ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Fact check: ಜಬಲ್ಪುರ ದೋಣಿ ದುರಂತ: ವೈರಲ್ ಆಗಿರುವ ತಾಯಿ, ಮಗುವಿನ ಚಿತ್ರ ನಕಲಿ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಗುರುವಾರ ಸಂಜೆ ನಡೆದಿರುವ ದೋಣಿ ದುರಂತಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ತಾಯಿ, ಮಗುವಿನ ಚಿತ್ರವೊಂದು ಹರಿದಾಡುತ್ತಿದ್ದು, ಇದು ನಕಲಿ ಚಿತ್ರವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಕ್ಷಣಾ ತಂಡವು ಶುಕ್ರವಾರ ನಡೆಸಿದ ಕಾರ್ಯಾಚರಣೆ ವೇಳೆ ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಮಗುವನ್ನು ಬಿಗಿಯಾಗಿ ತಬ್ಬಿ ಹಿಡಿದು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಕೃತಕ ಬುದ್ದಿ ಮತ್ತೆ ಬಳಸಿ ಚಿತ್ರವನ್ನು ಹರಿಯಬಿಡಲಾಗಿತ್ತು.

ಸಂಗ್ರಹ ಚಿತ್ರ

ಮಧ್ಯಪ್ರದೇಶ: ಜಬಲ್ಪುರದಲ್ಲಿ ನಡೆದಿರುವ ದೋಣಿ ದುರಂತಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ತಾಯಿ ಮತ್ತು ಮಗುವಿನ ಚಿತ್ರ ನಕಲಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ (Jabalpur boat tragedy) ಗುರುವಾರ ಸಂಜೆ ಬಾರ್ಗಿ ಅಣೆಕಟ್ಟಿನ (Bargi dam) ಜಲಾಶಯದಲ್ಲಿ 30 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಬಿರುಗಾಳಿಗೆ ಸಿಲುಕಿ ಮುಳುಗಿತ್ತು. ಈ ದುರ್ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದರು. ರಕ್ಷಣಾ ತಂಡಗಳು ಶುಕ್ರವಾರ ತಾಯಿ, ಮಗುವಿನ ಶವ ಪತ್ತೆ ಮಾಡಿದ್ದು, ಅವರನ್ನು ನೀರಿನಿಂದ ಹೊರ ತೆಗೆಯುವ ವೇಳೆ ತಾಯಿ, ಮಗುವನ್ನು ಬಿಗಿಯಾಗಿ ಅಪ್ಪಿರುವ ದೃಶ್ಯ ಕಂಡು ಅಲ್ಲಿದ್ದವರು ಕಣ್ಣೀರು ಸುರಿಸಿದ್ದರು. ಇದಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಚಿತ್ರವನ್ನು ಕೃತಕ ಬುದ್ದಿ ಮತ್ತೆ ಬಳಸಿ ತಯಾರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಾರ್ಗಿ ಅಣೆಕಟ್ಟಿನ ಜಲಾಶಯದಲ್ಲಿ ನಡೆದ ದೋಣಿ ದುರಂತಕ್ಕೆ ಸಂಬಂಧಿಸಿದ ವೈರಲ್ ಆಗಿರುವ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಎಲ್ಲರೂ ಇದನ್ನು ಹಂಚಿಕೊಂಡು ದುಃಖ, ಸುರಕ್ಷತಾ ಕ್ರಮದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ಚಿತ್ರ ನಿಜವಲ್ಲ ಮತ್ತು ದುರಂತಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಕೆಎಸ್​​ಆರ್​​ಟಿಸಿ ಬಸ್ ಪಲ್ಟಿ; 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಚಿತ್ರವನ್ನು ಕೃತಕ ಬುದ್ಧಿಮತ್ತೆಯಿಂದ ತಯಾರಿಸಲಾಗಿದೆ. ಈ ಚಿತ್ರವು ಜನರ ದಾರಿತಪ್ಪಿಸುವಂತಿದೆ. ಇದು ನರ್ಮದಾ ಹಿನ್ನೀರಿನಲ್ಲಿ ಸಂಭವಿಸಿದ ಹಡಗು ದುರಂತಕ್ಕೆ ಸಂಬಂಧಿಸಿಲ್ಲ ಎಂದು ಜಬಲ್ಪುರದ ಕಲೆಕ್ಟರ್ ಸ್ಪಷ್ಟಪಡಿಸಿದರು.



