ಉತ್ತರಾಖಂಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ವಿರುದ್ಧ ಉತ್ತರಾಖಂಡದ ಹಲ್ದ್ವಾನಿ ಪೊಲೀಸ್ ಠಾಣೆಯಲ್ಲಿ (Haldwani Police station) ಎಫ್‌ಐಆರ್ (FIR) ದಾಖಲಿಸಲಾಗಿದೆ. ಅವರು ಉತ್ತರಾಖಂಡದ ಬಗ್ಗೆ 'ಜಾತಿವಾದಿ' (Uttarakhand Purification Row) ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಡ್ವಾನಿಯಲ್ಲಿ ನಡೆದ 'ಶುದ್ಧೀಕರಣ' ವಿವಾದಕ್ಕೆ ಸಂಬಂಧಿಸಿ ದೆಹಲಿಯಲ್ಲಿ (Delhi) ಪತ್ರಿಕಾಗೋಷ್ಠಿ ನಡೆಸಿದ್ದ ಅವರು ಜಾತಿವಾದಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಹಲ್ಡ್ವಾನಿಯ ವಾಲ್ಮೀಕಿ ಸಮುದಾಯದ ಸದಸ್ಯರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಭಾನುವಾರ ಹಲ್ಡ್ವಾನಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಾಲ್ಗೊಂಡ ಕಾರ್ಯಕ್ರಮದ ಬಳಿಕ ಸ್ಥಳದಲ್ಲಿ ಶುದ್ಧಿಕರಣ ವಿಧಿವಿಧಾನಗಳನ್ನು ನಡೆಸಲಾಗಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಘಟನೆಗೆ ಜಾತಿವಾದಿ ತಿರುವು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Indian Standard Time: 2027ರ ಮಾರ್ಚ್‌ನಿಂದ ಐಎಸ್‌ಟಿ ಬಳಕೆ ಕಡ್ಡಾಯ
ಸಮಾಜದಲ್ಲಿ ದ್ವೇಷವನ್ನು ಉತ್ತೇಜಿಸುವುದು ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವುದಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ವಿವಿಧ ನಿಬಂಧನೆಗಳ ಅಡಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989 ಅನ್ನು ಸೇರಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಲ್ಡ್ವಾಣಿಯ ಜವಾಹರ್ ನಗರದ ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸದಸ್ಯ ಅಮಿತ್ ಕುಮಾರ್ ಎಂಬವರು ನೀಡಿರುವ ದೂರಿನಲ್ಲಿ ಸ್ಥಳದಲ್ಲಿ ನಡೆದ ಶುದ್ದೀಕರಣ ಮತ್ತು ಸ್ವಚ್ಛತಾ ಅಭಿಯಾನದಲ್ಲಿ ನಾನು ಕೂಡ ಹಾಜರಿದ್ದೆ. ಇದಕ್ಕೆ ಸಂಬಂಧಿಸಿ ಆಗಸ್ಟ್ 29 ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರ ಮಾತುಗಳಿಂದ ಸಮುದಾಯದ ಭಾವನೆಗಳಿಗೆ ನೋವುಂಟಾಗಿದೆ ಎಂದು ತಿಳಿಸಿದ್ದಾರೆ.
ಈ ಆಚರಣೆ ನಡೆಸಿದವರನ್ನು ರಾಹುಲ್ ಗಾಂಧಿ ಅವರು ಅಸ್ಪೃಶ್ಯತೆಯನ್ನು ಆಚರಿಸುವವರು ಮತ್ತು ದಲಿತ ವಿರೋಧಿಗಳು ಎಂದು ಕರೆದಿದ್ದಾರೆ. ಅಮಿತ್ ಕುಮಾರ್ ಕೂಡ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು. ಪರಿಶಿಷ್ಟ ಜಾತಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರು ಈ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ನಡೆದಿರುವ ಶುದ್ದೀಕರಣಕ್ಕೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೂ ಯಾವುದೇ ಸಂಬಂಧವಿಲ್ಲ ಎಂದು ಕೂಡ ದೂರಿನಲ್ಲಿ ಅಮಿತ್ ತಿಳಿಸಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಅವರು ಆಗಸ್ಟ್ 8 ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದರ ಬಳಿಕ ಆಗಸ್ಟ್ 11 ರಂದು ಇಲ್ಲಿ ಕೆಲವು ಮಂದಿ ಸೇರಿ 'ಶುದ್ಧೀಕರಣ ಯಜ್ಞ' ನಡೆಸಿದ್ದರು. ಇದರಿಂದ ರಾಜಕೀಯ ವಿವಾದ ಉಂಟಾಗಿತ್ತು. ಇದನ್ನು ಬಿಜೆಪಿ ಕೂಡ .ಖಂಡಿಸಿತ್ತು. ಇದಕ್ಕೆ ಸಂಬಂಧಿಸಿ ಕಾಂಗ್ರೆಸ್ ಕೂಡ ಬಿಜೆಪಿಯನ್ನು ದಲಿತ ವಿರೋಧಿ ಎಂದು .ಹೇಳಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ, ಮಲ್ಲಿಕಾರ್ಜುನ ಖರ್ಗೆ ಅವರ ರಾಲಿ ಬಳಿಕ ಸ್ಥಳದಲ್ಲಿ ಕಸದ ರಾಶಿಯಾಗಿತ್ತು. ಅಲ್ಲದೇ ಕೆಲವರು ಸ್ಥಳಕ್ಕೆ ಸೂಕ್ತವಲ್ಲದ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲಿ ಶುದ್ದೀಕರಣ ನಡೆಸಿರುವುದಾಗಿ ಬಿಜೆಪಿ ಸಮರ್ಥಿಸಿಕೊಂಡಿತ್ತು.
ಭದ್ರತಾ ತಪಾಸಣೆ ವೇಳೆ ಭೀಕರ ಎನ್‌ಕೌಂಟರ್; ಶಸ್ತ್ರಾಸ್ತ್ರ ಹೊಂದಿದ ನಾಲ್ವರನ್ನು ಹೊಡೆದುರುಳಿಸಿದ ಪೊಲೀಸರು
ಇದರ ಬಳಿಕವೂ ವಿವಾದ ಮುಂದುವರಿದಿದ್ದು, ಆಗಸ್ಟ್ 29 ರಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಘಟನೆಯನ್ನು ಟೀಕಿಸಿ "ಶುದ್ಧೀಕರಣ" ನಡೆಸಿರುವವರ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಬೇಕೆಂದು ಆಗ್ರಹಿಸಿದ್ದರು.