ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೆಗಲು, ಕೈಗೆ ಬ್ಯಾಂಡೇಜ್; ಗುಂಡಿನ ದಾಳಿ ಬಳಿಕ ಟೈಗರ್‌ ಶ್ರಾಫ್‌ ಹೇಗಿದ್ದಾರೆ? ಫೋಟೋ ವೈರಲ್‌

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ಮುುಂಬೈನ ಜುಹೂ ಪ್ರದೇಶದಲ್ಲಿ ಭಾನುವಾರ ಸಂಜೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ನಟ ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಟೈಗರ್‌ ಶ್ರಾಫ್‌ ನಿವಾಸದಲ್ಲಿ ನಟ ಕುಳಿತಿರುವ ಫೋಟೋ ವೈರಲ್‌ ಆಗಿದ್ದು, ಶರ್ಟ್‌ ಧರಿಸದೆ ಸೋಫಾದ ಮೇಲೆ ಕುಳಿತಿದ್ದು, ಅವರ ಎದೆ, ಹೆಗಲು ಮತ್ತು ಎಡಗೈಗೆ ವೈದ್ಯಕೀಯ ಬ್ಯಾಂಡೇಜ್‌ಗಳನ್ನು ಹಾಕಿರುವುದು ಕಂಡುಬಂದಿದೆ.

ಟೈಗರ್‌ ಶ್ರಾಫ್‌ ಹಾಗೂ ಏಕ್‌ನಾಥ್‌ ಶಿಂಧೆ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ಮೇಲೆ ಮುುಂಬೈನ ಜುಹೂ ಪ್ರದೇಶದಲ್ಲಿ ಭಾನುವಾರ ಸಂಜೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ನಟ ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಜುಹೂನ ಪುಷ್ಪಾ ಪಾರ್ಕ್ ಬಳಿ ಇರುವ ಫುಟ್ಬಾಲ್ ಮೈದಾನದಿಂದ ಟೈಗರ್ ಶ್ರಾಫ್ ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ಹೊರಡುತ್ತಿದ್ದಾಗ ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರ ಕಾರನ್ನು ಗುರಿಯಾಗಿಸಿ 5 ಸುತ್ತು ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್‌ ಶಿಂಧೆ (Eknath Shinde) ಟೈಗರ್‌ ಶ್ರಾಫ್‌ ಅವರನ್ನು ಭೇಟಿ ಮಾಡಿದರು.

ಟೈಗರ್‌ ಶ್ರಾಫ್‌ ನಿವಾಸದಲ್ಲಿ ನಟ ಕುಳಿತಿರುವ ಫೋಟೋ ವೈರಲ್‌ ಆಗಿದ್ದು, ಶರ್ಟ್‌ ಧರಿಸದೆ ಸೋಫಾದ ಮೇಲೆ ಕುಳಿತಿದ್ದು, ಅವರ ಎದೆ, ಹೆಗಲು ಮತ್ತು ಎಡಗೈಗೆ ವೈದ್ಯಕೀಯ ಬ್ಯಾಂಡೇಜ್‌ಗಳನ್ನು ಹಾಕಿರುವುದು ಕಂಡುಬಂದಿದೆ. ಕಾರಿನ ಗಾಜಿನ ಚೂರುಗಳು ಮತ್ತು ಗನ್‌ಪೌಡರ್‌ನಿಂದ ನಟನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ಭೇಟಿಯ ವೇಳೆ ಟೈಗರ್ ಅವರ ತಾಯಿ ಆಯೇಷಾ ಶ್ರಾಫ್ ಕೂಡ ಉಪಸ್ಥಿತರಿದ್ದರು. ಘಟನೆಯ ನಂತರ ಏಕನಾಥ್ ಶಿಂಧೆ ಅವರು ಮುಂಬೈ ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಿದ್ದು, ದಾಳಿಕೋರರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ತಕ್ಷಣವೇ ಹಲವಾರು ವಿಶೇಷ ಪೊಲೀಸ್ ತಂಡಗಳನ್ನು ರಚಿಸುವಂತೆ ಆದೇಶಿಸಿದ್ದಾರೆ.

ವಿಡಿಯೋ ನೋಡಿ



ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಗಳು, "ಇದು ಅತ್ಯಂತ ಗಂಭೀರವಾದ ಘಟನೆಯಾಗಿದೆ. ಮುಂಬೈನಲ್ಲಿ ಬೆದರಿಕೆ ಅಥವಾ ಹಿಂಸಾಚಾರದ ಮೂಲಕ ತಮ್ಮ ಪ್ರಾಬಲ್ಯ ಸಾಧಿಸಲು ಯಾರನ್ನೂ ಬಿಡುವುದಿಲ್ಲ. ಭಯ ಹುಟ್ಟಿಸುವ ಯಾವುದೇ ಗ್ಯಾಂಗ್‌ಗಳನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ" ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ: ಆಡಿಯೋ ಮೆಸೇಜ್‌ನಲ್ಲಿ ಸಲ್ಮಾನ್‌ ಖಾನ್‌ ಹೆಸರು ಉಲ್ಲೇಖಿಸಿದ ಬಿಷ್ಣೋಯ್‌ ಗ್ಯಾಂಗ್‌

1990ರ ದಶಕದಲ್ಲಿ ಮುಂಬೈನಲ್ಲಿ ಗ್ಯಾಂಗ್ ವಾರ್‌ಗಳು ಹೆಚ್ಚಾಗಿದ್ದಾಗ ಪೊಲೀಸರು ಅವುಗಳನ್ನು ಹೇಗೆ ಮಟ್ಟಹಾಕಿದ್ದರು ಎಂಬುದನ್ನು ನೆನಪಿಸಿದ ಶಿಂಧೆ, ಸೆಲೆಬ್ರಿಟಿಗಳಾಗಲಿ ಅಥವಾ ಸಾಮಾನ್ಯ ನಾಗರಿಕರಾಗಲಿ, ಪ್ರತಿಯೊಬ್ಬರ ಜೀವದ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಒತ್ತಿಹೇಳಿದ್ದಾರೆ.

Vishakha Bhat Heggar

View all posts by this author