ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಮಾನ ಭೂಮಿ ನಕ್ಷೆ ರಾಷ್ಟ್ರೀಯ ಗಡಿಗಳ ಚಿತ್ರಣವಲ್ಲ: ನವದೆಹಲಿ

ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಭಾರತವು ಸಮಾನ ಭೂಮಿ ನಕ್ಷೆಯನ್ನು ಬೆಂಬಲಿಸಿದೆ. ಈ ನಕ್ಷೆಯಲ್ಲಿ ಭಾರತದ ನಕ್ಷೆ ತಪ್ಪಾಗಿದ್ದರೂ ಭಾರತ ನಕ್ಷೆಯ ಪರವಾಗಿ ಮತ ಚಲಾಯಿಸಿದೆ. ಈ ಕುರಿತು ಸ್ಪಷ್ಟನೆಯನ್ನು ನೀಡಿರುವ ನವದೆಹಲಿ, ಸಮಾನ ಭೂಮಿಯ ನಕ್ಷೆಯು ಪ್ರಸ್ತುತ ರಾಷ್ಟ್ರೀಯ ಗಡಿಗಳ ಚಿತ್ರಣವನ್ನು ಬದಲಾಯಿಸುವುದಿಲ್ಲ ಎಂದು ತಿಳಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ವಿಶ್ವಸಂಸ್ಥೆಯು (United Nations ) ಬಿಡುಗಡೆ ಮಾಡಿರುವ ಸಮಾನ ಭೂಮಿಯ ನಕ್ಷೆಯು (Equal Earth map) ಪ್ರಸ್ತುತ ಇರುವ ರಾಷ್ಟ್ರೀಯ ಗಡಿಗಳ ಚಿತ್ರಣವನ್ನು ಬದಲಾಯಿಸುವುದಿಲ್ಲ ಎಂದು ನವದೆಹಲಿ ( New Delhi) ತಿಳಿಸಿದೆ. ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಭಾರತವು 'ಸಮಾನ ಭೂಮಿ' ನಕ್ಷೆಯನ್ನು ಬೆಂಬಲಿಸಿ ಮತ ಚಲಾಯಿಸಿದ್ದು, ಇದರಲ್ಲಿ ಜಮ್ಮು ಮತ್ತು ಕಾಶ್ಮೀರ(Jammu and Kashmir), ಲಡಾಖ್‌ನ (Ladakh) ಚಿತ್ರಣ ತಪ್ಪಾಗಿದೆ ಎಂದು ಸ್ಪಷ್ಟಪಡಿಸಿದೆ. ನಕ್ಷೆಯ ಪರವಾಗಿ ಭಾರತ ಮತ ಚಲಾಯಿಸಲು ಮುಖ್ಯ ಕಾರಣ ಇದು "ಸಮಾನ- ಪ್ರದೇಶದ ನಕ್ಷೆ ಪ್ರಾತಿನಿಧ್ಯವನ್ನು ಉತ್ತೇಜಿಸುವ ಮೂಲ ತತ್ತ್ವ" ಕ್ಕೆ ಒತ್ತು ನೀಡಿದೆ ಎಂದು ತಿಳಿಸಿದೆ.

