ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ದೀರ್ಘಕಾಲದ ಕಾವೇರಿ ನೀರಿನ ವಿವಾದ (Cauvery water dispute) ಕುರಿತು ಮಹಾಬಲಿಪುರಂನಲ್ಲಿ ಗುರುವಾರ ಎರಡು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Union home minister Amit Shah) ಅವರು ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Tamil Nadu chief minister C Joseph Vijay) ಅವರು ಮೇಕೆದಾಟು ಯೋಜನೆಯ (Mekedatu project) ಬಗ್ಗೆ ಮೌನವಾಗಿದ್ದರು. ಆದರೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಬಹಿರಂಗವಾಗಿ ಮಾತನಾಡಿದರು ಎಂದು ಡಿಎಂಕೆ ಆರೋಪಿಸಿದೆ.
ಅಮಿತ್ ಶಾ ಅವರ ಭೇಟಿಯ ವೇಳೆ ಡಿ.ಕೆ. ಶಿವಕುಮಾರ್ ಅವರು ಮೇಕೆದಾಟು ಯೋಜನೆಯ ಪರವಾಗಿ ಬಹಿರಂಗವಾಗಿ ವಾದಿಸಿದರು. ಸಿಎಂ ವಿಜಯ್ ಅವರನ್ನು ಅದನ್ನು ನೇರವಾಗಿ ವಿರೋಧಿಸಲಿಲ್ಲ ಎನ್ನಲಾಗಿದೆ. ಇದು ಈಗ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂನ (ಡಿಎಂಕೆ) ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯಗಳಿಗೆ ಆದ್ಯತೆ ನೀಡುವ, ಭವಿಷ್ಯ ಸನ್ನದ್ಧ ‘ಎಂಎಂಡಿಆರ್ ತಿದ್ದುಪಡಿ ಕಾಯ್ದೆ-2026’ರ ಒಳನೋಟ
ಈ ಕುರಿತು ಹೇಳಿಕೆ ನೀಡಿರುವ ಡಿಎಂಕೆ ಸಂಸದ ದಯಾನಿಧಿ ಮಾರನ್, ಮೇಕೆದಾಟು ಅಣೆಕಟ್ಟಿಗೆ ತಮಿಳುನಾಡು ದೀರ್ಘಕಾಲದಿಂದ ವಿರೋಧ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಅವರ ಮೌನವು ಮಹತ್ವದ್ದಾಗಿದೆ. ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮೇಕೆದಾಟು ಅಣೆಕಟ್ಟು ನಿರ್ಮಾಣದ ಪರವಾಗಿ ಬಹಿರಂಗವಾಗಿ ಮಾತನಾಡಿದರು. ಆದರೆ, ಅಲ್ಲಿ ಹಾಜರಿದ್ದ ಸಿಎಂ ವಿಜಯ್ ಒಂದೇ ಒಂದು ಮಾತನ್ನೂ ಹೇಳದೆ ಮೌನವಾಗಿದ್ದರು ಎಂದರು.
ಸಭೆಯಲ್ಲಿ ಮಾತನಾಡಿದ ವಿಜಯ್ ಅವರು ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕವು ಕಾನೂನನ್ನು ಪಾಲಿಸಬೇಕು ಎಂದು ಹೇಳಿದರೂ ಅವರು ಮೇಕೆದಾಟು ಯೋಜನೆಯ ಬಗ್ಗೆ ಉಲ್ಲೇಖಿಸಿಲ್ಲ. ಅವರು ಕೇವಲ ತಮ್ಮ ಮಾತಿನಲ್ಲಿ ಕಾವೇರಿ ನೀರು ಲಕ್ಷಾಂತರ ಜನರ ಜೀವನ, ಕೃಷಿಗೆ ಅಗತ್ಯವಾಗಿದೆ. ಅಂತರರಾಜ್ಯ ನದಿಗಳ ನಿರ್ವಹಣೆಯು ಸಹಕಾರ ಮತ್ತು ಕಾನೂನಿನ ನಿಯಮಕ್ಕೆ ಅಚಲ ಗೌರವವನ್ನು ಬಯಸುತ್ತದೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಮೇಕೆದಾಟು ಜಲಾಶಯವನ್ನು ನಿರ್ಮಿಸಿದರೆ ತಮಿಳುನಾಡು ಮತ್ತು ಪುದುಚೇರಿಯ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು ಎಂದು ಕರ್ನಾಟಕ ಭರವಸೆ ನೀಡಿದೆ. ಮೇಕೆದಾಟು ಅಣೆಕಟ್ಟಿನಲ್ಲಿ 5 ಟಿಎಂಸಿ ಕುಡಿಯುವ ನೀರನ್ನು ಹೊರತುಪಡಿಸಿ, ಒಂದು ಹನಿ ಹೆಚ್ಚು ನೀರಿದ್ದರೂ ತಮಿಳುನಾಡಿಗೆ ಬಿಡಲಾಗುವುದು. ಅಣೆಕಟ್ಟು ನಿಮಗಾಗಿ ನಿರ್ಮಿಸಲಾಗುವುದು, ನಮಗಾಗಿ ಅಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿಯನ್ನು ಭೇಟಿಯಾದ ಜಪಾನ್ ರಕ್ಷಣಾ ಸಚಿವ: ಭಾರತ-ಜಪಾನ್ ಸಂಬಂಧ ಬಲಪಡಿಸುವ ಬಗ್ಗೆ ಒತ್ತು
ಮೇಕೆದಾಟು ವಿವಾದ ಏಕೆ?
ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿ ಬೆಂಗಳೂರಿನಿಂದ ದಕ್ಷಿಣಕ್ಕೆ ಸುಮಾರು 100 ಕಿ.ಮೀ ದೂರದಲ್ಲಿ ನಿರ್ಮಿಸಲಾಗುತ್ತಿರುವ ಮೇಕೆದಾಟು ಆಣೆಕಟ್ಟು ತಮಿಳುನಾಡಿನ ಕಡೆಗೆ ಹರಿಯುವ ಕಾವೇರಿ ನದಿ ನೀರಿನ ಸ್ಥಳಕ್ಕೆ ಹತ್ತಿರದಲ್ಲಿದೆ. ಈ ಆಣೆಕಟ್ಟು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಮತ್ತು ನೀರಿನ ಹರಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಕರ್ನಾಟಕ ವಾದಿಸಿದೆ. ಆದರೆ ಇದರಿಂದ ತಮಿಳುನಾಡಿಗೆ ನೀರಿನ ಕೊರತೆಯಾಗುವುದು ಎಂದು ತಮಿಳುನಾಡು ವಾದಿಸಿದೆ.