ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರತಿಭಟನೆಯಿಂದ ಕಂಗೆಟ್ಟ ಇರಾನ್‌ಗೆ ಮತ್ತೊಂದು ಸವಾಲು, ಅಮೆರಿಕದಿಂದ ಸುಂಕದ ಬರೆ, ಭಾರತಕ್ಕೂ ಬೀಳಲಿದೆ ಭಾರಿ ಹೊರೆ

ಇರಾನ್‌ನೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೇ. 25ರಷ್ಟು ಸುಂಕ ವಿಧಿಸಿದ್ದು, ಇದು ಇರಾನ್ ನೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ಚೀನಾ, ಭಾರತಕ್ಕೆ ಭಾರಿ ಹೊರೆಯಾಗಲಿದೆ. ಕಳೆದ ಆರ್ಥಿಕ ವರ್ಷದಲ್ಲಿ ಭಾರತವು ಇರಾನ್ ಗೆ 1.24 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿದ್ದು, 0.44 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತ್ತು.

ಇರಾನ್ ಮೇಲೆ ಅಮೆರಿಕ ಸುಂಕ; ಭಾರತದ ಮೇಲೆ ಏನು ಪರಿಣಾಮ?

ಸಂಗ್ರಹ ಚಿತ್ರ -

ವಾಷಿಂಗ್ಟನ್: ಇರಾನ್‌ನೊಂದಿಗೆ (Iran) ವ್ಯಾಪಾರ ವಹಿವಾಟು (Tariffs Over Iran Trade) ನಡೆಸುವ ದೇಶಗಳ ಮೇಲೆ ಶೇ. 25ರಷ್ಟು ಸುಂಕವನ್ನು ಅಮೆರಿಕ (america) ವಿಧಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮವಾದ (social media) ಟ್ರುತ್ ಸೋಷಿಯಲ್‌ನಲ್ಲಿ ಮಾಹಿತಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump), ತಕ್ಷಣದಿಂದ ಜಾರಿಗೆ ಬರುವಂತೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನೊಂದಿಗೆ ವ್ಯವಹಾರ ಮಾಡುವ ಯಾವುದೇ ದೇಶವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದೊಂದಿಗೆ ಮಾಡುವ ಯಾವುದೇ ವ್ಯವಹಾರಕ್ಕೆ ಶೇ. 25ರಷ್ಟು ಸುಂಕವನ್ನು ಪಾವತಿಸಬೇಕಾಗುತ್ತದೆ. ಈ ಆದೇಶವು ಅಂತಿಮ ಮತ್ತು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರಾದ್ಯಂತ ಸುಮಾರು 600 ಜನರ ಸಾವಿಗೆ ಮತ್ತು ಸಾವಿರಾರು ಜನರ ಬಂಧನಕ್ಕೆ ಕಾರಣವಾದ ಪ್ರತಿಭಟನೆ ಬಳಿಕ ಟೆಹ್ರಾನ್‌ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಲು ಒತ್ತಾಯಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಸೇರಿದಂತೆ ಜಗತ್ತಿನಾದ್ಯಂತ ಇರುವ ಇರಾನ್ ನ ಪ್ರಮುಖ ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸಲು ಯುಎಸ್ ಸುಂಕ ಹೆಚ್ಚಳಕ್ಕೆ ನಿರ್ಧರಿಸಿದೆ. ಇದರೊಂದಿಗೆ ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆಯ ಬಗ್ಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ ಮೇಲೆ ಮಿಲಿಟರಿ ದಾಳಿ ನಡೆಸಲು ಅಮೆರಿಕ ಸಜ್ಜು? ಟ್ರಂಪ್‌ ಆಪ್ತ ಹೇಳಿದ್ದೇನು?

ಭಾರತದ ಮೇಲೆ ಏನು ಪರಿಣಾಮ?

