ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ವಿದೇಶ ಪ್ರಯಾಣ ಬೇಡ, ಚಿನ್ನ ಖರೀದಿ ಮಾಡಬೇಡಿ"; GDP ಏರಿದರೂ ಸ್ವದೇಶಿ ಮಂತ್ರ ಪಠಿಸಿದ ಮೋದಿ

PM Narendra Modi: ವಿದೇಶ ಪ್ರವಾಸ ಮಾಡಬೇಡಿ, ಚಿನ್ನ ಖರೀದಿ ಮಾಡಬೇಡಿ, ವಿದೇಶಗಳಲ್ಲಿ ಮದುವೆ ಆಯ್ಕೆ ಮಾಡಬೇಡಿ.. ಕಳೆದ ಮೇ ತಿಂಗಳ ಆರಂಭದಲ್ಲಿ ಈ ರೀತಿ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಮತ್ತೊಮ್ಮೆ ಇದೇ ಕರೆಯನ್ನು ನೀಡಿದ್ದಾರೆ. ಆತ್ಮನಿರ್ಭರ ಭಾರತಕ್ಕಾಗಿ ಸ್ಥಳೀಯ ಉತ್ಪನ್ನ ಮತ್ತು ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಸ್ಥಳೀಯ ಉತ್ಪನ್ನ ಮತ್ತು ಸೇವೆಗಳನ್ನು ನಾವು ಹೆಚ್ಚು ಆಯ್ಕೆ (Atmanirbhar Bharat) ಮಾಡಿಕೊಂಡಷ್ಟು ಭಾರತ ಪ್ರಗತಿ (GDP growth) ಸಾಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು. ಕಿರ್ಗಿಸ್ತಾನ್‌ನಿಂದ ಮಂಗಳವಾರ ಬೆಳಗ್ಗೆ ಇನ್‌ಸ್ಟಾಗ್ರಾಮ್ ವಿಡಿಯೊ ಮೂಲಕ ತಮ್ಮ ದೇಶದ ಜನತೆಯೊಂದಿಗೆ ಮಾತನಾಡಿದ ಅವರು, ವಿದೇಶಿ ಪ್ರವಾಸ ಮಾಡಬೇಡಿ, ಚಿನ್ನ ಖರೀದಿಸಬೇಡಿ, ವಿದೇಶದಲ್ಲಿ ಮದುವೆಯಾಗಲು ಆಯ್ಕೆ ಮಾಡಿಕೊಳ್ಳಬೇಡಿ ಎಂದು ಮತ್ತೊಮ್ಮೆ ಕರೆ ನೀಡಿದರು. ಫೆಬ್ರವರಿ ತಿಂಗಳಾಂತ್ಯದಲ್ಲಿ ಮಧ್ಯಪ್ರಾಚ್ಯ ಭಾಗದಲ್ಲಿ ಸಂಘರ್ಷ ಆರಂಭವಾದ ಬಳಿಕ ಅವರು ಹಣದುಬ್ಬರವನ್ನು ನಿಯಂತ್ರಿಸಲು ದೇಶದ ಜನತೆಗೆ ಈ ಕರೆ ನೀಡಿದ್ದರು.

ದೇಶದಲ್ಲಿ ಈಗ ಜಿಡಿಪಿ ಬೆಳವಣಿಗೆಯಾಗುತ್ತಿದೆ ಎಂದ ಪ್ರಧಾನಿ ನರೇಂದ್ರ ಮೋದಿ ಇದಕ್ಕಾಗಿ ದೇಶದ ಜನತೆಯನ್ನು ಅಭಿನಂದಿಸಿದರು ಹಾಗೂ ಮತ್ತೊಮ್ಮೆ ಆತ್ಮನಿರ್ಭರ ಭಾರತಕ್ಕಾಗಿ ಎಲ್ಲರೂ ಪ್ರತಿಜ್ಞೆಯನ್ನು ಮಾಡಲು ಮನವಿ ಮಾಡಿದರು.

