ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ಷೇತ್ರ ಪುನರ್ವಿಂಗಡಣೆ ಮಸೂದೆ: ಉತ್ತರ ಪ್ರದೇಶ ವಿಧಾನಸಭೆ ಬಲ 605ಕ್ಕೆ ಏರಿಕೆ ಸಾಧ್ಯತೆ; ದೇಶದಲ್ಲೇ ಅತಿ ದೊಡ್ಡ ಸದನವಾಗಲಿರುವ ಯುಪಿ!

Delimitation Bill: ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸಜ್ಜಾಗಿದ್ದು, ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಸಂಸದರಿಗೆ ವಿತರಿಸಲಾಗಿರುವ ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026ರ ಅನ್ವಯ, 2029ರ ಕ್ಷೇತ್ರ ಪುನರ್ವಿಂಗಡಣೆಯ ನಂತರ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರ ಸಂಖ್ಯೆ 605ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.

ಸಂಗ್ರಹ ಚಿತ್ರ

ನವದೆಹಲಿ: ಕ್ಷೇತ್ರ ಪುನರ್ವಿಂಗಡಣೆ (Delimitation Bill) ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸಜ್ಜಾಗಿದ್ದು, ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಸಂಸದರಿಗೆ ವಿತರಿಸಲಾಗಿರುವ ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026ರ ಅನ್ವಯ, 2029ರ ಕ್ಷೇತ್ರ ಪುನರ್ವಿಂಗಡಣೆಯ ನಂತರ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರ ಸಂಖ್ಯೆ 605ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ಜಾರಿಯಾದಲ್ಲಿ 600ಕ್ಕೂ ಹೆಚ್ಚು ಶಾಸಕರನ್ನು ಹೊಂದಿರುವ ದೇಶದ ಏಕೈಕ ಹಾಗೂ ಅತಿ ದೊಡ್ಡ ವಿಧಾನಸಭೆಯಾಗಿ ಉತ್ತರ ಪ್ರದೇಶ ಹೊರಹೊಮ್ಮಲಿದೆ.

ಶುಕ್ರವಾರ ಸಂಸದರಿಗೆ ಹಂಚಿಕೆಯಾದ ಈ ಮಸೂದೆಯಲ್ಲಿ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಸ್ಥಾನಗಳನ್ನು ಏಕರೂಪವಾಗಿ ಶೇ. 50ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಭಾರತೀಯ ಸಂವಿಧಾನದ 170ನೇ ವಿಧಿಯ ಪ್ರಕಾರ, ಯಾವುದೇ ರಾಜ್ಯ ವಿಧಾನಸಭೆಯ ಗರಿಷ್ಠ ಸದಸ್ಯರ ಸಂಖ್ಯೆ 500ಕ್ಕೆ ಸೀಮಿತವಾಗಿದೆ. ಹೊಸ ಮಸೂದೆಯು ಸಂವಿಧಾನದ 170ನೇ ವಿಧಿಯ (1)ನೇ ಕಲಂಗೆ ತಿದ್ದುಪಡಿ ತರುವ ಮೂಲಕ ಈ ಗರಿಷ್ಠ ಮಿತಿಯನ್ನು 500ರಿಂದ 650ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ. ಇದರೊಂದಿಗೆ ಸಂವಿಧಾನದ 334 ಮತ್ತು 334ಎ ವಿಧಿಗಳ ತಿದ್ದುಪಡಿಯ ಮೂಲಕ ಶಾಸಕಾಂಗಗಳ ಬಲವನ್ನು ಶೇ. 50ರಷ್ಟು ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ 28 ಜಿ.ಪಂ ಕ್ಷೇತ್ರಗಳು, ತಾ.ಪಂ ಕ್ಷೇತ್ರಗಳ ಮೀಸಲಾತಿ ಅಧಿಸೂಚನೆ ಹೊರಡಿಸಿದ ಸರ್ಕಾರ; ರಾಜಕೀಯ ಚಟುವಟಿಕೆಗಳಿಗೆ ಮತ್ತಷ್ಟು ವೇಗ

ಪ್ರಸ್ತುತ 403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವು ಶೇ. 50ರಷ್ಟು ಏರಿಕೆಯ ಸೂತ್ರದಡಿ 605 ಸ್ಥಾನಗಳನ್ನು ಪಡೆಯಲಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಮಂಡನೆಯಾಗಿ ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾಗಿದ್ದ ಸಂವಿಧಾನ (131ನೇ ತಿದ್ದುಪಡಿ) ಮಸೂದೆಯಲ್ಲಿ 500 ಸ್ಥಾನಗಳ ಗರಿಷ್ಠ ಮಿತಿಯನ್ನು ಬದಲಾಯಿಸಿರಲಿಲ್ಲ. ಆ ಮಿತಿಯನ್ನು ಬದಲಾಯಿಸದಿದ್ದರೆ ಉತ್ತರ ಪ್ರದೇಶದ ಸ್ಥಾನಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತಿರಲಿಲ್ಲ ಅಥವಾ ರಾಜ್ಯವನ್ನು ವಿಭಜಿಸಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು ಎಂದು ವರದಿಗಳು ವಿಶ್ಲೇಷಿಸಿವೆ. ಈಗ ಗರಿಷ್ಠ ಮಿತಿಯನ್ನು 650ಕ್ಕೆ ಏರಿಸಿರುವುದರಿಂದ ರಾಜ್ಯವನ್ನು ವಿಭಜಿಸದೆಯೇ 605 ಶಾಸಕರನ್ನು ಹೊಂದಲು ದಾರಿ ಸುಗಮವಾಗಿದೆ. ಅಲ್ಲದೆ, ಪುನರ್ವಿಂಗಡಣೆಯ ಬಳಿಕ ಉತ್ತರ ಪ್ರದೇಶದ ಲೋಕಸಭಾ ಸ್ಥಾನಗಳ ಸಂಖ್ಯೆಯೂ ಈಗಿರುವ 80ರಿಂದ 120ಕ್ಕೆ ಹೆಚ್ಚಾಗಲಿದೆ.

ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಇರುವ 294 ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯು 441ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದಲ್ಲಿ ಈಗಿರುವ 288 ಶಾಸಕರ ಬಲವು 432ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.

Vishakha Bhat Heggar

View all posts by this author