ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Indian Standard Time: 2027ರ ಮಾರ್ಚ್‌ನಿಂದ ಐಎಸ್‌ಟಿ ಬಳಕೆ ಕಡ್ಡಾಯ

2027ರ ಮಾರ್ಚ್‌ನಿಂದ ದೇಶದ ಎಲ್ಲ ಸರಕಾರಿ, ಕಾನೂನು, ವಾಣಿಜ್ಯ ಹಾಗೂ ಡಿಜಿಟಲ್ ಸಂಸ್ಥೆಗಳಿಗೆ ಭಾರತೀಯ ಪ್ರಮಾಣಿತ ಸಮಯವನ್ನು (Indian Standard Time) ಬಳಸುವುದು ಕಡ್ಡಾಯ ವಾಗಲಿದೆ. ದೇಶದ್ಯಾಂತ ಏಕರೂಪದ ಕಾಲಮಾನ ಹಾಗೂ ಡಿಜಿಟಲ್ ಮೂಲ ಸೌಕರ್ಯಗಳ ಭದ್ರತೆ ಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

2027ರ ಮಾರ್ಚ್‌ನಿಂದ ಐಎಸ್‌ಟಿ ಬಳಕೆ ಕಡ್ಡಾಯ

-

Profile
Ashok Nayak Aug 31, 2026 8:39 AM

ದೇಶಾದ್ಯಂತ ಏಕರೂಪ ಕಾಲಮಾನ ಜಾರಿ ಮಾಡುವ ಉದ್ದೇಶ: ಕೇಂದ್ರ

ದೆಹಲಿ: 2027ರ ಮಾರ್ಚ್‌ನಿಂದ ದೇಶದ ಎಲ್ಲ ಸರಕಾರಿ, ಕಾನೂನು, ವಾಣಿಜ್ಯ ಹಾಗೂ ಡಿಜಿಟಲ್ ಸಂಸ್ಥೆಗಳಿಗೆ ಭಾರತೀಯ ಪ್ರಮಾಣಿತ ಸಮಯವನ್ನು (Indian Standard Time) ಬಳಸುವುದು ಕಡ್ಡಾಯ ವಾಗಲಿದೆ. ದೇಶದ್ಯಾಂತ ಏಕರೂಪದ ಕಾಲಮಾನ ಹಾಗೂ ಡಿಜಿಟಲ್ ಮೂಲ ಸೌಕರ್ಯಗಳ ಭದ್ರತೆ ಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಇದನ್ನೂ ಓದಿ: Thimmanna Bhagwat Column: ಮಾಫಿ ಸಾಕ್ಷಿ, ಪ್ರತಿಕೂಲ ಸಾಕ್ಷಿಗಳ ನಡುವೆ ತೂಗುದೀಪ

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಲೀಗಲ್ ಮೆಟ್ರಾಲಜಿ (ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) ನಿಯಮಗಳು, 2026 ಅನ್ನು ಅಧಿಸೂಚಿಸಿದ್ದು, ಈ ನಿಯಮಗಳು ಗೆಜೆಟ್‌ನಲ್ಲಿ ಪ್ರಕಟ ಗೊಂಡ 180 ದಿನಗಳ ನಂತರ ಅಂದರೆ 2027ರ ಮಾರ್ಚ್ ವೇಳೆಗೆ ಅಧಿಕೃತವಾಗಿ ಜಾರಿಗೆ ಬರಲಿವೆ.

ಪ್ರಸ್ತುತ ದೇಶದ ಹಲವು ಟೆಲಿಕಾಂ ಸಂಸ್ಥೆಗಳು, ಇಂಟರ್‌ನೆಟ್ ಸೇವಾದಾತರು, ಬ್ಯಾಂಕಿಂಗ್ ಜಾಲ ಗಳು ಮತ್ತು ಡೇಟಾ ಸೆಂಟರ್‌ಗಳು ಜಿಪಿಎಸ್‌ನಂತಹ ವಿದೇಶಿ ಸಮಯ ಮೂಲಗಳನ್ನು ಅವಲಂಬಿ ಸಿವೆ. ಹೊಸ ನಿಯಮ ಜಾರಿಯಾದ ನಂತರ ಎಲ್ಲ ಸಂಸ್ಥೆಗಳ ಸಿಸ್ಟಮ್ ಹಾಗೂ ನೆಟ್‌ವರ್ಕ್‌ಗಳು ಕಡ್ಡಾಯವಾಗಿ ಐಎಸ್‌ಟಿ ಸಮಯಕ್ಕೇ ಸಿಂಕ್ ಆಗಬೇಕಾಗುತ್ತದೆ ಎಂದು ಸರಕಾರ ಹೇಳಿದೆ.

*

ಆನ್‌ಲೈನ್ ವಂಚನೆ ತಡೆಗೆ , ಡಿಜಿಟಲ್ ಭದ್ರತೆ ಹೆಚ್ಚಿಸಲು ಇದರಿಂದ ನೆರವಾಗಲಿದೆ

ಐಎಸ್‌ಟಿ ಹೊರತುಪಡಿಸಿ ಬೇರೆ ಸಮಯದ ಬಳಕೆಗೆ ನಿರ್ಬಂಧ

ನಿಯಮ ಉಲ್ಲಂಘಿಸುವ ಸಂಸ್ಥೆಗಳಿಗೆ ದಂಡ

ವಿದೇಶಿ ಸಮಯದ ವಲಯಗಳ ನಮೂದಿಗೆ ವಿನಾಯಿತಿ