ಇರಾನ್ ನ ಅತೀ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರ ಚೀನಾ. ಅನಂತರದ ಸ್ಥಾನದಲ್ಲಿ ಭಾರತವಿದೆ. ಹೀಗಾಗಿ ಅಮೆರಿಕ ವಿಧಿಸಿರುವ ಸುಂಕವು ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಟರ್ಕಿಯ ಮೇಲೂ ಹೆಚ್ಚಿನ ಪರಿಣಾಮ ಬೀರಲಿದೆ.

ಈ ಕುರಿತು ಮಾಹಿತಿ ನೀಡಿರುವ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಕಳೆದ ಆರ್ಥಿಕ ವರ್ಷ ಅಂದರೆ 2024-25ರಲ್ಲಿ ಭಾರತವು ಇರಾನ್‌ಗೆ 1.24 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿದ್ದು, 0.44 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿತು. ಇದರಿಂದ ಒಟ್ಟು ವ್ಯಾಪಾರ ಮೌಲ್ಯ ಸರಿಸುಮಾರು 14-15,000 ಕೋಟಿ ರೂ. ಗಳಾಗಿದೆ. ಇವುಗಳಲ್ಲಿ, ಅತಿದೊಡ್ಡ ಪಾಲು ಸಾವಯವ ರಾಸಾಯನಿಕಗಳಾಗಿದ್ದು. ಬಳಿಕ ಖಾದ್ಯ ಹಣ್ಣುಗಳು, ಬೀಜಗಳು, ಸಿಟ್ರಸ್ ಹಣ್ಣುಗಳ ಸಿಪ್ಪೆಗಳು ಮತ್ತು ಕಲ್ಲಂಗಡಿಗಳು, ಖನಿಜ ಇಂಧನಗಳು, ತೈಲಗಳು ಮತ್ತು ಬಟ್ಟಿ ಇಳಿಸುವ ಉತ್ಪನ್ನಗಳು ಸೇರಿವೆ ಎಂದು ಅದು ತಿಳಿಸಿದೆ.

ಈಗಾಗಲೇ ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿ ಭಾರತದ ಮೇಲೆ ಯುನೈಟೆಡ್ ಸ್ಟೇಟ್ಸ್ ಶೇ. 50ರಷ್ಟು ಹೆಚ್ಚಿನ ಸುಂಕಗಳನ್ನು ವಿಧಿಸಿದೆ. ಇದು ಶೇ. 75ಕ್ಕೆ ಹೆಚ್ಚಳವಾಗಬಹುದು. ಹೀಗಾಗಿ ಇದೀಗ ಇರಾನ್ ಮೇಲಿನ ಸುಂಕವು ಸೇರಿ ಭಾರತಕ್ಕೆ ಇದು ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ. ಟ್ರಂಪ್ ಅವರ ಸುಂಕ ಬೆದರಿಕೆ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಲಿದ್ದು, ಬಳಿಕ ಅಂತಿಮ ನಿರ್ಣಯ ಹೊರಬೀಳಲಿದೆ.

Bangladesh Violence: ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ಹತ್ಯೆಗಳ ಸರಣಿ; ಗಾಯಕ, ಆಟೋ ಚಾಲಕನ ಕೊಲೆ

ಇರಾನ್ ನಲ್ಲಿ ಪ್ರತಿಭಟನೆ

ಇರಾನ್‌ನಾದ್ಯಂತ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ವಾರಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಇದು ದೇಶದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಖಮೇನಿ ಆಡಳಿತವು ಈ ಹಿಂದೆ ಹಲವು ಬಾರಿ ಪ್ರತಿಭಟನೆಗಳನ್ನು ಎದುರಿಸಿದ್ದರೂ ಈ ಬಾರಿ ಪ್ರತಿಭಟನೆಗಳನ್ನು ಹತ್ತಿಕ್ಕಲು ಪ್ರಯತ್ನಿಸಿದ್ದರಿಂದ 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 10,000 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಭಟನಾಕಾರರನ್ನು ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ನಿಗ್ರಹಿಸುತ್ತಿರುವುದನ್ನು ವಿರೋಧಿಸಿ ಟೆಹ್ರಾನ್‌ಗೆ ಎಚ್ಚರಿಕೆಯನ್ನು ನೀಡಿದ್ದಾರೆ.