ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Budget 2026: ಮಧ್ಯಮ ವರ್ಗಕ್ಕೆ ಮೋದಿ ಸರ್ಕಾರದಿಂದ ಗುಡ್‌ನ್ಯೂಸ್‌; ಕ್ಯಾನ್ಸರ್, ಡಯಾಬಿಟಿಸ್‌ ಔಷಧ ಅಗ್ಗ

ಅಪರೂಪದ ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ 2026-27ರ ಕೇಂದ್ರ ಹಣಕಾಸು ಬಜೆಟ್ ನಲ್ಲಿ ಅಪರೂಪದ ಕಾಯಿಲೆಗಳಿಗೆ ಆಮದು ಮಾಡುವ ಮತ್ತು ಕ್ಯಾನ್ಸರ್, ಡಯಾಬಿಟಿಸ್‌ ಔಷಧಗಳಿಗೆ ಸುಂಕ ವಿನಾಯಿತಿ ಘೋಷಿಸಲಾಗಿದೆ. ಜೀವ ಉಳಿಸುವ ಚಿಕಿತ್ಸೆಯನ್ನು ಕೈಗೆಟಕುವಂತೆ ಮಾಡಿರುವುದರಿಂದ ಸಾಕಷ್ಟು ಕುಟುಂಬಗಳಿಗೆ ಪ್ರಯೋಜನವಾಗಲಿದೆ.

ಸಂಗ್ರಹ ಚಿತ್ರ

ನವದೆಹಲಿ: ಅಗತ್ಯ ಚಿಕಿತ್ಸೆ ಸೌಲಭ್ಯ ಎಲ್ಲರಿಗೂ ದೊರೆಯುವಂತೆ ಮಾಡಲು ಹಾಗೂ ಅಪರೂಪದ ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ 2026-27ರ ಕೇಂದ್ರ ಹಣಕಾಸು ಬಜೆಟ್ (Union Budget 2026) ನಲ್ಲಿ ಅಪರೂಪದ ಕಾಯಿಲೆಗಳಿಗೆ ಆಮದು ಮಾಡುವ ಮತ್ತು ಕ್ಯಾನ್ಸರ್, ಡಯಾಬಿಟಿಸ್‌ ಔಷಧಗಳಿಗೆ ಸುಂಕ ವಿನಾಯಿತಿ (Duty Relief) ಘೋಷಿಸಲಾಗಿದೆ. ಇದರಿಂದ ಸಾಕಷ್ಟು ಮಧ್ಯಮ, ಬಡ ವರ್ಗದ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಸಂಸತ್ತಿನಲ್ಲಿ ಭಾನುವಾರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman ), ಔಷಧಗಳ ಮೇಲಿನ ಸುಂಕ ವಿನಾಯಿತಿಯು ಬಹು ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಬಳಸುವ ನಿರ್ಣಾಯಕ ಔಷಧಗಳ ಬೆಲೆಗಳನ್ನು ಕಡಿಮೆ ಮಾಡಲು ನೇರವಾಗಿ ಸಹಾಯ ಮಾಡುತ್ತದೆ ಎಂದು ಹೇಳಿದರು.

2026ರ ಕೇಂದ್ರ ಬಜೆಟ್‌ನಲ್ಲಿ ಕ್ಯಾನ್ಸರ್ ಔಷಧಗಳ ಮೇಲೆ ಸುಂಕ ವಿನಾಯಿತಿ, ಅಪರೂಪದ ಕಾಯಿಲೆಗಳ ಔಷಧಗಳ ಮೇಲೆ ಆಮದು ವಿನಾಯಿತಿಗಳು ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲಿದೆ. ಈ ಹಿನ್ನೆಲೆಯಲ್ಲಿ 17 ಅಗತ್ಯ ಕ್ಯಾನ್ಸರ್ ಔಷಧಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದ್ದು ಈ ಮೂಲಕ ಸರ್ಕಾರವು ಕ್ಯಾನ್ಸರ್ ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ದೊರೆಯುವಂತೆ ಮಾಡಿದೆ.

Budget 2026 PDF Download: ಈ ಬಾರಿಯ ಬಜೆಟ್‌ನಲ್ಲಿ ಏನೇನಿದೆ? ಪಿಡಿಎಫ್‌ ಪ್ರತಿ ಇಲ್ಲಿದೆ

ಈ ಮೂಲಕ ದುಬಾರಿಯಾಗಿರುವ ಕ್ಯಾನ್ಸರ್ ಚಿಕಿತ್ಸಾ ವೆಚ್ಚ ಎದುರಿಸಲು ಪರದಾಡುತ್ತಿರುವ ಅನೇಕ ಕುಟುಂಬಗಳಿಗೆ ಪರಿಹಾರ ಸಿಕ್ಕಂತಾಗಿದೆ. ಜೀವ ಉಳಿಸುವ ಚಿಕಿತ್ಸೆಯನ್ನು ಹೆಚ್ಚು ಮಂದಿಯ ಕೈಗೆಟುಕುವಂತೆ ಮಾಡುವುದು ಮತ್ತು ಅಗತ್ಯ ಚಿಕಿತ್ಸೆಗೆ ಸುಲಭ ಪ್ರವೇಶವನ್ನು ನೀಡುವ ಗುರಿಯನ್ನು ಇದು ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ಆಂಕೊಲಾಜಿ ಔಷಧಗಳನ್ನು ಆಮದು ಮಾಡಿಕೊಳ್ಳಲು ಇರುವ ಕಸ್ಟಮ್ಸ್ ಸುಂಕವನ್ನು ತೆಗೆದು ಹಾಕಲಾಗುತ್ತದೆ. ಇದರಿಂದ ಕ್ಯಾನ್ಸರ್ ಆರೈಕೆಗೆ ಸಂಬಂಧಿಸಿದ ಅತಿದೊಡ್ಡ ಆರ್ಥಿಕ ಹೊರೆ ಕಡಿಮೆಯಾಗುವುದು. ಕ್ಯಾನ್ಸರ್ ಔಷಧಗಳಿಗೆ ವಿನಾಯಿತಿಗಳ ಜೊತೆಗೆ ಇನ್ನೂ ಏಳು ಅಪರೂಪದ ಕಾಯಿಲೆಗಳ ಔಷಧಗಳನ್ನು ಕಸ್ಟಮ್ಸ್ ಸುಂಕ ಪರಿಹಾರದ ಅಡಿಯಲ್ಲಿ ತಂದಿರುವುದಾಗಿ ಹಣಕಾಸು ಸಚಿವರು ಘೋಷಿಸಿದರು.

ಅನೇಕ ವರ್ಷಗಳಿಂದ ಭಾರತವು ಕ್ಯಾನ್ಸರ್ ಚಿಕಿತ್ಸೆಯ ವಿರುದ್ಧ ಹೋರಾಡುತ್ತಿದೆ. ಕ್ಯಾನ್ಸರ್ ಗಳಿಗೆ ಆಮದು ಮಾಡಿಕೊಳ್ಳುವ ಔಷಧಗಳು ಹಲವಾರು ಕ್ಯಾನ್ಸರ್‌ಗಳಿಗೆ ಚಿಕಿತ್ಸೆಯನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಔಷಧ ಬೆಲೆಗಳಲ್ಲಿ ಅಲ್ಪ ಕಡಿತವು ಕೂಡ ದೀರ್ಘಕಾಲದಿಂದ ಚಿಕಿತ್ಸೆ ಪಡೆಯಲು ಹೊರಡುವ ಕುಟುಂಬಗಳಿಗೆ ಸಾಕಷ್ಟು ಪ್ರಯೋಜನವನ್ನು ಒದಗಿಸುತ್ತದೆ. ಇದು ವಿಶೇಷವಾಗಿ ಸಮಗ್ರ ವಿಮಾ ರಕ್ಷಣೆಯಿಲ್ಲದವರಿಗೆ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

Budget 2026: ಮದ್ಯ ಪ್ರಿಯರಿಗೆ ಮತ್ತೆ ಶಾಕ್‌; ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ? ಇಲ್ಲಿದೆ ಸಂಪೂರ್ಣ ಲಿಸ್ಟ್‌

ವಿನಾಯಿತಿಯ ಅಡಿಯಲ್ಲಿ ಬರುವ ಔಷಧಗಳ ಸಂಪೂರ್ಣ ಪಟ್ಟಿಯನ್ನು ಸರ್ಕಾರ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಆದರೆ ಇವುಗಳಲ್ಲಿ ಹೆಚ್ಚಿನ ವೆಚ್ಚದ ಕ್ಯಾನ್ಸರ್ ಔಷಧಗಳು ಸೇರಿವೆ. ಇದು ದೇಶೀಯ ಔಷಧ ಉತ್ಪಾದನೆಯನ್ನು ಬಲಪಡಿಸಲು ಕೂಡ ಸಹಾಯ ಮಾಡುತ್ತದೆ.

ಅಗತ್ಯ ಔಷಧಗಳ ಮೇಲಿನ ಸುಂಕ ಕಡಿತವನ್ನು ಅನೇಕರು ಸ್ವಾಗತಿಸಿದ್ದಾರೆ. ಇದರಿಂದ ಔಷಧವು ಎಲ್ಲರ ಕೈಗೆಟುಕಲು ಸಹಾಯ ಮಾಡುತ್ತದೆ. ಈ ಕ್ರಮವು ಔಷಧ ಬೆಲೆಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author