Tahawwur Rana: ಅಜ್ಮಲ್ ಕಸಬ್ ಇದ್ದ ಸೆಲ್‌ನಲ್ಲೇ ತಹಾವ್ವುರ್ ರಾಣಾನನ್ನು ಇರಿಸಲಾಗುತ್ತಾ?
Tahawwur Rana: ತಹಾವ್ವುರ್ ರಾಣಾನನ್ನು ವಿಚಾರಣೆ ಅವಧಿಯಲ್ಲಿ, ಆತನನ್ನು ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿರುವ(Arthur Road prison) ಬ್ಯಾರಕ್ 12 ಸೆಲ್‌ನಲ್ಲಿ(Barrack No 12) ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ ಈ ಪ್ರಕರಣದಲ್ಲಿ ಗಲ್ಲಿಗೇರಿದ್ದ ಉಗ್ರ ಅಜ್ಮಲ್ ಕಸಬ್(Ajmal Kasab) ಇದ್ದಿದ್ದು ಇದೇ ಸೆಲ್‌ನಲ್ಲಿ.


ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹಾವ್ವುರ್ ರಾಣಾನನ್ನು(Tahawwur Rana) ಭಾರತಕ್ಕೆ ಇನ್ನೇನು ಕೆಲವೇ ಕ್ಷಣದಲ್ಲಿ ಕಾಲಿಡಲಿದ್ದಾನೆ. ಭಾರತಕ್ಕೆ ಆತನನ್ನು ಕರೆ ತರುತ್ತಿದ್ದಂತೆ ಆತನನ್ನು ಎನ್‌ಐಎ ವಿಚಾರಣೆಗೊಳಪಡಿಸಲಿದ್ದು, ಈ ವಿಚಾರಣೆ ಅವಧಿಯಲ್ಲಿ, ಆತನನ್ನು ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿರುವ(Arthur Road prison) ಬ್ಯಾರಕ್ 12 ಸೆಲ್‌ನಲ್ಲಿ(Barrack No 12) ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ ಈ ಪ್ರಕರಣದಲ್ಲಿ ಗಲ್ಲಿಗೇರಿದ್ದ ಉಗ್ರ ಅಜ್ಮಲ್ ಕಸಬ್(Ajmal Kasab) ಇದ್ದಿದ್ದು ಇದೇ ಸೆಲ್‌ನಲ್ಲಿ.
ಬ್ಯಾರಕ್ ಸಂಖ್ಯೆ 12 ಬಗ್ಗೆ ನಿಮಗೆಷ್ಟು ಗೊತ್ತು?
ಸಾಮಾನ್ಯವಾಗಿ ಆರ್ಥರ್ ರಸ್ತೆ ಜೈಲು ಎಂದು ಕರೆಯಲ್ಪಡುವ ಮುಂಬೈ ಕೇಂದ್ರ ಕಾರಾಗೃಹವನ್ನು 1925 ರಲ್ಲಿ ನಿರ್ಮಿಸಲಾಯಿತು ಮತ್ತು ಮೂರು ಎಕರೆಗಳಿಗೂ ಹೆಚ್ಚು ವಿಸ್ತೀರ್ಣವಿದೆ. ಇಲ್ಲಿ ಕೇವಲ 1100ಕೈದಿಗಳನ್ನು ಇರಿಸಬಹುದಾದ ಸಾಮರ್ಥ್ಯ ಹೊಂದಿದೆ. ಆದರೆ ಇಲ್ಲಿ ಸದ್ಯ 4,000 ಕೈದಿಗಳಿದ್ದಾರೆ. ಇದು ಇಲ್ಲಿನ ನೈರ್ಮಲ್ಯ ಮತ್ತು ಭದ್ರತೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಬ್ಯಾರಕ್ ಸಂಖ್ಯೆ 12 ಆರ್ಥರ್ ರಸ್ತೆ ಜೈಲಿನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೈ-ಸೆಕ್ಯೂರಿಟಿ ಸೆಲ್ ಇದಾಗಿದೆ. ಕಸಬ್ ವಿಚಾರಣೆಯನ್ನು ಎದುರಿಸುತ್ತಿರುವಾಗ ಅವನ ಭದ್ರತೆಗಾಗಿ ಇದನ್ನು ಪುನರ್ನಿರ್ಮಿಸಲಾಯಿತು ಮತ್ತು ವಿಶೇಷವಾಗಿ ಬಲಪಡಿಸಲಾಯಿತು. ಜೈಲಿನ ಪರಿಸ್ಥಿತಿಗಳ ಬಗ್ಗೆ ಇರುವ ಕಳವಳಗಳನ್ನು ಹೋಗಲಾಡಿಸಲು ಸರ್ಕಾರವು ಬ್ಯಾರಕ್ ಸಂಖ್ಯೆ 12 ಅನ್ನು ನವೀಕರಿಸಿತು.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಬ್ಯಾರಕ್ ಸಂಖ್ಯೆ 12 ಈಗ ಸಾಕಷ್ಟು ನೈಸರ್ಗಿಕ ಬೆಳಕು ಮತ್ತು ವಾತಾಯನ, ಪಾಶ್ಚಿಮಾತ್ಯ ಶೈಲಿಯ ಶೌಚಾಲಯ ಮತ್ತು 40-ಇಂಚಿನ ಎಲ್ಇಡಿ ದೂರದರ್ಶನವನ್ನು ಹೊಂದಿದೆ. ಈ ಸೌಲಭ್ಯವು 38.5-ಚದರ ಮೀಟರ್ ವ್ಯಾಯಾಮ ಪ್ರದೇಶ ಮತ್ತು 17.5-ಮೀಟರ್ ಬಫರ್ ವಲಯವನ್ನು ಒಳಗೊಂಡಿದೆ. ಕೈದಿಗಳಿಗೆ ಹಾಸಿಗೆಗಳು, ದಿಂಬುಗಳು ಮತ್ತು ಬೆಡ್‌ಶೀಟ್‌ಗಳನ್ನು ಒದಗಿಸಲಾಗುತ್ತದೆ ಮತ್ತು ಊಟವನ್ನು ಮೆಲಮೈನ್ ಪಾತ್ರೆಗಳಲ್ಲಿ ನೀಡಲಾಗುತ್ತದೆ. ಕೈದಿಳು ಜೈಲು ಗ್ರಂಥಾಲಯ ಮತ್ತು ಪತ್ರಿಕೆಗಳನ್ನು ಓದಲು ಅವಕಾಶ ಕಲ್ಪಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Tahawwur Rana: ತಹವ್ವುರ್ ರಾಣಾ ಭಾರತಕ್ಕೆ ಬರಲು ಕ್ಷಣಗಣನೆ; ಏರ್ಪೋರ್ಟ್‌ನಲ್ಲಿ ಬುಲೆಟ್ ಫ್ರೂಪ್ ಕಾರು, ಕಮಾಂಡೋಗಳು ಸಜ್ಜು
ಹೈ ಪ್ರೊಫೈಲ್ ಕೇಸ್ ಕೈದಿಗಳು ಈ ಸೆಲ್‌ನಲ್ಲಿದ್ದರು
ಕಸಾಬ್ ಹೊರತುಪಡಿಸಿ, ಬ್ಯಾರಕ್ ಸಂಖ್ಯೆ 12ರಲ್ಲಿ ನಟ ಸಂಜಯ್ ದತ್, ಸ್ಟಾರ್ ಟಿವಿ ಸಿಇಒ ಪೀಟರ್ ಮುಖರ್ಜಿಯಾ, ಪಿಎನ್‌ಬಿ ಹಗರಣದ ಆರೋಪಿ ವಿಪುಲ್ ಅಂಬಾನಿ ಸೇರಿದಂತೆ ಹಲವಾರು ಗಣ್ಯ ಕೈದಿಗಳನ್ನು ಇರಿಸಲಾಗಿತ್ತು. ಶಿವಸೇನೆ (ಯುಬಿಟಿ)ಯ ಸಂಜಯ್ ರಾವತ್ ಮತ್ತು ಎನ್‌ಸಿಪಿಯ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಅವರಂತಹ ಮಹಾರಾಷ್ಟ್ರದ ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಇದೇ ಸೆಲ್‌ನಲ್ಲಿದ್ದರು ಎನ್ನಲಾಗಿದೆ.