿಸಿ ರಾಸಾಯನಿಕಗಳನ್ನು ತಯಾರಿಸುತ್ತಿದ್ದ ಎಂದು ತಿಳಿದು ಬಂದಿದೆ. ಆತನ ಮನೆಯಿಂದಲೇ ನವೆಂಬರ್ 9 ರಂದು ಪೊಲೀಸರು 360 ಕೆಜಿ ಅಮೋನಿಯಂ ನೈಟ್ರೇಟ್ ಮತ್ತು ಇತರ ಸ್ಫೋಟಕಗಳನ್ನು ವಶಪಡಿಸಿಕೊಂಡರು.

ವಿಚಾರಣೆಯ ಸಮಯದಲ್ಲಿ ಗನೈ, ಯೂರಿಯಾದಿಂದ ಅಮೋನಿಯಂ ನೈಟ್ರೇಟ್ ಅನ್ನು ಬೇರ್ಪಡಿಸಲು ಮತ್ತು ಸ್ಫೋಟಕಗಳನ್ನು ಸಂಸ್ಕರಿಸಲು ದೀರ್ಘಕಾಲದವರೆಗೆ ಹಿಟ್ಟಿನ ಗಿರಣಿಯನ್ನು ಬಳಸುತ್ತಿದ್ದೆ ಎಂದು ಹೇಳಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಡಾ. ಮುಜಮ್ಮಿಲ್ ಶಕೀಲ್ ಗನೈ, ಅನಂತನಾಗ್ ನ ಡಾ. ಅದೀಲ್ ಅಹ್ಮದ್ ರಾಥರ್, ಶೋಪಿಯಾನ್ ದ ಮುಫ್ತಿ ಇರ್ಫಾನ್ ಅಹ್ಮದ್ ವಾಗೆ ಮತ್ತು ಉತ್ತರ ಪ್ರದೇಶದ ಲಕ್ನೋ ದ ಡಾ. ಶಾಹೀನ್ ಸಯೀದ್‌ನನ್ನು ಗುರುವಾರ ಅಧಿಕಾರಿಗಳು ಬಂಧಿಸಿದ್ದಾರೆ.

Delhi Blast: ದೆಹಲಿ ಸ್ಫೋಟ ಪ್ರಕರಣ; ಹಮಾಸ್‌ ರೀತಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರರು!

ಡಾ. ಮುಜಮ್ಮಿಲ್ ಶಕೀಲ್ ಗನೈ ಮೊಬೈಲ್‌ನಿಂದಲೇ ಸುಮಾರು 200 ವೀಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂಲಗಳ ಪ್ರಕಾರ, ಇವುಗಳಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್, ಇತರ ಜೈಶ್ ಕಮಾಂಡರ್‌ಗಳು ಮತ್ತು ಐಸಿಸ್-ಸಂಬಂಧಿತ ಭಯೋತ್ಪಾದಕರು ಮಾಡಿದ ಭಾಷಣಗಳ ರೆಕಾರ್ಡಿಂಗ್‌ಗಳಿವೆ. ಇದು ಉಗ್ರಗಾಮಿ ಬೋಧನೆ ಎಂದು ತಿಳಿದು ಬಂದಿದೆ. 2022 ರಲ್ಲಿ, ಡಾ. ಮುಜಮ್ಮಿಲ್ ಮತ್ತು ಡಾ. ಉಮರ್ ಟರ್ಕಿಯಲ್ಲಿ ಜೈಶ್ ಕಮಾಂಡರ್‌ನ ಆದೇಶದ ಮೇರೆಗೆ ಸಿರಿಯನ್ ಐಸಿಸ್ ಭಯೋತ್ಪಾದಕ ಕಮಾಂಡರ್‌ನನ್ನು ಭೇಟಿಯಾಗಿದ್ದರು.ನವೆಂಬರ್ 10 ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಹೊರಗೆ ನಡೆದ ಮಾರಕ ಕಾರು ಸ್ಫೋಟ ಪ್ರಕರಣದ ನಾಲ್ವರು ಪ್ರಮುಖ ಆರೋಪಿಗಳನ್ನು ಪಟಿಯಾಲ ಹೌಸ್‌ನಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ 10 ದಿನಗಳ ಕಸ್ಟಡಿಗೆ ನೀಡಿದೆ.