ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ತಂದೆಯಿಂದಲೇ ಹತ್ಯೆಯಾದ ರಾಧಿಕಾ ಯಾದವ್ ಬಗ್ಗೆ ಸ್ನೇಹಿತೆಯ ಮಾತುಗಳು.. ಇಲ್ಲಿದೆ

ತಂದೆಯಿಂದಲೇ ಹತ್ಯೆಗೀಡಾದ ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (Tennis star Radhika Yadav) ಕುರಿತು ಅವರ ಸ್ನೇಹಿತೆ ಹೇಳಿರುವ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ. ರಾಧಿಕಾ ಯಾದವ್ ಸಾವನ್ನಪ್ಪಿದ ಮೂರು ದಿನಗಳ ಬಳಿಕ ಹಿಮಾನ್ಶಿಕಾ (Himaanshika) ಎಂಬವರು ತನ್ನ ಇನ್‌ಸ್ಟಾಗ್ರಾಮ್ ( Instagram) ಖಾತೆಯಿಂದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಬಗ್ಗೆ ಸ್ನೇಹಿತೆ ಹೇಳಿದ್ದೇನು?

ಗುರುಗ್ರಾಮ: ತಂದೆಯಿಂದಲೇ ಹತ್ಯೆಗೀಡಾದ ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (Tennis star Radhika Yadav) ಕುರಿತು ಅವರ ಸ್ನೇಹಿತೆ ಹೇಳಿರುವ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ. ರಾಧಿಕಾ ಯಾದವ್ ಸಾವನ್ನಪ್ಪಿದ ಮೂರು ದಿನಗಳ ಬಳಿಕ ಹಿಮಾನ್ಶಿಕಾ (Himaanshika) ಎಂಬವರು ತನ್ನ ಇನ್‌ಸ್ಟಾಗ್ರಾಮ್ ( Instagram) ಖಾತೆಯಿಂದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಆತ್ಮೀಯ ಸ್ನೇಹಿತೆ ರಾಧಿಕಾ ಯಾದವ್ ಬಗ್ಗೆ ಹೇಳಿಕೊಂಡಿದ್ದು, ಜೊತೆಗೆ ರಾಧಿಕಾ ಅವರ ಫೋಟೋಗಳು ಮತ್ತು ಸಣ್ಣ ಕ್ಲಿಪ್‌ಗಳನ್ನು ಹಂಚಿಕೊಂಡಿದ್ದಾರೆ.

ಏನಿದೆ ವಿಡಿಯೊದಲ್ಲಿ ?

ಹಿಮಾನ್ಶಿಕಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಎರಡು ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ಒಂದರಲ್ಲಿ ಅವರು ತಮ್ಮ ಆತ್ಮೀಯ ಸ್ನೇಹಿತೆ ರಾಧಿಕಾ ಯಾದವ್ ಬಗ್ಗೆ ಹೇಳಿದ್ದರೆ ಇನ್ನೊಂದರಲ್ಲಿ ರಾಧಿಕಾ ಅವರ ಫೋಟೋಗಳು ಮತ್ತು ಸಣ್ಣ ಕ್ಲಿಪ್‌ಗಳನ್ನು ಹಂಚಿಕೊಂಡಿದ್ದಾರೆ.

ನನ್ನ ಆತ್ಮೀಯ ಸ್ನೇಹಿತೆ ರಾಧಿಕಾಳನ್ನುಅವಳ ತಂದೆಯೇ ಕೊಲೆ ಮಾಡಿದ್ದಾರೆ. ಐದು ಬಾರಿ ಅವಳ ಮೇಲೆ ಗುಂಡು ಹಾರಿಸಿದ್ದಾರೆ. ನಾಲ್ಕು ಗುಂಡುಗಳು ಅವಳಿಗೆ ತಾಗಿದೆ. ಅವಳ ತಂದೆ ಸದಾ ಅವಳನ್ನು ದುರುತ್ತಿದ್ದನು. ಸಾಕಷ್ಟು ನಿಯಂತ್ರಣವನ್ನು ಹೇರಿದ್ದನು. ನಿರಂತರವಾಗಿ ಟೀಕಿಸುತ್ತಾ ಅವಳ ಜೀವನವನ್ನು ದುಃಖದಿಂದ ತುಂಬವಂತೆ ಮಾಡಿದ್ದನು. ತನ್ನ ಸ್ನೇಹಿತರ ಮಾತು ಕೇಳಿ ಅವಳ ಯಶಸ್ಸಿನ ಬಗ್ಗೆ ಅಸೂಯೆ ಪಡುತ್ತಿದ್ದ ಎಂದು ಹಿಮಾನ್ಶಿಕಾ ಬರೆದಿದ್ದಾರೆ.

ರಾಧಿಕಾ ತಮ್ಮ ಟೆನಿಸ್ ವೃತ್ತಿಜೀವನದಲ್ಲಿ ತುಂಬಾ ಶ್ರಮಿಸಿದ್ದಳು, ತಮ್ಮದೇ ಆದ ಅಕಾಡೆಮಿಯನ್ನು ಕೂಡ ನಿರ್ಮಿಸಿದ್ದಳು. ಅದಕ್ಕಾಗಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಳು. ಆದರೆ ಆಕೆ ಸ್ವತಂತ್ರಳಾಗಿರುವುದನ್ನು ಆಕೆಯ ತಂದೆಗೆ ಸಹಿಸಲಾಗಲಿಲ್ಲ. ಶಾರ್ಟ್ಸ್ ಧರಿಸಿದ್ದಕ್ಕಾಗಿ, ಹುಡುಗರೊಂದಿಗೆ ಮಾತನಾಡಿದ್ದಕ್ಕಾಗಿ, ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸಿದ್ದಕ್ಕಾಗಿ ಅವರು ಸದಾ ಆಕೆಯನ್ನು ಟೀಕಿಸುತ್ತಿದ್ದರು ಎಂದು ಹಿಮಾನ್ಶಿಕಾ ಹೇಳಿದ್ದಾರೆ.