ಉತ್ತರ ಅಮೆರಿಕಾ ಮತ್ತು ಯುರೋಪ್ ಅನ್ನು ಕುಗ್ಗಿಸಿ ತಮ್ಮ ಖಂಡವನ್ನು ದೊಡ್ಡದಾಗಿಸುವ ನಕ್ಷೆಯನ್ನು ಅಳವಡಿಸಿಕೊಳ್ಳಲು ಹಲವಾರು ಆಫ್ರಿಕನ್ ದೇಶಗಳು ನೇತೃತ್ವದ ನಿರ್ಣಯವನ್ನು ಬೆಂಬಲಿಸಲು ವಿಶ್ವಸಂಸ್ಥೆಯು ಶುಕ್ರವಾರ ಸಾಮಾನ್ಯ ಸಭೆ ನಡೆಸಿದೆ. ಇದರಲ್ಲಿ ಆಫ್ರಿಕನ್ ಒಕ್ಕೂಟ ಮಂಡಿಸಿರುವ ವಿಶ್ವ ನಕ್ಷೆಯಲ್ಲಿ ಮರು ಸಮತೋಲನ ಮಾಡುವ ನಿರ್ಣಯವನ್ನು ಭಾನುವಾರ ಬೆಂಬಲಿಸಿರುವ ಭಾರತದ ವಿದೇಶಾಂಗ ಸಚಿವಾಲಯವು, ಇದರಲ್ಲಿ ಆಗಿರುವ ತಪ್ಪುಗಳ ಬಗ್ಗೆ ಉಲ್ಲೇಖಿಸಿ ಸ್ಪಷ್ಟನೆಯನ್ನು ನೀಡಿದೆ.

ಮಿಯಾಮಿ ಏರ್ ಪೋರ್ಟ್ ನಲ್ಲಿ ರನ್‌ವೇಯಿಂದ ಜಾರಿ ಹೊತ್ತಿ ಉರಿದ ವಿಮಾನ: ಐವರು ಸಾವು

ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಆಫ್ರಿಕನ್ ಒಕ್ಕೂಟ ಮಂಡಿಸಿರುವ ನಕ್ಷೆಯ ಪರವಾಗಿ ಭಾರತ ಮತ ಚಲಾಯಿಸಿದೆ. ಇದು ಯಾವುದೇ ನಿರ್ದಿಷ್ಟ ನಕ್ಷೆ, ಪ್ರಕ್ಷೇಪಣ ಅಥವಾ ರಾಷ್ಟ್ರೀಯ ಗಡಿಗಳ ಚಿತ್ರಣವನ್ನು ಅನುಮೋದಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದ್ದಾರೆ.

ಭಾರತದ ಸಾರ್ವಭೌಮ ಪ್ರದೇಶವನ್ನು ಅಧಿಕೃತ ನಕ್ಷೆಗೆ ಅನುಗುಣವಾಗಿ ಚಿತ್ರಿಸಬೇಕು. ಯಾವುದೇ ತಪ್ಪಾದ ಚಿತ್ರಣವು ಸ್ವೀಕಾರಾರ್ಹವಲ್ಲ. ಪ್ರಾದೇಶಿಕ ಸಮಗ್ರತೆಯ ಬಗ್ಗೆ ನಮ್ಮ ನಿಲುವು ಸ್ಪಷ್ಟ, ಸ್ಥಿರವಾಗಿದೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಭೂಖಂಡದ ಭೂಪ್ರದೇಶಗಳ "ಹೆಚ್ಚು ನಿಖರವಾದ ಪ್ರಾತಿನಿಧ್ಯ" ವನ್ನು ಗುರಿಯಾಗಿರಿಸಿಕೊಂಡ ನಿರ್ಣಯವನ್ನು 164 ದೇಶಗಳು ಬೆಂಬಲಿಸಿದ್ದು, ಯುನೈಟೆಡ್ ಸ್ಟೇಟ್ಸ್ ಅದರ ವಿರುದ್ಧ ಮತ ಚಲಾಸಿದೆ. ಇತರ ಆರು ರಾಷ್ಟ್ರಗಳು ಸಭೆಯಲ್ಲಿ ಗೈರು ಹಾಜರಾಗಿದ್ದವು. ಆಫ್ರಿಕನ್ ಯೂನಿಯನ್ ರಾಷ್ಟ್ರಗಳ ಮಿತ್ರ ರಾಷ್ಟ್ರವಾಗಿರುವ ಭಾರತವು ನಕ್ಷೆಯಲ್ಲಿ ಆಗುತ್ತಿರುವ ತಪ್ಪುಗಳ ಬಗ್ಗೆ ಪದೇ ಪದೇ ಎಚ್ಚರಿಕೆಯನ್ನು ನೀಡುತ್ತಿದೆ.

