ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಿಯಾಮಿ ಏರ್ ಪೋರ್ಟ್ ನಲ್ಲಿ ರನ್‌ವೇಯಿಂದ ಜಾರಿ ಹೊತ್ತಿ ಉರಿದ ವಿಮಾನ: ಐವರು ಸಾವು

ಫ್ಲೋರಿಡಾದಲ್ಲಿ ಮಿಯಾಮಿ ಏರ್​​ಪೋರ್ಟ್​ನಲ್ಲಿ ಸರಕು ವಿಮಾನವೊಂದು ರನ್‌ವೇಯಿಂದ ಜಾರಿ ಅಪಘಾತಕ್ಕೀಡಾಗಿದೆ. ಇದರಿಂದ ಐದು ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಅಮೆಜಾನ್ ಪ್ರೈಮ್ ಏರ್ ಕಾರ್ಗೋ ವಿಮಾನವು ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಜಾರಿ ಅಪಘಾತಕ್ಕೀಡಾಗಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿತ್ತು.

ಫ್ಲೋರಿಡಾದಲ್ಲಿ ವಿಮಾನ ದುರಂತ: ಐವರು ಸಾವು

ಸಂಗ್ರಹ ಚಿತ್ರ -

ಫ್ಲೋರಿಡಾ: ರನ್ ವೇಯಿಂದ ಜಾರಿದ ಸರಕು ವಿಮಾನವೊಂದು ಅಪಘಾತಕ್ಕೀಡಾಗಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ಮಧ್ಯಾಹ್ನ ಫ್ಲೋರಿಡಾದಲ್ಲಿ (florida) ನಡೆದಿದೆ. ಅಮೆಜಾನ್ ಪ್ರೈಮ್ ಏರ್ ಕಾರ್ಗೋ ವಿಮಾನವು (Amazon Prime Air cargo) ಲ್ಯಾಂಡಿಂಗ್ ವೇಳೆ ರನ್ ವೇಯಿಂದ (Miami International Airport) ಜಾರಿ ಅಪಘಾತಕ್ಕೀಡಾಗಿದೆ. ಇದರಿಂದ ಕ್ಷಣಮಾತ್ರದಲ್ಲಿ ಬೆಂಕಿ (Fire) ಹೊತ್ತಿಕೊಂಡು ಉರಿದಿದೆ. ಹಲವಾರು ವಾಹನಗಳಿಗೆ ವಿಮಾನ ಡಿಕ್ಕಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದ ಬಳಿಕ ಮಿಯಾಮಿ ನಿಲ್ದಾಣದ ಎಲ್ಲಾ ರನ್‌ವೇಗಳು ಮತ್ತು ಟ್ಯಾಕ್ಸಿವೇಗಳನ್ನು ಸಂಜೆ 5.30 ರವರೆಗೆ ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲೋರಿಡಾ ಮಿಯಾಮಿ ವಿಮಾನ ನಿಲ್ದಾಣಕ್ಕೆ ಭಾನುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಪೋರ್ಟೊ ರಿಕೊದಿಂದ ಆಗಮಿಸಿದ ಅಮೆಜಾನ್ ಪ್ರೈಮ್ ಏರ್ ಕಾರ್ಗೋ ಬೋಯಿಂಗ್ 767-300 ಸರಕು ವಿಮಾನವು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ರನ್‌ವೇಯಿಂದ ಹೊರಗೆ ಜಾರಿದೆ. ಇದರಿಂದ ಹತ್ತಿರದ ರಸ್ತೆಯಲ್ಲಿದ್ದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡಿತ್ತು. ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಐದು ಜನರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಎಚ್‌ಐವಿ ಆತಂಕ: ದೇಶದಲ್ಲೇ 3ನೇ ಸ್ಥಾನ, 2 ಲಕ್ಷಕ್ಕೂ ಅಧಿಕ ಸೋಂಕಿತರು!