ಹಿಮಾನ್ಶಿಕಾ ಸಿಂಗ್ ಮತ್ತು ರಾಧಿಕಾ ಯಾದವ್ ಸುಮಾರು 8- 10 ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ರಾಧಿಕಾ ಅವರನ್ನು ಒಳಗೊಂಡ ವೈರಲ್ ಆದ ಮ್ಯೂಸಿಕ್ ವಿಡಿಯೊ ಬಗ್ಗೆಯೂ ಮಾತನಾಡಿರುವ ಹಿಮಾನ್ಶಿಕಾ, ಈ ವಿಡಿಯೊ ಚಿತ್ರೀಕರಣಕ್ಕೆ ಅವಳ ತಂದೆಯೇ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಮಗಳ ಬಗ್ಗೆ ಜನರು ಮಾತನಾಡುತ್ತಾರೆ ಎಂಬ ಕಳವಳದಿಂದಾಗಿ ಅವರು ಈ ಎಲ್ಲಾ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಹೇಳಿದ್ದಾರೆ.

ರಾಧಿಕಾ ಮತ್ತು ನಾನು 2013ರಿಂದ ಒಟ್ಟಿಗೆ ಆಟವಾಡಲು ಪ್ರಾರಂಭಿಸಿದೆವು. ಸಾಕಷ್ಟು ಬಾರಿ ನಾವು ಒಟ್ಟಿಗೆ ಪ್ರಯಾಣ ಕೂಡ ಮಾಡಿದ್ದೇವೆ. ಆದರೆ ಆಕೆ ಯಾರೊಂದಿಗೂ ಹೆಚ್ಚು ಮಾತನಾಡುವುದನ್ನು ನಾನು ಎಂದಿಗೂ ನೋಡಿಲ್ಲ. ಹೆಚ್ಚಾಗಿ ಆಕೆ ತನ್ನ ಪೋಷಕರೊಂದಿಗೆ ಇರುತ್ತಿದ್ದಳು ಎಂದು ತಿಳಿಸಿದ್ದಾರೆ.

ಆಕೆಗೆ ಮನೆಯಲ್ಲಿ ಉಸಿರುಗಟ್ಟಿದ ವಾತಾವರಣ ಇರಬಹುದು ಎಂದು ನನಗೆ ಭಾಸವಾಗಿತ್ತು. ಯಾಕೆಂದರೆ ಆಕೆ ನಿರಂತರ ಪ್ರತಿಯೊಂದು ವಿಷಯವನ್ನು ಮನೆಯವರಿಗೆ ವಿವರಿಸಿ ಹೇಳಬೇಕಿತ್ತು. ಹೆಚ್ಚಾಗಿ ವಿಡಿಯೊ ಕರೆಗಳಿಗೆ ಆಕೆ ಉತ್ತರಿಸಬೇಕಿತ್ತು. ಆಕೆಯ ಟೆನಿಸ್ ಅಕಾಡೆಮಿ ಅವರ ಮನೆಯಿಂದ ಕೇವಲ 50 ಮೀಟರ್ ದೂರದಲ್ಲಿತ್ತು. ಆದರೆ ಆಕೆ ಅಲ್ಲಿಗೆ ಬಂದು ನಿಖರವಾದ ಸಮಯಕ್ಕೆ ಹಿಂತಿರುಗಬೇಕಿತ್ತು ಎಂದು ಹೇಳಿದ್ದಾರೆ ಹಿಮಾನ್ಶಿಕಾ.

ರಾಧಿಕಾ ಅದ್ಭುತ ತರಬೇತುದಾರರಾಗಿದ್ದರು. ಅವರ ಎಲ್ಲಾ ವಿದ್ಯಾರ್ಥಿಗಳು ಅವರನ್ನು ಇಷ್ಟಪಟ್ಟು ಗೌರವಿಸಿದ್ದರು ಎಂದಿರುವ ಹಿಮಾನ್ಶಿಕಾ, ತಮ್ಮ ಎರಡನೇ ವಿಡಿಯೊದಲ್ಲಿ ರಾಧಿಕಾ ಅವರ ಹಲವಾರು ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Ahmedabad Crash: ದುರಂತದ ನೆನಪು ಕಾಡುತ್ತಲೇ ಇದೆ.. ಯಾರೊಂದಿಗೂ ಮಾತನಾಡಲು ಆಗುತ್ತಿಲ್ಲ.. ವಿಶ್ವಾಸ್ ಸಂಕಟ

ತನಿಖೆ ಹಂತದಲ್ಲಿದೆ ಕೊಲೆ ಪ್ರಕರಣ

ರಾಷ್ಟ್ರಮಟ್ಟದ ಟೆನಿಸ್ ಪಟು ರಾಧಿಕಾ ಯಾದವ್ ಅವರನ್ನು ಜೂನ್ 10 ರಂದು ಗುರುಗ್ರಾಮ್‌ನಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ಆಕೆಯ ತಂದೆ ದೀಪಕ್ ಯಾದವ್ ಹತ್ಯೆ ಮಾಡಿದ್ದರು. ಬಳಿಕ ದೀಪಕ್ ಅವರನ್ನು ಬಂಧಿಸಲಾಗಿದ್ದು, ಈ ಪ್ರಕರಣದ ತನಿಖೆ ನಡೆಯುತ್ತಿದೆ.