ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Tragedy: ಕಾರು ದುರಂತ; ಹಸೆಮಣೆ ಏರಬೇಕಿದ್ದವನು ಹೆಣವಾಗಿ ಮನೆಗೆ ಬಂದ!

ಶನಿವಾರ(ಜ.18) ತಡರಾತ್ರಿ ದೆಹಲಿಯಲ್ಲಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲು ತೆರಳುತ್ತಿದ್ದ ಯುವಕನ್ನೊಬ್ಬ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡವಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

Delhi Tragedy

ನವದೆಹಲಿ: ಮುಂದಿನ ತಿಂಗಳು ಹಸೆಮಣೆ ಏರಬೇಕಿದ್ದ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಶನಿವಾರ(ಜ.18) ರಾತ್ರಿ ದೆಹಲಿಯಲ್ಲಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲು ತೆರಳುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡವಾಗಿ ಮೃತಪಟ್ಟಿದ್ದಾರೆ(Delhi Tragedy)

ಗಾಜಿಪುರದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮೃತ ವ್ಯಕ್ತಿ ಅನಿಲ್​​​ ಕಾರಿನೊಳಗೆ ಸುಟ್ಟು ಸಾವನ್ನಪ್ಪಿದ್ದಾರೆ.



ಘಟನೆಯ ಸ್ಥಳದ ದೃಶ್ಯಗಳು ವ್ಯಾಗನ್ R ಕಾರು ಸಂಪೂರ್ಣವಾಗಿ ಸುಟ್ಟುಹೋಗಿರುವುದನ್ನು ತೋರಿಸುತ್ತವೆ. ಚಾಲಕನ ಭಾಗ ಸುಟ್ಟು ಭಸ್ಮವಾಗಿದೆ. ಗ್ರೇಟರ್ ನೋಯ್ಡಾದ ನವಾಡ ನಿವಾಸಿಯಾಗಿರುವ ಅನಿಲ್​ ಫೆಬ್ರವರಿ 14 ರಂದು ಮದುವೆಯಾಗಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಹಸೆಮಣೆ ಏರಬೇಕಿದ್ದವನು ಸಾವಿನ ಮನೆಗೆ!

ಮೃತ ಅನಿಲ್‌ ಸಹೋದರ ನೀಡಿರುವ ಮಾಹಿತಿ ಪ್ರಕಾರ ಮಧ್ಯಾಹ್ನ ತನ್ನ ಮದುವೆಯ ಆಮಂತ್ರಣ ಪತ್ರಗಳನ್ನು ವಿತರಿಸಲು ಹೋಗಿದ್ದಾನೆ. "ಅವನು ತಡರಾತ್ರಿಯವರೆಗೆ ಹಿಂತಿರುಗದಿದ್ದಾಗ, ನಾವು ಅವನಿಗೆ ಕರೆ ಮಾಡಲು ಪ್ರಯತ್ನಿಸಿದೆವು ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. 11-11:30 ರ ಸುಮಾರಿಗೆ, ಅಪಘಾತ ಸಂಭವಿಸಿದೆ ಎಂದು ಪೊಲೀಸರು ನಮಗೆ ಕರೆ ಮಾಡಿದರು" ಎಂದು ಸುಮಿತ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

ಅನಿಲ್​ ಅವರ ಸೋದರ ಮಾವ ಯೋಗೇಶ್ ಅವರು ಈ ಕುರಿತು ಮಾತನಾಡಿದ್ದು "ನಾನು ಮತ್ತು ಅನಿಲ್ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಅನಿಲ್ ನನ್ನ ಸಹೋದರಿಯನ್ನು ಫೆಬ್ರವರಿ 14 ರಂದು ಮದುವೆಯಾಗಬೇಕಿತ್ತು. ನಿನ್ನೆ ರಾತ್ರಿ ಆತನ ಸಾವಿನ ವಿಷಯ ನಮಗೆ ತಿಳಿಯಿತು. ಕಾರಿಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ನಮಗೆ ಇನ್ನೂ ತಿಳಿದಿಲ್ಲ" ಎಂದು ಅವರು ಹೇಳಿದರು. ಬೆಂಕಿ ಹೊತ್ತಿಕೊಂಡಿರುವುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.