ಹೊಸ ನಕ್ಷೆ ಯಾಕೆ?

ಸುಮಾರು 16 ನೇ ಶತಮಾನದಿಂದ ಬಳಕೆಯಲ್ಲಿರುವ ಮರ್ಕೇಟರ್ ನಕ್ಷೆಯಲ್ಲಿ ಆಫ್ರಿಕಾವು ಗ್ರೀನ್‌ಲ್ಯಾಂಡ್‌ ಗಾತ್ರದಲ್ಲಿದೆ. ಆದರೆ ಅದು ವಾಸ್ತವವಾಗಿ 14 ಪಟ್ಟು ದೊಡ್ಡದಾಗಿದೆ. 1569ರಲ್ಲಿ ಮೊದಲು ವಿನ್ಯಾಸಗೊಳಿಸಿರುವ ಈ ನಕ್ಷೆ ಯುರೋಪಿಯನ್ ಸಂಶೋಧಕರಿಗೆ ಪ್ರಪಂಚದಾದ್ಯಂತ ಸಂಚರಿಸಲು ಸಹಾಯ ಮಾಡಲು ರಚಿಸಲಾಗಿದೆ.

ಈ ನಕ್ಷೆಯಲ್ಲಿ ಸಮಭಾಜಕದ ಬಳಿಯಿರುವ ದೇಶಗಳನ್ನು ಅವುಗಳ ಗಾತ್ರಕ್ಕಿಂತ ಚಿಕ್ಕದಾಗಿ ಕಾಣುವಂತೆ ಮತ್ತು ಧ್ರುವಗಳ ಬಳಿಯಿರುವ ದೇಶಗಳನ್ನು ದೊಡ್ಡದಾಗಿ ಕಾಣುವಂತೆ ಮಾಡಲಾಗಿದೆ.

ಇದನ್ನು ಸರಿಪಡಿಸಲು 2018ರಲ್ಲಿ "ಸಮಾನ ಭೂಮಿ" ನಕ್ಷೆಯನ್ನು ರಚಿಸಲಾಗಿದ್ದು, 2026ರ ಫೆಬ್ರವರಿಯಲ್ಲಿ ಆಫ್ರಿಕನ್ ಒಕ್ಕೂಟದ ಎಲ್ಲಾ 54 ರಾಷ್ಟ್ರಗಳು ಇದನ್ನು ಅಳವಡಿಸಿಕೊಂಡು ಆಫ್ರಿಕನ್ ಯೂನಿಯನ್ ದೇಶಗಳ ಬೆಂಬಲದೊಂದಿಗೆ ಇದನ್ನು ಈಗ ವಿಶ್ವಸಂಸ್ಥೆಯ ಮುಂದೆ ಮಂಡಿಸಿದೆ.

ಮಾನ್ಯತೆಯೇ ಇಲ್ಲದ 6 ಪಕ್ಷಗಳಿಗೆ 1700 ಕೋಟಿ ರುಪಾಯಿ ದೇಣಿಗೆ !

ಈ ಕುರಿತು ಪ್ರತಿಕ್ರಿಯಿಸಿರುವ ಟೋಗೋಲೀಸ್ ವಿದೇಶಾಂಗ ಸಚಿವ ರಾಬರ್ಟ್ ಡಸ್ಸಿ, ಈ ನಕ್ಷೆಯ ಉದ್ದೇಶ ಜಗತ್ತನ್ನು ಬದಲಾಯಿಸುವುದಲ್ಲ. ವಿರೂಪಗೊಳಿಸಿರುವ ಪ್ರಾತಿನಿಧ್ಯವನ್ನು ಸರಿಪಡಿಸುವುದಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author