ದುರಂತ ನಡೆದಿದ್ದು ಹೇಗೆ?

ನರ್ಮದಾ ನದಿಯ ಬಾರ್ಗಿ ಅಣೆಕಟ್ಟಿನ ಜಲಾಶಯದಲ್ಲಿ ಗುರುವಾರ ಸಂಜೆ ಬಲವಾದ ಗಾಳಿಗೆ ವಿಹಾರ ನೌಕೆ ಮಗುಚಿಬಿದ್ದಿದೆ. ಇದರಲ್ಲಿ ಸುಮಾರು 30 ಪ್ರಯಾಣಿಕರಿದ್ದರು. ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರವಾಸಿಗರ ಸುರಕ್ಷತೆಯಲ್ಲಿ ನಿರ್ಲಕ್ಷ್ಯವಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ದುರಂತದಲ್ಲಿ ಬದುಕುಳಿದ ಅನೇಕರು ಲೈಫ್ ಜಾಕೆಟ್‌ಗಳನ್ನು ಮುಂಚಿತವಾಗಿ ವಿತರಿಸಲಾಗಿಲ್ಲ. ಪರಿಸ್ಥಿತಿ ಹದಗೆಟ್ಟ ಬಳಿಕ ಪ್ರವಾಸಿಗರೇ ಪರಸ್ಪರ ಸುರಕ್ಷತಾ ಸಾಧನಗಳನ್ನು ಹಂಚಿಕೊಂಡರು. ದೋಣಿಯಲ್ಲಿದ್ದ ಸಿಬ್ಬಂದಿ ಪ್ರವಾಸಿಗರಿಗೆ ಯಾವುದೇ ರೀತಿಯಲ್ಲಿ ಮಾರ್ಗದರ್ಶನ, ಸಹಾಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಜಬಲ್ಪುರ ದೋಣಿ ದುರಂತ: ಒಂಬತ್ತು ಮಂದಿ ನೀರುಪಾಲು, ಎಲ್ಲರ ಕಣ್ಣಾಲಿಗಳು ತುಂಬುವಂತೆ ಮಾಡಿತು ತಾಯಿ, ಮಗುವಿನ ಮೃತದೇಹ

ಅಷ್ಟೇ ಅಲ್ಲದೇ ಮುಂಚಿತವಾಗಿಯೇ ಭಾರತೀಯ ಹವಾಮಾನ ಇಲಾಖೆಯು ಬಿರುಗಾಳಿಯ ಸೂಚನೆ ನೀಡಿದ್ದರೂ ಕೂಡ ದೋಣಿಯನ್ನು ಜಲಾಶಯದಲ್ಲಿ ಇಳಿಸಿರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ತನಿಖೆ ನಡೆಸುವುದಾಗಿ ಸರ್ಕಾರ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಧರ್ಮೇಂದ್ರ ಲೋಧಿಯವರು ದೋಣಿಯಲ್ಲಿ ಸುರಕ್ಷತಾ ಸಾಧನಗಳು ಇರಲಿಲ್ಲ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದ್ದಾರೆ. ಅಂತಹ ದೋಣಿಗಳಲ್ಲಿ ಲೈಫ್ ಜಾಕೆಟ್‌ಗಳನ್ನು ಇರಿಸುವುದು ಕಡ್ಡಾಯವಾಗಿದೆ. ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗಿದೆಯೇ ಎನ್ನುವ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ನಿರ್ಲಕ್ಷ್ಯ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author