ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಬಲ್ಪುರ ದೋಣಿ ದುರಂತ: ಒಂಬತ್ತು ಮಂದಿ ನೀರುಪಾಲು, ಎಲ್ಲರ ಕಣ್ಣಾಲಿಗಳು ತುಂಬುವಂತೆ ಮಾಡಿತು ತಾಯಿ, ಮಗುವಿನ ಮೃತದೇಹ

ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ದೋಣಿ ದುರಂತದಲ್ಲಿ ಗುರುವಾರ ಒಂಬತ್ತು ಮಂದಿ ನೀರು ಪಾಲಾಗಿದ್ದಾರೆ. ತಾಯಿ, ಮಗುವಿನ ಶವ ಪತ್ತೆಯಾಗಿದ್ದು, ರಕ್ಷಣಾ ತಂಡವು ಅವರನ್ನು ನೀರಿನಿಂದ ಹೊರ ತೆಗೆಯುವ ವೇಳೆ ತಾಯಿ, ಮಗುವನ್ನು ಬಿಗಿಯಾಗಿ ಅಪ್ಪಿರುವ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳು ತುಂಬುವಂತೆ ಮಾಡಿತ್ತು.

ಜಬಲ್ಪುರ ದೋಣಿ ದುರಂತ: ಒಂಬತ್ತು ಮಂದಿ ನೀರುಪಾಲು

ಸಂಗ್ರಹ ಚಿತ್ರ -

ಮಧ್ಯಪ್ರದೇಶ: ನಾಲ್ಕು ವರ್ಷದ ಮಗವನ್ನು ಬಿಗಿಯಾಗಿ ಅಪ್ಪಿ ಹಿಡಿದ ತಾಯಿ.. ಮೃತ ದೇಹ ಕಂಡು ಅಲ್ಲಿದ್ದವರೆಲ್ಲ ಬಿಕ್ಕಿ ಬಿಕ್ಕಿ ಅತ್ತ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ (Jabalpur boat tragedy) ನಡೆದಿದೆ. ಬಾರ್ಗಿ ಅಣೆಕಟ್ಟಿನ (Bargi dam) ನೀರಿನಲ್ಲಿ 30 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಹಠಾತ್ ಬಲವಾದ ಗಾಳಿಗೆ ಸಿಲುಕಿ ಗುರುವಾರ ಸಂಜೆ ಮುಳುಗಿದೆ. ಈ ದುರ್ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಶುಕ್ರವಾರ ತಾಯಿ, ಮಗುವಿನ ಶವ ಪತ್ತೆಯಾಗಿದೆ. ರಕ್ಷಣಾ ತಂಡವು ಅವರನ್ನು ನೀರಿನಿಂದ ಹೊರ ತೆಗೆಯುವ ವೇಳೆ ತಾಯಿ, ಮಗುವನ್ನು ಬಿಗಿಯಾಗಿ ಅಪ್ಪಿರುವ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳು ತುಂಬುವಂತೆ ಮಾಡಿತ್ತು. ಇದನ್ನು ನೋಡಿ ಸ್ಥಳದಲ್ಲಿದ್ದ ರಾಜ್ಯ ಸಚಿವ ರಾಕೇಶ್ ಸಿಂಗ್ (Minister Rakesh Singh) ಕೂಡ ಕಣ್ಣೀರು ಸುರಿಸಿದರು.

ಕ್ರೂಸ್ ದೋಣಿ ಬಾರ್ಗಿ ಅಣೆಕಟ್ಟು ಜಲಾಶಯದಲ್ಲಿ ಉರುಳಿಬಿದ್ದ ಬಳಿಕ ಈವರೆಗೆ ಇಪ್ಪತ್ತೆರಡು ಜನರನ್ನು ರಕ್ಷಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳು, ಸ್ಥಳೀಯ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.

ಕ್ರೈಸ್ತ ಧರ್ಮ ಪ್ರಚಾರದ ಆರೋಪ; ಮೂವರು ಅಮೆರಿಕ ಪ್ರಜೆಗಳಿಗೆ 'ಭಾರತ ಬಿಟ್ಟು ತೊಲಗಿ' ನೋಟಿಸ್ ಜಾರಿ

ದೋಣಿ ಜಲಾಶಯದಲ್ಲಿರುವಾಗ ಸಂಜೆ 6 ಗಂಟೆ ಸುಮಾರಿಗೆ ಬಲವಾದ ಗಾಳಿ ಬೀಸಿದೆ. ತಕ್ಷಣವೇ ಪ್ರಯಾಣಿಕರು ಎಚ್ಚರಿಕೆ ನೀಡಿ ದಡಕ್ಕೆ ಮರಳುವಂತೆ ಸಿಬ್ಬಂದಿಯನ್ನು ಒತ್ತಾಯಿಸಿದರು. ಆದರೆ ದೋಣಿ ದಡದಿಂದ ದೂರವಿದ್ದ ಕಾರಣ ದಡಕ್ಕೆ ಮರಳಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದೋಣಿ ಮುಳುಗಿದ ತಕ್ಷಣ ಸ್ಥಳೀಯರು ಹಗ್ಗಗಳನ್ನು ಬಳಸಿ ಲೈಫ್ ಜಾಕೆಟ್ ಧರಿಸಿದ್ದ ಕೆಲವು ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಹಲವಾರು ಮಂದಿ ನೀರಿನಲ್ಲಿ ಮುಳುಗಿದರು. ಎಲ್ಲಾ ಪ್ರಯಾಣಿಕರಿಗೆ ಲೈಫ್ ಜಾಕೆಟ್‌ ಒದಗಿಸದೇ ಇದ್ದುದರಿಂದ ದೊಡ್ಡ ದುರಂತ ಸಂಭವಿಸಿತ್ತು ಎಂದು ಬದುಕುಳಿದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.

ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಕೇಶ್ ಸಿಂಗ್, ಲೈಫ್ ಜಾಕೆಟ್‌ಗಳನ್ನು ಧರಿಸಿದ್ದರೂ ಸಹ ಅವರನ್ನು ಏಕೆ ಉಳಿಸಲು ಸಾಧ್ಯವಾಗಲಿಲ್ಲ ಎಂಬುದು ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಪ್ರತಿಕ್ರಿಯಿಸಿ, ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದರು. ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ಲೋಧಿ ಅವರು ಮಾತನಾಡಿ, ರಕ್ಷಣಾ ಕಾರ್ಯಾಚರಣೆಯ ಅನಂತರ ತನಿಖೆ ನಡೆಸಲಾಗುವುದು. ದುರಂತದಲ್ಲಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಭಯಾನಕ ಅನುಭವ

ಜಬಲ್ಪುರ ದೋಣಿ ದುರಂತದಲ್ಲಿ ಬದುಕುಳಿದವರು ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರತಿಕೂಲ ಹವಾಮಾನವಿದ್ದರೂ ದೋಣಿಯನ್ನು ನೀರಿಗೆ ಇಳಿಸಲಾಗಿದೆ. ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವಂತೆ ಪ್ರಯಾಣಿಕರು ಮಾಡಿದ ಮನವಿಗೆ ದೋಣಿಯ ಸಿಬ್ಬಂದಿ ಸ್ಪಂದಿಸಲಿಲ್ಲ ಎಂದು ಬದುಕುಳಿದವರಲ್ಲಿ ಒಬ್ಬರು ಆರೋಪಿಸಿದ್ದಾರೆ.

ಕೆಲವೇ ನಿಮಿಷಗಳಲ್ಲಿ ದುರಂತ ಸಂಭವಿಸಿತ್ತು. ಯಾವುದೇ ವ್ಯವಸ್ಥೆ ಇರಲಿಲ್ಲ. ಎಲ್ಲರಿಗೂ ಲೈಫ್ ಜಾಕೆಟ್‌ಗಳನ್ನು ನೀಡಿರಲಿಲ್ಲ. ದೋಣಿಯಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಇತ್ತು. ಸುಮಾರು 30 ಪ್ರಯಾಣಿಕರಿದ್ದರು. ಇಬ್ಬರು ಸಿಬ್ಬಂದಿ ಮಾತ್ರ ಇದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರು ಯಾರಿಗೂ ಸರಿಯಾಗಿ ಮಾರ್ಗದರ್ಶನ ನೀಡಲಿಲ್ಲ. ದೋಣಿ ಅಣೆಕಟ್ಟಿನ ಮಧ್ಯಭಾಗವನ್ನು ತಲುಪಿದಾಗ ಪರಿಸ್ಥಿತಿ ಹದಗೆಟ್ಟಿತು. ಬಲವಾದ ಗಾಳಿ ಬೀಸಿನೀರು ಪ್ರಕ್ಷುಬ್ಧವಾಯಿತು ಎಂದು ದುರಂತದಲ್ಲಿ ಬದುಕುಳಿದ ದೆಹಲಿ ನಿವಾಸಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ. ದುರಂತದಲ್ಲಿ ಅವರು ಪತ್ನಿ ಮತ್ತು ನಾಲ್ಕು ವರ್ಷದ ಮಗನನ್ನು ಕಳೆದುಕೊಂಡಿದ್ದಾರೆ.

ದುರಂತದಲ್ಲಿ ಬದುಕುಳಿದ ಸುಮಾರು 15 ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈಕೋರ್ಟ್ ವಿಚಾರಣೆಯ ವೇಳೆಯಲ್ಲೇ ಅಶ್ಲೀಲ ವಿಡಿಯೋ ಪ್ರದರ್ಶನ: ಭದ್ರತಾ ಲೋಪದ ಬೆನ್ನಲ್ಲೇ ಹ್ಯಾಕಿಂಗ್?

ಆಡಳಿತ ವೈಫಲ್ಯ ?

ಭಾರತ ಹವಾಮಾನ ಇಲಾಖೆಯು ಇಲ್ಲಿ ಹಳದಿ ಎಚ್ಚರಿಕೆಯನ್ನು ಮೊದಲೇ ನೀಡಿತ್ತು. ಆದರೂ ದೋಣಿ ಕಾರ್ಯಾಚರಣೆಗೆ ಅವಕಾಶ ನೀಡಿದ್ದು ಏಕೆ ಎನ್ನುವ ಕುರಿತು ಪ್ರಶ್ನಿಸಲಾಗುತ್ತಿದೆ. ಇದು ಸುರಕ್ಷತಾ ನಿರ್ಬಂಧಗಳನ್ನು ಜಾರಿಗೊಳಿಸುವಲ್ಲಿ ಗಂಭೀರ ಲೋಪವಾಗಿ ಸರ್ಕಾರ ಪರಿಗಣಿಸುತ್ತದೆ ಎಂದು ಹೇಳಿರುವ ರಾಜ್ಯ ಸಚಿವ ರಾಕೇಶ್ ಸಿಂಗ್, ಮೃತ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು.