Hit And Run: ಹಿಟ್ ಆಂಡ್ ರನ್ ಪ್ರಕರಣ- ನೆರೆಮನೆಯ ವ್ಯಕಿಯಿಂದಲೇ ಸಾವಿಗೀಡಾದ 2 ವರ್ಷದ ಕಂದಮ್ಮ
Hit And Run: ಇತ್ತೀಚಿಗೆ ಮುಂಬೈನ ವರ್ಲಿ ಮತ್ತು ಪುಣೆಯಲ್ಲಿ 'ಹಿಟ್ ಅಂಡ್ ರನ್' ಪ್ರಕರಣಗಳು ವರದಿಯಾಗಿತ್ತು. ಇದೀಗ ರಾಜಧಾನಿ ದೆಹಲಿಯಲ್ಲಿ ನಡೆದ ಹಿಟ್ ಅಂಡ್ ರನ್ ಘಟನೆ ಬೆಳಕಿಗೆ ಬಂದಿವೆ. ಈ ಘಟನೆಯಲ್ಲಿ ಎರಡು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಕಾರಿನ ಮಾಲೀಕನ ಮಗ ಕಾರು ಚಲಾಯಿಸುತ್ತಿದ್ದು, ಕಾರು ಬಾಲಕಿಗೆ ಡಿಕ್ಕಿ ಹೊಡೆದರೂ ಚಾಲಕ ಕಾರನ್ನು ನಿಲ್ಲಿಸದೇ ವೇಗವಾಗಿ ಸ್ಥಳದಿಂದ ಪರಾರಿಯಾಗಿದ್ದಾನೆ.


ದೆಹಲಿ: ಭಾರತದಲ್ಲಿ ಹಿಟ್ ಆಂಡ್ ರನ್(Hit And Run) ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಇತ್ತೀಚಿಗೆ ಪುಣೆಯಲ್ಲಿ ಓರ್ವ ಕುಡಿದ ಮತ್ತಿನಲ್ಲಿ ಕಾರು ಚಾಲಕನೊಬ್ಬ ಹಾಲು ವಿತರಕನ ಸ್ಕೂಟಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದ. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು. ಹಿಮಾಚಲ ಪ್ರದೇಶದಲ್ಲಿಯೂ ಇಂತಹುದೇ ಒಂದು ಘಟನೆ ನಡೆದಿತ್ತು. ಈ ಕರಾಳ ಘಟನೆಗಳ ನೆನಪು ಮಾಸುವ ಮುನ್ನವೇ, ದೆಹಲಿಯ ಪಹಾರ್‌ಗಂಜ್(Delhi's Paharganj) ಪ್ರದೇಶದಲ್ಲಿ ನೆರೆಮನೆಯ ವ್ಯಕ್ತಿಯೇ ಎರಡು ವರ್ಷದ ಬಾಲಕಿಯ(Two-year-old girl) ಜೀವ ಬಲಿ ಪಡೆದ ಘಟನೆ ನಡೆದಿದೆ. ಭಾನುವಾರ ಸಂಜೆ ಸುಮಾರು 6.15ಕ್ಕೆ ಈ ಘಟನೆ ನಡೆದಿದ್ದು, ಆಟವಾಡುತ್ತಿದ್ದ ಮಗು ಆಸ್ಪತ್ರೆಯಲ್ಲಿ ಶವವಾಗಿ ಬಿದ್ದಿರುವುದನ್ನು ನೋಡಿ ಪೋಷಕರು ಕಣ್ಣೀರಿಡುತ್ತಿದ್ದಾರೆ.
ಪೊಲೀಸರ ಪ್ರಕಾರ, ಬಾಲಕಿಯ ನೆರೆಮನೆಯವರ ಕಾರು ಬಾಲಕಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಮಾಲೀಕನ ಮಗ ಅದನ್ನು ಚಲಾಯಿಸುತ್ತಿದ್ದ. ಕಾರು ಬಾಲಕಿಗೆ ಡಿಕ್ಕಿ ಹೊಡೆದರೂ ಚಾಲಕ ಕಾರನ್ನು ನಿಲ್ಲಿಸದೇ ವೇಗವಾಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅಷ್ಟರಲ್ಲಿ ಸ್ಥಳೀಯರೆಲ್ಲರೂ ಬಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದ ತೀವ್ರವಾಗಿ ಗಾಯಗೊಂಡ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 281 (ನಿರ್ಲಕ್ಷ್ಯದ ಚಾಲನೆ) ಮತ್ತು 106(1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಶೌಚಾಲಯವನ್ನೇ ಮನೆಯನ್ನಾಗಿ ಮಾಡಿಕೊಂಡ ಯುವತಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ಹಿಟ್ ಆಂಡ್ ರನ್ ಪ್ರಕರಣದಲ್ಲಿ ಶಿಕ್ಷೆ ಏನು?
2023ರ ಭಾರತೀಯ ನ್ಯಾಯ ಸಂಹಿತೆ ಪ್ರಕಾರ, ಹಿಟ್ ಆಂಡ್ ರನ್ ಪ್ರಕರಣದಲ್ಲಿ ಭಾಗಿಯಾದವರಿಗೆ ಸೆಕ್ಷನ್ 106(2) ಅಡಿಯಲ್ಲಿ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು. ಒಂದು ವೇಳೆ ಅಪಘಾತವಾಗಿರುವುದನ್ನು ಪೊಲೀಸರಿಗೆ ತಿಳಿಸಿದ್ದಲ್ಲಿ ಸೆಕ್ಷನ್ 106(1)ರ ಅಡಿಯಲ್ಲಿ ಐದು ವರ್ಷ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ದೆಹಲಿಯ ಪಹಾರ್‌ಗಂಜ್ ಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಆರೋಪಿಯು ಸ್ಥಳದಿಂದ ಪರಾರಿಯಾದರೂ, ಪೊಲೀಸರಿಗೆ ಮಾಹಿತಿ ನೀಡಿದ ಕಾರಣಕ್ಕೆ ಆತನ ಮೇಲೆ ಸೆಕ್ಷನ್ 106(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೆಕ್ಷನ್ 106(2) ಮತ್ತು ಸೆಕ್ಷನ್ 106(1) ರ ಅಡಿಯಲ್ಲಿ ಕೇವಲ ಜೈಲು ಶಿಕ್ಷೆಯಲ್ಲದೆ, ದಂಡವನ್ನೂ ವಿಧಿಸಲು ಭಾರತೀಯ ನ್ಯಾಯ ಸಂಹಿತೆ ಅವಕಾಶವನ್ನು ನೀಡುತ್ತದೆ. ಈ ಹಿಂದೆ ಇದ್ದ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ, ಹಿಟ್ ಆಂಡ್ ರನ್ ಪ್ರಕರಣಗಳಿಗೆ ದಂಡ ಮತ್ತು 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಭಾರತೀಯ ನ್ಯಾಐ ಸಂಹಿತೆ ಜಾರಿಯಾದ ಬಳಿಕ, ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ.