ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ಬುರ್ಹಾನ್ ವಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ದೆಹಲಿ ಸ್ಫೋಟ ಮಾಡಿದ್ರಾ? ಬಂಧಿತ ಉಗ್ರರು ಹೇಳಿದ್ದೇನು?

Red Fort Blast: ದೆಹಲಿ ಸ್ಫೋಟದ ಕುರಿತು ಉಗ್ರರು ಒಂದೊದೇ ಮಾಹಿತಿಯನ್ನು ಎನ್‌ಐಎ ಎದುರು ಬಿಚ್ಚಿಡುತ್ತಿದ್ದಾರೆ. 2016 ರಲ್ಲಿ ಭದ್ರತಾ ಪಡೆಗಳಿಂದ ಭಯೋತ್ಪಾದಕ ಬುರ್ಹಾನ್ ವಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಆತ್ಮಹತ್ಯಾ ಬಾಂಬರ್‌ ಉಮರ್‌ ನಬಿ ಬಯಸಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಬುರ್ಹಾನ್ ವಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ದೆಹಲಿ ಸ್ಫೋಟ ಮಾಡಿದ್ರಾ?

ಡಾ. ಉಮರ್‌ ನಬಿ ಹಾಗೂ ಬುರ್ಹಾನ್ ವಾನಿ -

Vishakha Bhat
Vishakha Bhat Nov 25, 2025 6:02 PM

ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಕಾರ್ ಬಾಂಬ್ (Delhi Blast) ಸ್ಫೋಟಿಸಿದ ಭಯೋತ್ಪಾದಕ ವೈದ್ಯ ಉಮರ್ ಉನ್ ನಬಿ ( Dr Umar Nabi) ಕುರಿತು ಹಲವು ವಿಷಯಗಳು ಎನ್‌ಐಎ ತನಿಖೆಯಲ್ಲಿ ತಿಳಿದು ಬಂದಿದೆ. 2016 ರಲ್ಲಿ ಭದ್ರತಾ ಪಡೆಗಳಿಂದ ಭಯೋತ್ಪಾದಕ ಬುರ್ಹಾನ್ ವಾನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಅವನು ಬಯಸಿದ್ದ ಎಂದು ಮೂಲಗಳು ತಿಳಿಸಿವೆ. ಹರಿಯಾಣದ ಫರಿದಾಬಾದ್‌ನಲ್ಲಿ ಪತ್ತೆಯಾದ ವೈಟ್ ಕಾಲರ್ ಮಾಡ್ಯೂಲ್‌ನ ಹಲವಾರು ಬಂಧಿತ ಭಯೋತ್ಪಾದಕರಿಂದ ವಿಚಾರಣೆಯ ಸಮಯದಲ್ಲಿ ತನಿಖಾಧಿಕಾರಿಗಳು ವಿಷಯವನ್ನು ಸಂಗ್ರಹಿಸಿದ್ದಾರೆ.

ಆತ್ಮಹತ್ಯಾ ಬಾಂಬರ್‌ನ ಪಾತ್ರ ವಿವರಣೆಯನ್ನು ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಮುಜಾಮಿಲ್ ಶಕೀಲ್ ನೀಡಿದ್ದಾನೆ. ಬಂಧಿತ ಮತ್ತೊಬ್ಬ ಭಯೋತ್ಪಾದಕ ಶಂಕಿತ ಶಾಹೀನ್ ಸಯೀದ್ ಕೂಡ ವಿಚಾರಣೆಯ ಸಮಯದಲ್ಲಿ ನಿರ್ಣಾಯಕ ಮಾಹಿತಿಯನ್ನು ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದಕರು ತಮ್ಮ ಯೋಜನೆಗೆ 'ಆಪರೇಷನ್ ಎಮಿರ್' ಎಂದು ಹೆಸರಿಟ್ಟಿದ್ದು, ಅದರ ಮೇಲುಸ್ತುವಾರಿಯನ್ನು ಉಮರ್‌ ನೋಡಿಕೊಳ್ಳುತ್ತಿದ್ದ. ಉಮರ್ ಉನ್ ನಬಿ ಒಂಬತ್ತು ಭಾಷೆಗಳನ್ನು ತಿಳಿದಿದ್ದ. ಭಯೋತ್ಪಾದಕ ಘಟಕದಲ್ಲಿ ಅತ್ಯಂತ ವಿದ್ಯಾವಂತ ಮತ್ತು ಬುದ್ಧಿವಂತ ವ್ಯಕ್ತಿಯಾಗಿದ್ದು, ಇಡೀ ಗುಂಪು ಆತನ ಮಾತನ್ನು ಪಾಲಿಸುತ್ತಿತ್ತು ಎಂದು ತಿಳಿದು ಬಂದಿದೆ.

Delhi Blast: ದೆಹಲಿ ಸ್ಫೋಟ ಪ್ರಕರಣ; ಶೂನಲ್ಲಿ ಸ್ಫೋಟಕ ಇಟ್ಟು ಬ್ಲಾಸ್ಟ್‌ ಮಾಡಲು ನಡೆದಿತ್ತಾ ಪ್ಲಾನ್‌?

ಉಮರ್ ಉನ್ ನಬಿ ಆಗಾಗ್ಗೆ ವೈಟ್ ಕಾಲರ್ ಭಯೋತ್ಪಾದನಾ ಘಟಕದ ಇತರ ವೈದ್ಯರಿಗೆ ಭಾರತದಲ್ಲಿನ ವಾತಾವರಣವು ಮುಸ್ಲಿಮರಿಗೆ ಕೆಟ್ಟದಾಗಿದೆ, ಧ್ರುವೀಕರಣವು ಹೊಸ ಸಾಮಾನ್ಯವಾಗಿದೆ ಮತ್ತು ನರಮೇಧದ ಸಾಧ್ಯತೆಯಿದೆ ಎಂದು ಹೇಳುತ್ತಿದ್ದ ಎಂದು ಬಂಧಿತ ಉಗ್ರರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಿಂದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದರಿಂದ ಉಮರ್ ಉನ್ ನಬಿ ಭದ್ರತಾ ಪಡೆಗಳ ಬಗ್ಗೆ ತೀವ್ರ ದ್ವೇಷ ಬೆಳೆಸಿಕೊಂಡಿದ್ದ. 2023 ರಲ್ಲಿ ಹರಿಯಾಣದ ಮೇವಾತ್-ನುಹ್ ಪ್ರದೇಶದಲ್ಲಿ ನಡೆದ ಕೋಮು ಹಿಂಸಾಚಾರ ಮತ್ತು ಮಾರ್ಚ್ 2023 ರಲ್ಲಿ ಗೋರಕ್ಷಕರಿಂದ ಕೊಲೆಯಾಗಿದ್ದ 25 ವರ್ಷದ ನಾಸಿರ್ ಮತ್ತು 35 ವರ್ಷದ ಜುನೈದ್ ಹತ್ಯೆ ಕುರಿತು ಈತನಿಗೆ ಬೇಸರವಿತ್ತು ಎಂದು ಮತ್ತೊಬ್ಬ ಉಗ್ರ ಮುಜಾಮಿಲ್ ಶಕೀಲ್ ಹೇಳಿದ್ದಾನೆ.

ಜೈಶ್-ಸಂಬಂಧಿತ ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ಭಾರತದ ಹಲವಾರು ನಗರಗಳಲ್ಲಿ ಸ್ಫೋಟಗಳನ್ನು ನಡೆಸಲು ಯೋಜನೆ ರೂಪಿಸಿತ್ತು ಎಂದು ತಿಳಿದು ಬಂದಿದೆ. 10/11 ಸ್ಫೋಟದ ಹಿಂದಿನ ಪಿತೂರಿಯನ್ನು ತನಿಖಾಧಿಕಾರಿಗಳು ಡಿಕೋಡ್ ಮಾಡುತ್ತಿರುವಾಗ, ಭಯೋತ್ಪಾದಕ ಶಂಕಿತರಲ್ಲಿ ಒಬ್ಬ ಉಗ್ರ ತಮ್ಮ ಯೋಜನೆ ಕುರಿತು ಅಧಿಕಾರಿಗಳಿಗೆ ಹೇಳಿದ್ದಾನೆ. ಉಮರ್ ಮೊಹಮ್ಮದ್ ಸಹಚರ ಡಾ. ಮುಝಮ್ಮಿಲ್ ಶಕೀಲ್, ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸಿದ ವಿಚಾರಣೆಯ ಸಮಯದಲ್ಲಿ, ಸ್ಫೋಟಗಳಿಗೆ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿದ್ದೆವು ಎಂದು ತಿಳಿಸಿದ್ದಾನೆ.