ನವದೆಹಲಿ: ಬುಧವಾರ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಮತ್ತು ಅವರ ಮಾಜಿ ಸಹಾಯಕ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು (Ravneet Singh Bittu ) ನಡುವೆ ಮಾತಿನ ಚಕಮಕಿ ನಡೆಯಿತು. 2024 ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಿದ ಕಾಂಗ್ರೆಸ್‌ನಿಂದ ಮೂರು ಬಾರಿ ಸಂಸದರಾಗಿದ್ದ ರವನೀತ್ ಬಿಟ್ಟು ಅವರನ್ನು ಗಾಂಧಿಯವರು ತಮ್ಮ “ದೇಶದ್ರೋಹಿ ಸ್ನೇಹಿತ” ಎಂದು ಉಲ್ಲೇಖಿಸಿದರು. ಇದಕ್ಕೆ ಬಿಜೆಪಿ ನಾಯಕಿ ತಕ್ಷಣದ ಮತ್ತು ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದರು. ಇದಕ್ಕೆ ರಾಹುಲ್ ದೇಶ ಕೆ ದುಷ್ಮನ್” (ರಾಷ್ಟ್ರದ ಶತ್ರು) ಎಂದು ಕರೆದಿದ್ದಾರೆ.
ವಿಡಿಯೋ ನೋಡಿ
ಮೂರು ಬಾರಿ ಸಂಸದ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ (MoS) ಬಿಟ್ಟು, 2024 ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಪಾರ್ಲಿಮೆಂಟ್ ನ ಪ್ರಮುಖ ದ್ವಾರದ ಬಳಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಮಾತಿನ ಚಕಮಕಿ ನಡೆದಿದೆ. ರಾಹುಲ್ ಗಾಂಧಿ, "ಇಲ್ಲಿ ಒಬ್ಬ ದೇಶದ್ರೋಹಿ ನಡೆದುಕೊಂಡು ಹೋಗುತ್ತಿದ್ದಾರೆ. ಅವರ ಮುಖ ನೋಡಿ ಎಂದು ಹೇಳಿ, ಬಿಟ್ಟುಗೆ ಶೇಕ್ ಹ್ಯಾಂಡ್ ಮಾಡುತ್ತಾರೆ. ಹಲೋ, ಬ್ರದರ್ ನನ್ನ ದೇಶದ್ರೋಹಿ ಸ್ನೇಹಿತ. ಚಿಂತೆ ಮಾಡಬೇಡಿ. ಮುಂದೆ ಮತ್ತೆ ಕಾಂಗ್ರೆಸ್ ಗೆ ಬರ್ತೀರಾ ಎಂದಿದ್ದಾರೆ. ಆಗ ಶೇಕ್ ಹ್ಯಾಂಡ್ ಮಾಡದ ಬಿಟ್ಟು, ರಾಹುಲ್ ಗಾಂಧಿಯನ್ನು ದೇಶದ ಶತ್ರು ಅಂತಾ ಕರೆದಿದ್ದಾರೆ.
ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗಲಿ ಎಂದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್; ರಾಹುಲ್ ಗಾಂಧಿ ಹೆಸರೇಳಿ ಕಾಲೆಳೆದ ಬಿಜೆಪಿ
ಎಂಟು ಪ್ರತಿಪಕ್ಷಗಳ ಸದಸ್ಯರನ್ನು ಲೋಕಸಭೆಯಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಸಂಸತ್ ಆವರಣದಲ್ಲಿ ಮುಂಜಾನೆ ಪ್ರತಿಭಟನೆ ನಡೆಸಿದ್ದರು. ಸದನದ ನಿಯಮಗಳ ಉಲ್ಲಂಘನೆ ಮತ್ತು ಕುರ್ಚಿಯ ಮೇಲೆ ಕಾಗದಗಳನ್ನು ಎಸೆದಿದ್ದಕ್ಕಾಗಿ ಎಂಟು ಸಂಸದರನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ. ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಗಾಂಧಿಯವರ ಹೇಳಿಕೆಗಳನ್ನು ಖಂಡಿಸಿದರು. ನೀವು ಈ ಪಾಪ ಮಾಡಿದ್ದೀರಿ. ನೀವು ಸಿಖ್ಖರನ್ನು ಅವಮಾನಿಸಿದ್ದೀರಿ, ನಿಂದನೀಯ ಭಾಷೆಯನ್ನು ಬಳಸಿದ್ದೀರಿ, ಮತ್ತು ನಾವು ಇದನ್ನು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸುತ್ತೇವೆ. ನಾವು ಇದನ್ನು ಸಹಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.