ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಂಬ್ಯುಲೆನ್ಸ್ ಸಿಗದೆ ಅನಾರೋಗ್ಯಪೀಡಿತ ಹೆಂಡತಿಯನ್ನು ತಳ್ಳುವ ಗಾಡಿಯಲ್ಲಿ ಹೊತ್ತೊಯ್ದ ವೃದ್ಧ; ಕಣ್ಣಲ್ಲಿ ನೀರು ತರಿಸುತ್ತೆ ಈ ಸ್ಟೋರಿ

Elderly Man Carries Ailing Wife: ಮಧ್ಯಪ್ರದೇಶದಲ್ಲಿ ನಡೆದ ಮನಕಲಕುವ ಘಟನೆ ಒಂದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಆಂಬ್ಯುಲೆನ್ಸ್ ಲಭ್ಯವಾಗದ ಕಾರಣ, ಅನಾರೋಗ್ಯಪೀಡಿತ ಹೆಂಡತಿಯನ್ನು ತಮ್ಮ ಕೈಯಿಂದ ತಳ್ಳೋಗಾಡಿಯಲ್ಲಿ ವೃದ್ಧ ವ್ಯಕ್ತಿಯೊಬ್ಬರು ಹೊತ್ತೊಯ್ದಿದ್ದಾರೆ. ದಾರಿ ಮಧ್ಯೆ ಪತ್ನಿ ಸಾವಿಗೀಡಾಗಿದ್ದಾರೆ.

ಆಂಬ್ಯುಲೆನ್ಸ್ ಸಿಗದೆ ಅನಾರೋಗ್ಯಪೀಡಿತ ಹೆಂಡತಿಯನ್ನು ತಳ್ಳೋಗಾಡಿಯಲ್ಲಿ ಹೊತ್ತೊಯ್ದ ವೃದ್ಧ

ಭೋಪಾಲ್: ಕೈಗಾಡಿ ಅಥವಾ ತಳ್ಳೋಗಾಡಿಗಳಿರುವುದು ರೋಗಿಗಳನ್ನು ಸಾಗಿಸಲು ಅಲ್ಲ. ಇದನ್ನು ಸಾಮಾನ್ಯವಾಗಿ ತರಕಾರಿಗಳನ್ನು, ಹೂವುಗಳನ್ನು ಸಾಗಿಸಲು ಬಳಸಲಾಗುತ್ತದೆ. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) ಸಾಗರ್‌ನಲ್ಲಿ ಮನಕಲಕುವ ಘಟನೆ ನಡೆದಿದೆ. ವೃದ್ಧ ವ್ಯಕ್ತಿಯೊಬ್ಬರು ತಮ್ಮ ಜೀವನಕ್ಕಾಗಿ ಎಳೆಯುವ ಬಂಡಿಯನ್ನೇ ಆಂಬ್ಯುಲೆನ್ಸ್ (Ambulance) ಆಗಿ ಬದಲಾಯಿಸಿದ್ದಾರೆ. ಆಂಬ್ಯುಲೆನ್ಸ್ ಸಿಗದೇ ಇದ್ದ ಕಾರಣ ತಳ್ಳೋಗಾಡಿಯಲ್ಲೇ ತನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾನೆ.

ಪವನ್ ಸಾಹು ಎಂಬ ವ್ಯಕ್ತಿಯು ತಳ್ಳೋಗಾಡಿಯನ್ನೇ ಆಂಬ್ಯುಲೆನ್ಸ್ ಆಗಿ ಬದಲಾಯಿಸಿದವರು. ಅವರು ಶಿಕ್ಷಣ ಪಡೆದಿಲ್ಲ. ಸಾಮಾಜಿಕ ವ್ಯವಸ್ಥೆ ಹೇಗಿದೆ ಎಂಬುದು ತಿಳಿದಿಲ್ಲ. ಅಲ್ಲದೆ, ಅವರಿಗೆ ಆಂಬ್ಯುಲೆನ್ಸ್‌ಗೆ ಹೇಗೆ ಕರೆ ಮಾಡಬೇಕು ಎಂಬುದೂ ತಿಳಿದಿಲ್ಲ. ಆದರೂ, ಅವರ ಪತ್ನಿಯ ಆರೋಗ್ಯ ಪರಿಸ್ಥಿತಿ ಹಠಾತ್ತನೆ ಹದಗೆಟ್ಟಾಗ ಹತ್ತಿರದ ಮನೆಗಳಿಗೆ ಹೋಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಸಹಾಯಕ್ಕಾಗಿ ಬೇಡಿಕೊಂಡರು.

ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಇಂಜೆಕ್ಟ್ ಮಾಡಿದ ಭಗ್ನ ಪ್ರೇಮಿ; ಇದೆಂಥಾ ಹುಚ್ಚಾಟ

ಆದರೆ, ಯಾರೂ ಸಹಾಯ ಮಾಡದ ಕಾರಣ ತನ್ನ ಅಸ್ವಸ್ಥ ಹೆಂಡತಿಯನ್ನು ಆಲೂಗಡ್ಡೆ, ಟೊಮೆಟೊ ಮತ್ತು ಸೊಪ್ಪುಗಳನ್ನು ಮಾರಾಟ ಮಾಡುವ ಕೈಗಾಡಿಯ ಮೇಲೆ ಮಲಗಿಸಿದ್ದಾನೆ. ಬರಿ ಕೈಗಳಿಂದಲೇ ತನ್ನ ಪತ್ನಿಯನ್ನು ತಳ್ಳೋಗಾಡಿ ಮೂಲಕ ತಳ್ಳುತ್ತಾ ಆಸ್ಪತ್ರೆಯ ಕಡೆಗೆ ಎಳೆಯಲು ಪ್ರಾರಂಭಿಸಿದನು. ಆದರೆ, ದಾರಿ ಮಧ್ಯೆ ಅವನ ಹೆಂಡತಿ ಕೊನೆಯುಸಿರೆಳೆದಳು.

ರಸ್ತೆಯಲ್ಲಿ ಉಳಿದಿದ್ದು ಬಂಡಿಯ ಮೇಲಿನ ಶವ ಮಾತ್ರವಲ್ಲ, ಇದು ಸಮಾಜದಲ್ಲಿರುವ ಬಡತನದ ಕ್ರೂರ ಚಿತ್ರಣ. ಇದು ನಮ್ಮ ವ್ಯವಸ್ಥೆಯ ದುಸ್ಥಿತಿ. ಪವನ್ ಸಾಹು ಮೂಲತಃ ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ಸೆಸಾಯಿ ಗ್ರಾಮದವರು. ಅವರು ಕಳೆದ 10-12 ವರ್ಷಗಳಿಂದ ಸಾಗರ್‌ನಲ್ಲಿ ವಾಸಿಸುತ್ತಿದ್ದು, ಕೈಗಾಡಿ ತರಕಾರಿ ಮಾರಾಟಗಾರರಾಗಿ ಜೀವನ ಸಾಗಿಸುತ್ತಿದ್ದಾರೆ.

ಅವರ ಪತ್ನಿ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಟುಂಬದ ಉಳಿತಾಯ, ಅವರ ಬಳಿ ಇದ್ದ ಅಲ್ಪಸ್ವಲ್ಪ ಹಣವೂ ಚಿಕಿತ್ಸೆಗೆ ಈಗಾಗಲೇ ಖರ್ಚು ಮಾಡಲಾಗಿತ್ತು. ಶನಿವಾರ (ಜನವರಿ 24) ಅವರ ಆರೋಗ್ಯ ಹದಗೆಟ್ಟಿದೆ. ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲು ಖಾಸಗಿ ಸಾರಿಗೆಗೆ ಹಣವೂ ಅವರ ಬಳಿ ಇರಲಿಲ್ಲ. ತುರ್ತು ಪರಿಸ್ಥಿತಿ ವೇಳೆ ಯಾರಿಗೆ ಕರೆ ಮಾಡಬೇಕೆಂಬ ಜ್ಞಾನವೂ ಇರಲಿಲ್ಲ. ಯಾರ ಸಹಾಯವೂ ಅವರಿಗೆ ಸಿಗಲಿಲ್ಲ.

ಯಾವುದೇ ವಾಹನ, ಆಂಬ್ಯುಲೆನ್ಸ್ ಮತ್ತು ಯಾರೂ ಮುಂದೆ ಬರದೇ ಇದ್ದುದರಿಂದ, ತನ್ನ ಜೀವನೋಪಾಯಕ್ಕಾಗಿ ಸಾಗಿಸುತ್ತಿದ್ದ ಬಂಡಿಯಲ್ಲೇ ಹೆಂಡತಿಯನ್ನು ಆಸ್ಪತ್ರೆಗೆ ಹೊತ್ತೊಯ್ಯಲು ಮುಂದಾದರು.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಅವರ ಪತ್ನಿ ಮೃತಪಟ್ಟ ವೇಳೆ, ವೃದ್ಧ ವ್ಯಕ್ತಿ ರಸ್ತೆಬದಿಯಲ್ಲಿ ದುಃಖಿತರಾಗಿ ಏನು ಮಾಡುವುದೆಂದು ತೋಚದೆ ಕೂತಿದ್ದರು. ಆ ದೃಶ್ಯವನ್ನು ನೋಡಿದ ಅನೇಕರು ಕಣ್ಣೀರು ಹಾಕಿದರು.

ಮಹಿಳೆಯ ಮರಣದ ನಂತರ, ಸ್ಥಳೀಯ ಸಾಮಾಜಿಕ ಸೇವಾ ಸಂಸ್ಥೆಯಾದ ಅಪ್ನಾ ಸೇವಾ ಸಮಿತಿಯ ವಾಹನವು ಶವವನ್ನು ನಾರ್ಯವಾಲಿ ನಾಕಾ ಸ್ಮಶಾನಕ್ಕೆ ಕೊಂಡೊಯ್ದಿದೆ. ಅಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು.

ಈ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ದಂಪತಿಗೆ ಆಂಬ್ಯುಲೆನ್ಸ್ ಬರದೇ ಇರಲು ಏನು ಕಾರಣ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಾಗರ್ ಸಿಎಂಹೆಚ್‌ಒ ಮಮತಾ ತಿಮೋರಿ ಹೇಳಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.