‘ʼಮಹಿಳೆಯರು ಮನೆಗೇ ಸೀಮಿತವಾಗಿರಬೇಕು’ʼ: ವಿವಾದದ ಕಿಡಿ ಹೊತ್ತಿಸಿದ ಮುಸ್ಲಿಂ ಮುಖಂಡ ಅಬೂಬಕರ್ ಮುಸ್ಲಿಯಾರ್

ದೇಶದ ಜಿಡಿಪಿ ಬೆಳವಣಿಗೆ ಶೇಕಡಾ 7.8 ಆಗಿದ್ದು, ಇದು ಅತ್ಯಂತ ಸಂತೋಷದ ವಿಷಯ. ಇದರ ಹಿಂದೆ ದೇಶವಾಸಿಗಳ ದೃಢಸಂಕಲ್ಪ ಶಕ್ತಿ, ಕಠಿಣ ಪರಿಶ್ರಮವಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ; ಇದು ಸಾಮೂಹಿಕ ಶಕ್ತಿಯ ಪ್ರತಿಬಿಂಬವಾಗಿದೆ ಎಂದು ಹೇಳಿದರು.



ಪ್ರಸ್ತುತ ಜಗತ್ತಿಗೆ ಕಠಿಣ ಸಮಯ. ಇದರ ನಡುವೆಯೂ ಭಾರತ ಜಿಡಿಪಿಯಲ್ಲಿ ಪ್ರಗತಿ ಸಾಧಿಸಿದೆ. ಜಗತ್ತಿನಾದ್ಯಂತ ಸಂಘರ್ಷ ನಡೆಯುತ್ತಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ ಬಿಕ್ಕಟ್ಟುಗಳು ಆವರಿಸಿವೆ. ಇದರಿಂದ ಪೂರೈಕೆ ಸರಪಳಿ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಈವರೆಗೆ ಎಲ್ಲಿಯೂ ಸ್ಥಿರತೆ ಕಂಡಿಲ್ಲ. ಆದರೂ ಭಾರತ ಮಾತ್ರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.

ಸೋಮವಾರ ಬಿಡುಗಡೆಗೊಳಿಸಲಾಗಿರುವ ಅಂಕಿಅಂಶಗಳ ಪ್ರಕಾರ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಬೆಳೆದಿದೆ. ಇದರಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 7.8ರಷ್ಟಾಗಿರುವುದನ್ನು ತೋರಿಸಲಾಗಿದೆ. ಆದರೆ ಆತಂಕ ಇನ್ನೂ ಇದೆ. ಜಾಗತಿಕ ಅನಿಶ್ಚಿತತೆಯು ದೇಶೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ಖರೀದಿ, ಪ್ರಯಾಣಕ್ಕೆ ಸಂಬಂಧಿಸಿ ಸ್ವದೇಶಿಕ್ಕೆ ಒತ್ತು ನೀಡುವಂತೆ ಮತ್ತೊಮ್ಮೆ ಕರೆ ನೀಡಿದರು.

ಯುದ್ಧ ಸಂಬಂಧಿತ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಸಹಾಯ ಮಾಡಲು ವಿದೇಶಿ ಪ್ರಯಾಣ ಮತ್ತು ಅನಗತ್ಯ ಚಿನ್ನ ಖರೀದಿಗಳನ್ನು ತಪ್ಪಿಸುವಂತೆ ತಮ್ಮ ಸಂದೇಶದಲ್ಲಿ ಮನವಿ ಮಾಡಿರುವ ಅವರು, ಸ್ಥಳೀಯ ಉತ್ಪನ್ನಗಳು ಮತ್ತು ಸೇವೆಗಳನ್ನು ನಾವು ಹೆಚ್ಚು ಆಯ್ಕೆ ಮಾಡಿಕೊಂಡಷ್ಟು ದೇಶ ಪ್ರಗತಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೊನೆಯ ಮಾವೋವಾದಿ, ಐವರು ಸಹಚರರಿಗಾಗಿ ಹುಡುಕಾಟ: ಮಾಹಿತಿ ನೀಡಿದವರಿಗೆ 1.34 ಕೋಟಿ ರುಪಾಯಿ ಬಹುಮಾನ ಘೋಷಣೆ

ದೇಶದಲ್ಲಿ ಸ್ವಾವಲಂಬನೆ ಹೆಚ್ಚಾದಷ್ಟು ಸ್ವಾತಂತ್ರ್ಯದ 100 ವರ್ಷಗಳಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಮ್ಮ ಯುವಕರಿಗೆ ಹಸ್ತಾಂತರಿಸುತ್ತೇವೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಇಂದಿನ 140 ಕೋಟಿ ದೇಶವಾಸಿಗಳ ಶಕ್ತಿ, ಒಗ್ಗಟ್ಟಿನಿಂದ, ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗುವುದು ಎಂದು ಅವರು ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author