ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸುಪ್ರೀಂನಿಂದ ದಯಾಮರಣ ಪಡೆದುಕೊಂಡಿದ್ದ ಹರೀಶ್‌ ರಾಣಾ ನಿಧನ; ಏಮ್ಸ್‌ನಲ್ಲಿ 11ನೇ ದಿನಕ್ಕೆ ಕೊನೆಯುಸಿರು

13 ವರ್ಷಗಳಿಂದ ಕೋಮಾದಲ್ಲಿದ್ದು ಸುಪ್ರೀಂ ಕೋರ್ಟ್‌ನಿಂದ ದಯಾಮರಣ ಪಡೆದುಕೊಂಡಿದ್ದ ಹರೀಶ್‌ ರಾಣಾ ಇಂದು ನಿಧನರಾಗಿದ್ದಾರೆ. ಮಾರ್ಚ್ 14 ರಂದು ಆಸ್ಪತ್ರೆಗೆ ದಾಖಲಾದ ನಂತರ, ಮಾರ್ಚ್ 16 ರಂದು ದಯಾಮರಣ ಪ್ರಕ್ರಿಯೆಯು ಪ್ರಾರಂಭಿಸಲಾಗಿತ್ತು. 2013ರಲ್ಲಿ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ಹರೀಶ್ ರಾಣಾ ಅವರು ಅಂದಿನಿಂದ ಕೋಮಾದಲ್ಲಿದ್ದರು. ಮಗನನ್ನು ಅಂದಿನಿಂದಲೂ ಪೋಷಕರು ನೋಡಿಕೊಂಡಿದ್ದರು.

ಸುಪ್ರೀಂನಿಂದ  ದಯಾಮರಣ ಪಡೆದುಕೊಂಡಿದ್ದ ಹರೀಶ್‌ ರಾಣಾ ನಿಧನ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 24, 2026 6:52 PM

ನವದೆಹಲಿ: 13 ವರ್ಷಗಳಿಂದ ಕೋಮಾದಲ್ಲಿದ್ದು ಸುಪ್ರೀಂ ಕೋರ್ಟ್‌ನಿಂದ ದಯಾಮರಣ ಪಡೆದುಕೊಂಡಿದ್ದ ಹರೀಶ್‌ ರಾಣಾ ಇಂದು (Harish Rana) ನಿಧನರಾಗಿದ್ದಾರೆ. ಮಾರ್ಚ್ 14 ರಂದು ಆಸ್ಪತ್ರೆಗೆ ದಾಖಲಾದ ನಂತರ, ಮಾರ್ಚ್ 16 ರಂದು ದಯಾಮರಣ ಪ್ರಕ್ರಿಯೆಯು ಪ್ರಾರಂಭಿಸಲಾಗಿತ್ತು. ಪ್ರಕ್ರಿಯೆಯ ಮೊದಲ ಹಂತದಲ್ಲಿ ಟ್ಯೂಬ್ (Verdict Case) ಮೂಲಕ ಅವರಿಗೆ ಆಹಾರ ಪೂರೈಕೆಯನ್ನು ನಿಲ್ಲಿಸಲಾಯಿತು. ನಂತರ ಎರಡನೇ ಹಂತದಲ್ಲಿ ನೀರನ್ನು ನಿಲ್ಲಿಸಲಾಯಿತು. ಅಂದಿನಿಂದ, ವೈದ್ಯರು ಅವರ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು.

13 ವರ್ಷಗಳಿಂದ ಕೋಮಾದಲ್ಲಿದ್ದ ಗಾಜಿಯಾಬಾದ್‌ನ ಯುವಕ ಹರೀಶ್ ರಾಣಾ ಅವರನ್ನು ಏಮ್ಸ್‌ನ ಐಆರ್‌ಸಿಹೆಚ್​ (ಇನ್ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆ)ನ ಉಪಶಾಮಕ ಆರೈಕೆ ವಾರ್ಡ್‌ಗೆ ದಾಖಲಿಸಲಾಗಿತ್ತು. ಮಾರ್ಚ್ 11 ರಂದು ಸುಪ್ರೀಂ ಕೋರ್ಟ್ ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾಮರಣಕ್ಕಾಗಿ ಅನುಮತಿ ನೀಡಿತ್ತು. ಬಳಿಕ ವೈದ್ಯರು ದಯಾಮರಣಕ್ಕೆ ಎರಡು ಹಂತದಲ್ಲಿ ತಯಾರಿ ನಡೆಸಿದ್ದರು. ಮೊದಲನೆಯ ಹಂತದಲ್ಲಿ ದಯಾಮರಣಕ್ಕೂ ಮುನ್ನ ಪೋಷಕರ ಭೇಟಿಗೆ ಅವಕಾಶ ನೀಡಲಾಗಿತ್ತು. ಆದರೆ ಎರಡನೇ ಹಂತದಲ್ಲಿ ಅದನ್ನು ರದ್ದುಗೊಳಿಸಲಾಯಿತು.

ದೀರ್ಘಕಾಲದಿಂದ ಆರೋಗ್ಯ ಚೇತರಿಕೆ ಕಾಣದವರಿಗೆ ನಡೆಸುವ ದಯಾಮರಣ ಪ್ರಕ್ರಿಯೆಯಲ್ಲಿ ಮೊದಲು ಹಂತಹಂತವಾಗಿ ಅವರ ಜೀವ ರಕ್ಷಕ ವ್ಯವಸ್ಥೆಯನ್ನು ಹಂತಹಂತವಾಗಿ ತೆಗೆದು ಹಾಕಲಾಗುತ್ತದೆ. ರಾಣಾ ಕುಟುಂಬ ಅಂಗಾಗ ದಾನಕ್ಕೆ ಈಗಾಗಲೇ ಒಪ್ಪಿಗೆ ನೀಡಿದೆ. ಅನಂತರ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.

ಹರೀಶ್ ರಾಣಾಗೆ ದಯಾಮರಣ ಆದೇಶ: ಯಾವ ಪೋಷಕರು ತಮ್ಮ ಮಕ್ಕಳಿಗೆ ಈ ರೀತಿಯ ಸಾವನ್ನು ಬಯಸುತ್ತಾರೆ? ತಂದೆ ಭಾವುಕ

ಪ್ರಕರಣದ ಹಿನ್ನೆಲೆಯೇನು?

2013ರಲ್ಲಿ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ಹರೀಶ್ ರಾಣಾ ಅವರು ಅಂದಿನಿಂದ ಕೋಮಾದಲ್ಲಿದ್ದರು. ಮಗನನ್ನು ಅಂದಿನಿಂದಲೂ ಪೋಷಕರು ನೋಡಿಕೊಂಡಿದ್ದರು. ಆದರೆ, ಯಾವುದೇ ಚೇತರಿಕೆ ಇಲ್ಲದ ಕಾರಣ, ಆತನಿಗೆ ದಯಾಮರಣ ನೀಡಬೇಕು ಎಂದು ಕೋರಿ ಪೋಷಕರು ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು. ಇದಕ್ಕೆ ಸುಪ್ರೀಂ ಕೂಡಾ ಅನುಮತಿ ನೀಡಿತ್ತು. ಪ್ರೊಫೆಸರ್ ಮತ್ತು ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ಸೀಮಾ ಮಿಶ್ರಾ ನೇತೃತ್ವದ ವಿಶೇಷ ವೈದ್ಯಕೀಯ ತಂಡವನ್ನು ದಯಾಮರಣ ಪ್ರಕ್ರಿಯೆ ಕಾರ್ಯಗತಗೊಳಿಸಲು ರಚಿಸಲಾಗಿತ್ತು.