KC Venugopal:"ದುರಂತ ಅಂತ್ಯ ಕಾಣುತ್ತಿದ್ದೆವು"; ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷದ ಕರಾಳತೆ ಬಿಚ್ಚಿಟ್ಟ ಕೆಸಿ ವೇಣುಗೋಪಾಲ್
ತಿರುವನಂತಪುರಂನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಪರಿಣಾಮ ಭಾನುವಾರ ಸಂಜೆ ಧಿಡೀರನೇ ಚೆನ್ನೈನಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ಇದೇ ವಿಮಾನದಲ್ಲಿ ಕಾಂಗ್ರೆಸ್ ನಾಯಕ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ (KC Venugopal) ಅವರು ಪ್ರಯಾಣಿಸುತ್ತಿದ್ದರು.


ನವದೆಹಲಿ: ತಿರುವನಂತಪುರಂನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಪರಿಣಾಮ ಭಾನುವಾರ ಸಂಜೆ ಧಿಡೀರನೇ ಚೆನ್ನೈನಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ಇದೇ ವಿಮಾನದಲ್ಲಿ ಕಾಂಗ್ರೆಸ್ ನಾಯಕ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ (KC Venugopal) ಅವರು ಪ್ರಯಾಣಿಸುತ್ತಿದ್ದರು. ಈ ಕುರಿತು ಅವರು ಟ್ವೀಟ್ ಮಾಡಿದ್ದು, ವಿಮಾನವು ‘ದುರಂತ ಅಂತ್ಯವನ್ನು ಕಾಣುವ ಭೀತಿಯನ್ನು ಕಂಡಿತ್ತು ಎಂದು ಅವರು ಬರೆದುಕೊಂಡಿದ್ದಾರೆ.
ಕೆ.ಸಿ.ವೇಣುಗೋಪಾಲ್ ಟ್ವೀಟ್‌ನಲ್ಲಿ, ‘ಇದು ಭಯಾನಕ ಪ್ರಯಾಣವಾಗಿತ್ತು. ನಾನು ಸೇರಿದಂತೆ ಹಲವರು ಸಂಸದರು ಹಾಗೂ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದ ತಿರುವನಂತಪುರಂ-ದೆಹಲಿ ವಿಮಾನ (ಎಐ 2455) ದುರಂತ ಅಂತ್ಯ ಕಾಣುವ ಭೀತಿಯನ್ನು ಹುಟ್ಟಿಸಿತು’ ಎಂದು ಹೇಳಿದ್ದಾರೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ನಾವು ಅಭೂತಪೂರ್ವ ಪ್ರಕ್ಷುಬ್ಧತೆಗೆ ಒಳಗಾದೆವು. ಸುಮಾರು ಒಂದು ಗಂಟೆಯ ನಂತರ, ಕ್ಯಾಪ್ಟನ್ ವಿಮಾನ ಸಿಗ್ನಲ್ ದೋಷವನ್ನು ಘೋಷಿಸಿದರು ಮತ್ತು ಚೆನ್ನೈಗೆ ತಿರುಗಿಸಿದರು’ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ದೇ ‘ಸುಮಾರು ಎರಡು ಗಂಟೆಗಳ ಕಾಲ, ನಾವು ವಿಮಾನ ನಿಲ್ದಾಣವನ್ನು ಸುತ್ತುವರೆದು ಲ್ಯಾಂಡ್ ಆಗಲು ಅನುಮತಿಗಾಗಿ ಕಾಯುತ್ತಿದ್ದೆವು, ಆದರೆ ಮೊದಲ ಪ್ರಯತ್ನದಲ್ಲಿ ಮತ್ತೊಂದು ವಿಮಾನವು ಅದೇ ರನ್‌ವೇಯಲ್ಲಿತ್ತು ಎಂದು ವರದಿಯಾಗುವವರೆಗೆ ಹೃದಯ ಕೈಯಲ್ಲಿ ಹಿಡಿದು ಕುಳಿತಿದ್ದೆವು. ನಮಗೆ ಬದುಕುವ ಅದೃಷ್ಟವಿತ್ತು. . ಈ ಘಟನೆಯನ್ನು ತುರ್ತಾಗಿ ತನಿಖೆ ಮಾಡಿ, ಹೊಣೆಗಾರಿಕೆಯನ್ನು ಸರಿಪಡಿಸಿ ಮತ್ತು ಅಂತಹ ಲೋಪಗಳು ಮತ್ತೆಂದೂ ಸಂಭವಿಸದಂತೆ ನೋಡಿಕೊಳ್ಳಬೇಕೆಂದು ನಾನು @DGCAIndia ಮತ್ತು @MoCA_GoI ಅವರನ್ನು ಒತ್ತಾಯಿಸುತ್ತೇನೆ’ ಎಂದು ಅವರು ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Air India: ಏರ್ ಇಂಡಿಯಾ ವಿಮಾನದಲ್ಲಿ ಜಿರಳೆಗಳು ಪತ್ತೆ; ಪ್ರಯಾಣಿಕರಿಂದ ಆಕ್ರೋಶ
ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ವಕ್ತಾರರು, ‘ತಿರುವನಂತಪುರಂನಿಂದ ದೆಹಲಿಗೆ ಆ.10ರಂದು ಹೊರಟಿದ್ದ ಎಐ2455 ವಿಮಾನದ ತಾಂತ್ರಿಕ ಸಿಬ್ಬಂದಿ, ತಾಂತ್ರಿಕ ದೋಷ ಕಂಡುಬಂದ ಸಂದೇಹದಿಂದ ಮತ್ತು ವಾಯುಮಾರ್ಗದ ಪ್ರತಿಕೂಲ ಹವಾಮಾನ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಚೆನ್ನೈಗೆ ತಿರುಗಿಸಿ ಅಗತ್ಯ ತಪಾಸಣೆಗಳನ್ನು ನಡೆಸಲಾಯಿತು. ಪ್ರಯಾಣಿಕರಿಗೆ ಆದ ತೊಂದರೆಗಳಿಗೆ ನಾವು ವಿಷಾದಿಸುತ್ತೇವೆ ಎಂದು ಅವರು ಹೇಳಿದ್ದಾರೆ.