ಗಾಂಧಿನಗರ: ದೇಶದಲ್ಲಿ ಮತ್ತೆ ಎಚ್‌ಎಂಪಿವಿ ವೈರಸ್‌ನ(HMPV Virus) ಹಾವಳಿ ಹೆಚ್ಚಾಗಿದ್ದು, ಗುಜರಾತ್‌ನ(Gujarat) ಅಹಮದಾಬಾದ್(Ahmedabad) ನಗರದ 4 ವರ್ಷದ ಬಾಲಕ ವೈರಸ್‌ಗೆ ತುತ್ತಾಗಿದ್ದಾನೆ. ಇದೀಗ ರಾಜ್ಯದಲ್ಲಿ ಎಚ್‌ಎಂಪಿವಿ ಪ್ರಕರಣಗಳ ಸಂಖ್ಯೆಯು 8ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಗೋಟಾ ಪ್ರದೇಶದ ಬಾಲಕನಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವನ ಸ್ಥಿತಿ ಸ್ಥಿರವಾಗಿದೆ ಎಂದು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ವೈದ್ಯಾಧಿಕಾರಿ ಭವಿನ್ ಸೋಲಂಕಿ ತಿಳಿಸಿದ್ದಾರೆ.
ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಬಾಲಕನನ್ನು ಜನವರಿ 28ರಂದು ಎಸ್‌ಜಿವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ನಡೆಸಿದ ಪರೀಕ್ಷೆಯಲ್ಲಿ ಆತ ಎಚ್‌ಎಂಪಿವಿ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ರೋಗಿಯ ಕುಟುಂಬ ಇತ್ತೀಚೆಗೆ ಯಾವುದೇ ವಿದೇಶ ಪ್ರಯಾಣ ಮಾಡಿಲ್ಲ ಎನ್ನಲಾಗಿದೆ.
ಈ ಪ್ರಕರಣದ ಮೊದಲು ಅಹಮದಾಬಾದ್ ನಗರದಲ್ಲಿ HMPVಯ ಆರು ಪ್ರಕರಣಗಳು ದಾಖಲಾಗಿದ್ದವು. ಇವರಲ್ಲಿ ಮೂವರು ರೋಗಿಗಳು ಬೇರೆ ಸ್ಥಳಗಳಿಗೆ ಸೇರಿದವರಾಗಿದ್ದು, ಇಲ್ಲಿಯ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಎಲ್ಲ ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೇ ಅವರನ್ನು ಡಿಚ್‌ಚಾರ್ಜ್ ಮಾಡಲಾಗಿದ ಎಂದು ವೈದ್ಯ ಸೋಲಂಕಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:HMPV: ಕೋವಿಡ್ 19ಗಿಂತ HMPV ಹೇಗೆ ಭಿನ್ನ? ಇವೆರಡರ ರೋಗ ಲಕ್ಷಣಗಳೇನು? ಇಲ್ಲಿದೆ ವಿವರವಾದ ಮಾಹಿತಿ
ಇಲ್ಲಿಯವರೆಗೆ ಗುಜರಾತ್‌ನಲ್ಲಿ ಎಂಟು HMPV ಪ್ರಕರಣಗಳು ದಾಖಲಾಗಿದ್ದು, ಅಹಮದಾಬಾದ್‌ನಲ್ಲಿ ಏಳು ಮತ್ತು ಸಬರ್ಕಾಂತ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಎಚ್ ಎಂ ಪಿವಿ ವೈರಸ್‌ನಿಂದ ಕೆಮ್ಮು, ಜ್ವರ, ಉಸಿರಾಟದ ತೊಂದರೆ ಸೇರಿ ಜ್ವರದ ಲಕ್ಷಣಗಳು ಉಂಟಾಗುತ್ತವೆ. ತೀವ್ರ ಪ್ರಕರಣಗಳಲ್ಲಿ ಬ್ರಾಂಕೈಟೀಸ್ ಅಥವಾ ನ್ಯೂಮೋನಿಯಾಕ್ಕೆ ಕಾರಣವಾಗಬಹುದು. ಬಹು ಮುಖ್ಯವಾಗಿ ಮಕ್ಕಳು, ವೃದ್ಧರು ಸೇರಿ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳಲ್ಲಿ ಸೋಂಕು ಹೆಚ್ಚಾಗಿ ಕಂಡು ಬರುತ್ತದೆ.