ಘಟನೆ ಕುರಿತು ಮಾಹಿತಿ ನೀಡಿರುವ ಮಿಯಾಮಿ ಡೇಡ್ ಅಗ್ನಿಶಾಮಕ ರಕ್ಷಣಾ ಮುಖ್ಯಸ್ಥ ರೈದ್ ರೇ ಜಡಲ್ಲಾ, ವಿಮಾನ ಅಪಘಾತದಿಂದ ವಾಹನಗಳಲ್ಲಿ ಹಲವರು ಮಂದಿ ಸಿಲುಕಿಕೊಂಡಿದ್ದು, ತುರ್ತು ರಕ್ಷಣಾ ಸಿಬ್ಬಂದಿ ಅವರನ್ನು ರಕ್ಷಿಸಿದರು ಎಂದರು.

ಮಿಯಾಮಿ ಡೇಡ್ ಶೆರಿಫ್ ರೋಸಿ ಕಾರ್ಡೆರೊ ಸ್ಟಟ್ಜ್ ಮಾತನಾಡಿ, ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಇಂಧನ ಸೋರಿಕೆಯಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಂಡರು. 60ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿತ್ತು. ಅಪಘಾತದ ಬಳಿಕ ಬೆಂಕಿ ಹೊತ್ತಿಕೊಂಡು ಭಾರಿ ಪ್ರಮಾಣದ ಜ್ವಾಲೆ ಮತ್ತು ದಟ್ಟ ಹೊಗೆ ವ್ಯಾಪಿಸಿತ್ತು ಎಂದರು.

ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅಮೆಜಾನ್ ವಕ್ತಾರ ಕೆಲ್ಲಿ ನಾಂಟೆಲ್ ಅವರು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಫ್ಲೋರಿಡಾದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಆಘಾತವಾಗಿದೆ. 21 ಸಿಬ್ಬಂದಿ ವಿಮಾನದಲ್ಲಿದ್ದರು. ಯಾಕೆ ಈ ದುರಂತ ಸಂಭವಿಸಿತ್ತು ಎನ್ನುವುದರ ಕುರಿತು ಸಂಪೂರ್ಣ ತನಿಖೆಗೆ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.



ಏನಾಯಿತು ಎಂಬುದನ್ನು ನಿರ್ಧರಿಸಲು ಅಮೆಜಾನ್ ಸ್ಥಳೀಯ ಅಧಿಕಾರಿಗಳು ಮತ್ತು ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ಸುರಕ್ಷತೆ, ಯೋಗಕ್ಷೇಮ ಮತ್ತು ಆರೈಕೆ ನಮ್ಮ ಆದ್ಯತೆಯಾಗಿದೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿ ಅವರು ತಿಳಿಸಿದರು.

21 ಏರ್ ನಿರ್ವಹಿಸುವ 32 ವರ್ಷ ಹಳೆಯದಾಗಿರುವ ಅಪಘಾತಕ್ಕೀಡಾದ ಪ್ರೈಮ್ ಏರ್ ಫ್ಲೈಟ್ 7598 ಬೋಯಿಂಗ್ 767-300 ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಿಂದ ಬಂದಿತ್ತು. ವಿಮಾನ ನಿಲ್ದಾಣದ ಕರ್ಣೀಯ 9,000 ಅಡಿಗಳಿಗಿಂತ ಹೆಚ್ಚು ಉದ್ದವಿರುವ ರನ್‌ವೇ 30ರಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಳಿಯುವಾಗ ದುರಂತ ಸಂಭವಿಸಿದೆ.

ಸೆಪ್ಟೆಂಬರ್‌ ತಿಂಗಳಿನಲ್ಲಿಯೇ ರಾಜ್ಯದ ಹಲವೆಡೆ ಬರಗಾಲ; ಇಂದಿನ ಹವಾಮಾನ ಹೇಗಿದೆ

ಫೆಡರಲ್ ವಾಯುಯಾನ ಆಡಳಿತ ನೀಡಿರುವ ಮಾಹಿತಿ ಪ್ರಕಾರ ವಿಮಾನ 7598 ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿರುವ ಲೂಯಿಸ್ ಮುನೋಜ್ ಮರಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದೆ.