ಪಣಜಿ, ಜ. 27: 16 ವರ್ಷದೊಳಗಿನ ಮಕ್ಕಳಿಗೆ ಆಸ್ಟ್ರೇಲಿಯಾ ಮಾದರಿಯಲ್ಲಿ ಸೋಶಿಯಲ್ ಮೀಡಿಯಾ ಬಳಕೆ ನಿಷೇಧಿಸಲು ಗೋವಾ ಸರ್ಕಾರ (Goa government) ಚಿಂತನೆ ನಡೆಸಿದೆ. ಒಂದು ಶತಕೋಟಿಗೂ ಹೆಚ್ಚು ಇಂಟರ್‌ನೆಟ್ ಬಳಕೆದಾರರನ್ನು ಹೊಂದಿರುವ ದೇಶದಲ್ಲಿ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಸಾಮಾಜಿಕ ಮಾಧ್ಯಮಗಳ ಬಳಕೆಯ ಕಾರಣವಾಗುತ್ತಿರುವ ಬಗ್ಗೆ ಕಳವಳಗಳು ಹೆಚ್ಚುತ್ತಿರುವ ಕಾರಣ, ಆಸ್ಟ್ರೇಲಿಯಾ ಮಾದರಿಯಲ್ಲಿ ಮಕ್ಕಳಿಗೂ ಸಾಮಾಜಿಕ ಮಾಧ್ಯಮ ನಿಷೇಧವನ್ನು ಜಾರಿಗೆ ತರಲು ಗೋವಾ ಸರ್ಕಾರ ಮುಂದಾಗಿದೆ.
ಮೆಟಾ, ಗೂಗಲ್‌ನ ಯೂಟ್ಯೂಬ್ ಮತ್ತು ಎಕ್ಸ್‌ನಂತಹ ಸಾಮಾಜಿಕ ಮಾಧ್ಯಮದಲ್ಲಿ ಭಾರತವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅನೇಕ ಬಳಕೆದಾರರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳ ಮೇಲೆ ರಾಷ್ಟ್ರಮಟ್ಟದ ನಿರ್ಬಂಧಗಳು ಭಾರತದಲ್ಲಿ ಇಲ್ಲ. ಹಾಗೆಯೇ ಕೇಂದ್ರ ಸರ್ಕಾರ ಇಂತಹ ನಿಯಂತ್ರಣಗಳನ್ನು ತರಲು ಯೋಜನೆ ಹೊಂದಿದೆ ಎಂಬ ಯಾವುದೇ ಸೂಚನೆಯೂ ಇಲ್ಲ.
ಗಣರಾಜ್ಯೋತ್ಸವ ದಿನವೇ ಘೋರ ದುರಂತ; ಧ್ವಜ ಇಳಿಸುವಾಗ ವಿದ್ಯುತ್ ಸ್ಪರ್ಶಿಸಿ 10ನೇ ತರಗತಿ ವಿದ್ಯಾರ್ಥಿ ಸಾವು
ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಅಪ್ರಾಪ್ತ ವಯಸ್ಕರನ್ನು ಹೇಗೆ ನಿಯಂತ್ರಿಸುವುದು ಎಂಬುದನ್ನು ಅಧ್ಯಯನ ಮಾಡಲು ಗೋವಾದ ಅಧಿಕಾರಿಗಳು ಆಸ್ಟ್ರೇಲಿಯಾದ ಕಾನೂನನ್ನು ಪರಿಶೀಲಿಸುತ್ತಿದ್ದಾರೆ ಎಂದು ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವ ರೋಹನ್ ಖೌಂಟೆ ಹೇಳಿದ್ದಾರೆ. ಸಾಧ್ಯವಾದರೆ, 16 ವರ್ಷದೊಳಗಿನ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಗೂ ಇದೇ ರೀತಿಯ ನಿಷೇಧವನ್ನು ಜಾರಿಗೆ ತರುತ್ತೇವೆ ಎಂದು ಅವರು ತಿಳಿಸಿದರು.
53 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಆಂಧ್ರ ಪ್ರದೇಶವು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿದೆ ಎಂದು ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ ಗೋವಾ, ವಿಸ್ತೀರ್ಣದ ದೃಷ್ಟಿಯಿಂದ ಅತ್ಯಂತ ಚಿಕ್ಕ ರಾಜ್ಯವಾಗಿದ್ದು, 1.5 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.
ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪ; ವ್ಯಕ್ತಿ ಬಂಧನ
ಈ ಯೋಜನೆಯ ಕುರಿತು ಐಟಿ ಸಚಿವಾಲಯ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮೆಟಾ, ಗೂಗಲ್ ಮತ್ತು ಎಕ್ಸ್ ಕೂಡ ಯೋಜನೆಯ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಆಂಧ್ರ ಪ್ರದೇಶ ಇತ್ತೀಚೆಗೆ ಹಿರಿಯ ಸಚಿವರ ಸಮಿತಿಯನ್ನು ಸ್ಥಾಪಿಸಿದ್ದು, ಜಾಗತಿಕ ನಿಯಂತ್ರಣ ಪ್ರಯತ್ನಗಳ ಅಧ್ಯಯನ ನಡೆಸಿದ ನಂತರ ಒಂದು ತಿಂಗಳೊಳಗೆ ಶಿಫಾರಸುಗಳನ್ನು ಜಾರಿ ಮಾಡಲು ನಿರ್ಧರಿಸಿದೆ ಎಂದು ಮಾಧ್ಯಮಗಳು ತಿಳಿಸಿವೆ.
ಕಳೆದ ವರ್ಷ, ಆಸ್ಟ್ರೇಲಿಯಾ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದ ಮೊದಲ ದೇಶವಾಯಿತು. ಮೊದಲ ತಿಂಗಳಲ್ಲಿ 4.7 ಮಿಲಿಯನ್ ಹದಿಹರೆಯದ ಖಾತೆಗಳನ್ನು ನಿಷ್ಕ್ರಿಯಗೊಳಿಸಿತು. ಇದೇ ರೀತಿಯ ಕಾನೂನುಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಆಸ್ಟ್ರೇಲಿಯಾದ ರೀತಿಯ ಅನುಷ್ಠಾನವನ್ನು ಜಾರಿಗೆ ತರಲು ಫ್ರಾನ್ಸ್, ಇಂಡೋನೇಷ್ಯಾ ಮತ್ತು ಮಲೇಷ್ಯಾ ಮುಂದಾಗಿದೆ.