ಭಾರತೀಯರಿಗೆ ಫ್ರೀ ವೀಸಾ ಟ್ಸಾನ್ಸಿಟ್ ಸೌಲಭ್ಯ ಘೋಷಿಸಿದ ಜರ್ಮನಿ! ಏನೆಲ್ಲಾ ಉಪಯೋಗ ಇದೆ ಗೊತ್ತಾ?
Visa-Free Transit: ಭಾರತ ಮತ್ತು ಜರ್ಮನಿ ಸೋಮವಾರ ರಕ್ಷಣೆ, ವ್ಯಾಪಾರ, ನಿರ್ಣಾಯಕ ಖನಿಜಗಳು ಮತ್ತು ಅರೆವಾಹಕಗಳ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೆಲ ಒಪ್ಪಂದಗಳನ್ನು ಮಾಡಿಕೊಂಡಿದೆ. ಪ್ರಧಾನಿ ಮೋದಿ ಮತ್ತು ಮೆರ್ಜ್ ನಡುವಿನ ಮಾತುಕತೆಯ ನಂತರ, ಎರಡೂ ಕಡೆಯವರು 19 ಒಪ್ಪಂದಗಳಿಗೆ ಸಹಿ ಹಾಕಿದರು.
ಮೋದಿ ಹಾಗೂ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ -
ನವದೆಹಲಿ: ಭಾರತ ಮತ್ತು ಜರ್ಮನಿ ಸೋಮವಾರ ರಕ್ಷಣೆ, ವ್ಯಾಪಾರ, ನಿರ್ಣಾಯಕ ಖನಿಜಗಳು ಮತ್ತು (Visa-Free Transit) ಅರೆವಾಹಕಗಳ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೆಲ ಒಪ್ಪಂದಗಳನ್ನು ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಭೌಗೋಳಿಕ ರಾಜಕೀಯ ಕ್ರಾಂತಿಯಿಂದ ಉಂಟಾಗುವ ಸವಾಲುಗಳನ್ನು ಜಂಟಿಯಾಗಿ ಎದುರಿಸಲು ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಪ್ರತಿಜ್ಞೆ ಮಾಡಿದರು.
ಪ್ರಧಾನಿ ಮೋದಿ ಮತ್ತು ಮೆರ್ಜ್ ನಡುವಿನ ಮಾತುಕತೆಯ ನಂತರ, ಎರಡೂ ಕಡೆಯವರು 19 ಒಪ್ಪಂದಗಳಿಗೆ ಸಹಿ ಹಾಕಿದರು, ಇದರಲ್ಲಿ ರಕ್ಷಣಾ ಕೈಗಾರಿಕಾ ಸಹಯೋಗಕ್ಕಾಗಿ ಮಾರ್ಗಸೂಚಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸುವ ಇನ್ನೊಂದು ಒಪ್ಪಂದವೂ ಸೇರಿದೆ. ದೂರಸಂಪರ್ಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಕುರಿತು ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಒಟ್ಟಾರೆ ವ್ಯಾಪಾರ ಬುಟ್ಟಿಯನ್ನು ವಿಸ್ತರಿಸಲು ಭಾರತ-ಯುರೋಪಿಯನ್ ಒಕ್ಕೂಟ (EU) ಮುಕ್ತ ವ್ಯಾಪಾರ ಒಪ್ಪಂದವನ್ನು ಶೀಘ್ರವಾಗಿ ಅಂತಿಮಗೊಳಿಸಬೇಕೆಂದು ಇಬ್ಬರೂ ನಾಯಕರು ತೀರ್ಮಾನಕ್ಕೆ ಬಂದಿದ್ದಾರೆ.
ಮುಖ್ಯವಾಗಿ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ರಹಿತ ಸಾರಿಗೆ ವ್ಯವಸ್ಥೆಯನ್ನು ಜರ್ಮನಿ ಪ್ರಕಟಿಸಿದೆ. ಭಾರತ ಹಾಗೂ ಜರ್ಮನಿ ನಡುವಿನ ಒಪ್ಪಂದದಲ್ಲಿ ಪ್ರಮುಖವಾಗಿ ಫ್ರಿ ವೀಸಾ ಟ್ರಾನ್ಸಿಟ್ ಅತ್ಯಂತ ಪ್ರಮುಖವಾಗಿದೆ. ಭಾರತೀಯರು ಜರ್ಮನಿ ಮೂಲಕ ಇತರ ದೇಶಗಳಿಗೆ ಪ್ರಯಾಣ ಮಾಡುವಾಗ ಟ್ರಾನ್ಸಿಟ್ ವೀಸಾ ಪಡೆಯುವ ಅಗತ್ಯವಿಲ್ಲ. ಮುಕ್ತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಇದರು ಹಲವು ಭಾರತೀಯರಿಗೆ ಪ್ರಯೋಜನವಾಗಲಿದೆ.
ಜರ್ಮನಿ ವಿಮಾನ ನಿಲ್ದಾಣಗಳ ಮೂಲಕ ಅಮೆರಿಕ, ಕೆನಾಡ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಪ್ರಯಾಣ ಮಾಡುವ ಭಾರತೀಯರು ಈ ಒಪ್ಪಂದಿಂದ ಪ್ರತ್ಯೇಕವಾಗಿ ಜರ್ಮನಿಯ ಟ್ರಾನ್ಸಿಟ್ ವೀಸಾ ಪಡೆಯುವ ಅಗತ್ಯವಿಲ್ಲ. ಕೇವಲ ಭಾರತೀಯರು ಮಾತ್ರ. ಭಾರತೀಯರು ಜರ್ಮನಿ ಟ್ರಾನ್ಸಿಟ್ ವೀಸಾ ಮುಕ್ತವಾಗಿ ಪ್ರಯಾಣ ಮಾಡಲು ಸಾಧ್ಯವಿದೆ.
ರಾಜಕೀಯ ವಿರೋಧಿಗಳ ಮಣಿಸಲು ಇಡಿ, ಸಿಬಿಐ ಬಿಜೆಪಿಯ ಅಸ್ತ್ರ; ಜರ್ಮನಿಯಲ್ಲಿ ಮೋದಿ ವಿರುದ್ಧ ರಾಹುಲ್ ಗುಡುಗು
ರಕ್ಷಣಾ ಮತ್ತು ಭದ್ರತೆಯಲ್ಲಿ ಬೆಳೆಯುತ್ತಿರುವ ಸಹಕಾರವು ನಮ್ಮ ಪರಸ್ಪರ ನಂಬಿಕೆ ಮತ್ತು ಹಂಚಿಕೆಯ ದೃಷ್ಟಿಕೋನದ ಸಂಕೇತವಾಗಿದೆ. ರಕ್ಷಣಾ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಸರಳಗೊಳಿಸಿದ್ದಕ್ಕಾಗಿ ಚಾನ್ಸೆಲರ್ ಮೆರ್ಜ್ ಅವರಿಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ" ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ನಮ್ಮ ರಕ್ಷಣಾ ಕೈಗಾರಿಕೆಗಳ ನಡುವಿನ ಸಹಕಾರವನ್ನು ಹೆಚ್ಚಿಸಲು ನಾವು ಒಂದು ಮಾರ್ಗಸೂಚಿಯಲ್ಲಿ ಕೆಲಸ ಮಾಡುತ್ತೇವೆ, ಇದು ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ" ಎಂದು ಅವರು ಹೇಳಿದರು.