ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಿಲ್ಲೆಯ 28 ಜಿ.ಪಂ ಕ್ಷೇತ್ರಗಳು, ತಾ.ಪಂ ಕ್ಷೇತ್ರಗಳ ಮೀಸಲಾತಿ ಅಧಿಸೂಚನೆ ಹೊರಡಿಸಿದ ಸರ್ಕಾರ; ರಾಜಕೀಯ ಚಟುವಟಿಕೆಗಳಿಗೆ ಮತ್ತಷ್ಟು ವೇಗ

ಜಿಲ್ಲೆಯ ಎಂಟು ತಾಲೂಕುಗಳ ವ್ಯಾಪ್ತಿಯಲ್ಲಿರುವ 28 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಸರ್ಕಾರ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಇದೀಗ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಮೀಸಲಾತಿ ಪಟ್ಟಿ ಹೊರಡಿಸಲಾಗಿದೆ.

ಜಿ.ಪಂ., ತಾ.ಪಂ. ಕ್ಷೇತ್ರಗಳ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ

-

Profile
Ashok Nayak Nov 26, 2026 9:41 PM

ಚಿಕ್ಕಬಳ್ಳಾಪುರ: ಜಿಲ್ಲೆಯ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದ ಮೀಸಲಾತಿಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಇದರ ಬೆನ್ನಲ್ಲೇ ಜಿಲ್ಲೆಯ ರಾಜಕೀಯ ವಲಯದಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ.

ಜಿಲ್ಲೆಯ ಎಂಟು ತಾಲೂಕುಗಳ ವ್ಯಾಪ್ತಿಯಲ್ಲಿರುವ 28 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಸರ್ಕಾರ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಇದೀಗ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಮೀಸಲಾತಿ ಪಟ್ಟಿ ಹೊರಡಿಸಲಾಗಿದೆ.

ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಉತ್ಸುಕರಾಗಿರುವ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳ ರಾಜಕೀಯ ಲೆಕ್ಕಾಚಾರ ಆರಂಭಿಸಿ ದ್ದಾರೆ. ಸಾಮಾನ್ಯ, ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಕ್ಷೇತ್ರಗಳು ಹಂಚಿಕೆಯಾಗಿರುವುದರಿಂದ ಹಲವು ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳಿಗೆ ಅವಕಾಶ ದೊರೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: Chikkaballapur News: ಜೀತ ವಿಮುಕ್ತರಿಗೆ ನಿವೇಶನ, ಸಾಗುವಳಿ ಚೀಟಿ ವಿತರಣೆ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಚರ್ಚೆ

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ

  • ಹೊಸೂರು: ಪರಿಶಿಷ್ಟ ಪಂಗಡ
  • ವಿದುರಾಶ್ವತ್ಥ: ಸಾಮಾನ್ಯ
  • ನಾಗರಗೆರೆ: ಪರಿಶಿಷ್ಟ ಜಾತಿ
  • ದಾರಿನಾಯಕನಪಾಳ್ಯ: ಸಾಮಾನ್ಯ
  • ತೊಂಡೇಭಾವಿ: ಹಿಂದುಳಿದ ವರ್ಗ ಎ ಮಹಿಳೆ
  • ಮಿಣಕನಗುರ್ಕಿ: ಪರಿಶಿಷ್ಟ ಜಾತಿ ಮಹಿಳೆ
  • ಮಂಚೇನಹಳ್ಳಿ, ತಿಪ್ಪೇನಹಳ್ಳಿ: ಸಾಮಾನ್ಯ ಮಹಿಳೆ
  • ನಂದಿ: ಪರಿಶಿಷ್ಟ ಜಾತಿ
  • ಮಂಚನಬಲೆ: ಪರಿಶಿಷ್ಟ ಜಾತಿ ಮಹಿಳೆ
  • ಮಂಡಿಕಲ್ಲು: ಸಾಮಾನ್ಯ ಮಹಿಳೆ
  • ಸೋಮೇನಹಳ್ಳಿ: ಸಾಮಾನ್ಯ
  • ಬೀಚಗಾನಹಳ್ಳಿ: ಪರಿಶಿಷ್ಟ ಜಾತಿ ಮಹಿಳೆ
  • ಬಾಗೇಪಲ್ಲಿ: ಪರಿಶಿಷ್ಟ ಪಂಗಡ
  • ಗೂಳೂರು, ಮಿಟ್ಟೇಮರಿ: ಸಾಮಾನ್ಯ
  • ದಿಬ್ಬೂರಹಳ್ಳಿ: ಪರಿಶಿಷ್ಟ ಜಾತಿ
  • ಗಂಜಿಗುಂಟೆ: ಪರಿಶಿಷ್ಟ ಪಂಗಡ ಮಹಿಳೆ
  • ಅಬ್ಬೂಡು: ಸಾಮಾನ್ಯ ಮಹಿಳೆ
  • ಚೀಮಂಗಲ: ಸಾಮಾನ್ಯ
  • ಜಂಗಮಕೋಟೆ: ಸಾಮಾನ್ಯ ಮಹಿಳೆ
  • ತಳಗವಾರ: ಹಿಂದುಳಿದ ವರ್ಗ ಎ
  • ಊಲವಾಡಿ: ಸಾಮಾನ್ಯ
  • ಕೋನಪಲ್ಲಿ: ಪರಿಶಿಷ್ಟ ಪಂಗಡ ಮಹಿಳೆ
  • ಮುರುಗಮಲ್ಲ: ಸಾಮಾನ್ಯ ಮಹಿಳೆ
  • ಬಟ್ಟಲಹಳ್ಳಿ: ಪರಿಶಿಷ್ಟ ಜಾತಿ ಮಹಿಳೆ
  • ಚೇಳೂರು: ಸಾಮಾನ್ಯ ಮಹಿಳೆ
  • ಚಾಕವೇಲು: ಪರಿಶಿಷ್ಟ ಜಾತಿ

ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ

ಮಂಚೇನಹಳ್ಳಿ ತಾಲೂಕು ಪಂಚಾಯಿತಿ: ಪುರ (ಪರಿಶಿಷ್ಟ ಜಾತಿ ಮಹಿಳೆ), ಜರಬಂಡಹಳ್ಳಿ (ಸಾಮಾನ್ಯ), ಮಿಣಕನಗುರ್ಕಿ (ಪರಿಶಿಷ್ಟ ಪಂಗಡ ಮಹಿಳೆ), ಮಂಚೇನಹಳ್ಳಿ ಮತ್ತು ವರವಣಿ (ಸಾಮಾನ್ಯ ಮಹಿಳೆ), ಹಳೆಹಳ್ಳಿ (ಸಾಮಾನ್ಯ), ಶ್ಯಾಮಪುರ (ಪರಿಶಿಷ್ಟ ಜಾತಿ).

ಚಿಕ್ಕಬಳ್ಳಾಪುರ ತಾಲೂಕು ಪಂಚಾಯಿತಿ: ಗೊಳ್ಳಹಳ್ಳಿ, ಹಾರೋಬಂಡೆ, ಹೊಸಹುಡ್ಯ, ಪೋಶೆಟ್ಟಿಹಳ್ಳಿ (ಸಾಮಾನ್ಯ); ಅಗಲಗುರ್ಕಿ, ಪಟ್ಟ್ರೇನಹಳ್ಳಿ, ಮಂಚನಬಲೆ, ತಿಪ್ಪೇನಹಳ್ಳಿ (ಸಾಮಾನ್ಯ ಮಹಿಳೆ); ದಿಬ್ಬೂರು (ಪರಿಶಿಷ್ಟ ಪಂಗಡ); ಮುದ್ದೇನಹಳ್ಳಿ (ಪರಿಶಿಷ್ಟ ಪಂಗಡ ಮಹಿಳೆ); ದೊಡ್ಡಪಾಯಲಗುರ್ಕಿ, ದೊಡ್ಡಮರಳಿ (ಪರಿಶಿಷ್ಟ ಜಾತಿ); ನಂದಿ, ಪೆರೇಸಂದ್ರ, ಮಂಡಿಕಲ್ಲು (ಪರಿಶಿಷ್ಟ ಜಾತಿ ಮಹಿಳೆ).

ಚೇಳೂರು ತಾಲೂಕು ಪಂಚಾಯಿತಿ: ಚಿಲಕಲನೇರ್ಪು, ಚಾಕವೇಲು, ನಲ್ಲಗುಟ್ಟಪಲ್ಲಿ (ಸಾಮಾನ್ಯ); ಪುಲಿಗಲ್ ಸೋಮನಾಥಪುರ (ಸಾಮಾನ್ಯ ಮಹಿಳೆ); ಬುರುಡಗುಂಟೆ (ಪರಿಶಿಷ್ಟ ಜಾತಿ); ಏನಿಗದಲೆ (ಪರಿಶಿಷ್ಟ ಜಾತಿ ಮಹಿಳೆ); ಪೋಲಿನಾಯಕನಪಲ್ಲಿ (ಪರಿಶಿಷ್ಟ ಪಂಗಡ ಮಹಿಳೆ); ಚೇಳೂರು (ಹಿಂದುಳಿದ ವರ್ಗ ಎ ಮಹಿಳೆ).

ಗೌರಿಬಿದನೂರು ತಾಲೂಕು ಪಂಚಾಯಿತಿ: ಹಂಪಸಂದ್ರ, ಗೆದರೆ, ವಿದುರಾಶ್ವತ್ಥ, ಚಿಕ್ಕಕುರುಗೋಡು, ವಾಟದಹೊಸಹಳ್ಳಿ, ನಕ್ಕಲಹಳ್ಳಿ (ಸಾಮಾನ್ಯ); ಹೊಸೂರು, ತೊಂಡೇಭಾವಿ, ಕುಂಟ್ಲಕ್ಕನಹಳ್ಳಿ (ಪರಿಶಿಷ್ಟ ಜಾತಿ ಮಹಿಳೆ); ತರಿದಾಳು, ಹುಡುಗೂರು (ಪರಿಶಿಷ್ಟ ಪಂಗಡ ಮಹಿಳೆ); ಕಾದಲವೇಣಿ (ಹಿಂದುಳಿದ ವರ್ಗ ಎ ಮಹಿಳೆ); ಬಿ.ಬೊಮ್ಮಸಂದ್ರ, ಗಂಗಸಂದ್ರ (ಪರಿಶಿಷ್ಟ ಜಾತಿ); ಇಡಗೂರು, ಮೇಳ್ಯ, ನಾಮಗೊಂಡ್ಲು; ಅಲಕಾಪುರ (ಸಾಮಾನ್ಯ ಮಹಿಳೆ); ನಾಗರಗೆರೆ (ಪರಿಶಿಷ್ಟ ಪಂಗಡ).

ಚಿಂತಾಮಣಿ ತಾಲೂಕು ಪಂಚಾಯಿತಿ: ತಳಗವಾರ, ಆನೂರು, ಕೋನಪ್ಪಲ್ಲಿ, ಭೂಮಿಶೆಟ್ಟಿಹಳ್ಳಿ, ರಾಗುಟ್ಟಹಳ್ಳಿ, ನಂದಿಗಾನಹಳ್ಳಿ, ಕಡದನಮರಿ, ಸಂತೇಕಲ್ಲಹಳ್ಳಿ, ಎಂ.ಗೊಳ್ಳಹಳ್ಳಿ, ಮುನುಗನಹಳ್ಳಿ, ಕೊಳರ್ಪರ್ತಿ, ಕಾಗತಿ, ಕೆಂಚಾರ್ಲಹಳ್ಳಿ, ಕತ್ತಿರಿಗುಪ್ಪೆ (ಸಾಮಾನ್ಯ); ಚಿನ್ನಸಂದ್ರ (ಸಾಮಾನ್ಯ ಮಹಿಳೆ); ಹಿರೇಕಟ್ಟಿಗೇನಹಳ್ಳಿ (ಹಿಂದುಳಿದ ವರ್ಗ ಎ ಮಹಿಳೆ); ಊಲವಾಡಿ (ಪರಿಶಿಷ್ಟ ಜಾತಿ); ಇರಗಂಪಲ್ಲಿ (ಪರಿಶಿಷ್ಟ ಜಾತಿ ಮಹಿಳೆ); ಮುರುಗಮಲ್ಲ (ಪರಿಶಿಷ್ಟ ಪಂಗಡ ಮಹಿಳೆ); ಶೆಟ್ಟಿಹಳ್ಳಿ (ಪರಿಶಿಷ್ಟ ಪಂಗಡ).

ಗುಡಿಬಂಡೆ ತಾಲೂಕು ಪಂಚಾಯಿತಿ: ಉಲ್ಲೋಡು, ವರ್ಲಕೊಂಡ (ಸಾಮಾನ್ಯ); ಸೋಮೇನಹಳ್ಳಿ, ದೊಡ್ಡನೆಂಚರ್ಲು (ಸಾಮಾನ್ಯ ಮಹಿಳೆ); ಬೀಚಗಾನಹಳ್ಳಿ (ಪರಿಶಿಷ್ಟ ಪಂಗಡ ಮಹಿಳೆ); ಚಂಡೂರು (ಪರಿಶಿಷ್ಟ ಜಾತಿ ಮಹಿಳೆ); ಎಲ್ಲೋಡು (ಪರಿಶಿಷ್ಟ ಜಾತಿ).

ಬಾಗೇಪಲ್ಲಿ ತಾಲೂಕು ಪಂಚಾಯಿತಿ: ಗೂಳೂರು, ಜಿ.ಮದ್ದೇಪಲ್ಲಿ, ಬುಟ್ಟಿವಾರಪಲ್ಲಿ (ಸಾಮಾನ್ಯ); ಯಲ್ಲಂಪಲ್ಲಿ, ಪಾತಪಾಳ್ಯ, ಮಿಟ್ಟೇಮರಿ (ಸಾಮಾನ್ಯ ಮಹಿಳೆ); ಘಂಟಂವಾರಿಪಲ್ಲಿ (ಪರಿಶಿಷ್ಟ ಜಾತಿ ಮಹಿಳೆ); ಗೊರ್ತಪಲ್ಲಿ (ಪರಿಶಿಷ್ಟ ಜಾತಿ); ಪರಗೋಡು (ಪರಿಶಿಷ್ಟ ಪಂಗಡ); ಕೊತ್ತಕೋಟೆ (ಪರಿಶಿಷ್ಟ ಪಂಗಡ ಮಹಿಳೆ); ಬಿಳ್ಳೂರು (ಪರಿಶಿಷ್ಟ ಜಾತಿ).

ಶಿಡ್ಲಘಟ್ಟ ತಾಲೂಕು ಪಂಚಾಯಿತಿ: ಸಾದಲಿ, ಬಸಟ್ಟಿಹಳ್ಳಿ, ದೊಡ್ಡತೇಕಹಳ್ಳಿ, ಪಲಿಚೇರ್ಲು, ಅಬ್ಬೂಡು (ಸಾಮಾನ್ಯ); ಈ ತಿಮ್ಮಸಂದ್ರ, ಮೇಲೂರು, ದಿಬ್ಬೂರಹಳ್ಳಿ, ಹೊಸಪೇಟೆ (ಪರಿಶಿಷ್ಟ ಜಾತಿ); ಚೀಮಂಗಲ, ಆನೂರು (ಪರಿಶಿಷ್ಟ ಜಾತಿ ಮಹಿಳೆ); ಗಂಜಿಗುಂಟೆ (ಪರಿಶಿಷ್ಟ ಪಂಗಡ); ಕುಂಬಿಗಾನಹಳ್ಳಿ (ಹಿಂದುಳಿದ ವರ್ಗ ಎ ಮಹಿಳೆ); ಜಂಗಮಕೋಟೆ, ಭಕ್ತರಹಳ್ಳಿ, ಹಂಡಿಗನಾಳ (ಸಾಮಾನ್ಯ); ದೇವರಮಳ್ಳೂರು (ಸಾಮಾನ್ಯ ಮಹಿಳೆ).