Goa Night Club Fire: 25 ಜನರನ್ನು ಬಲಿ ಪಡಿದ ಗೋವಾ ನೈಟ್ ಕ್ಲಬ್; ಧಗಧಗ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್
ಉತ್ತರ ಗೋವಾದ ಅರ್ಪೋರಾದ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 ಜನರು ಮೃತಪಟ್ಟಿದ್ದು, 50 ಕ್ಕೂ ಅಧಿಕ ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟಕ್ಕೆ ನಿಖರವಾದ ಕಾರಣವಿನ್ನು ತಿಳಿದು ಬಂದಿಲ್ಲ. ಬಲಿಯಾದವರಲ್ಲಿ ಮೂವರು ಮಹಿಳೆಯರು ಮತ್ತು 20 ಪುರುಷರು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಗೋವಾ ನೈಟ್ ಕ್ಲಬ್ ದುರಂತ -
ಪಣಜಿ: ಉತ್ತರ ಗೋವಾದ ಅರ್ಪೋರಾದ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 25 (Goa Night Club Fire) ಜನರು ಮೃತಪಟ್ಟಿದ್ದು, 50 ಕ್ಕೂ ಅಧಿಕ ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟಕ್ಕೆ ನಿಖರವಾದ ಕಾರಣವಿನ್ನು ತಿಳಿದು ಬಂದಿಲ್ಲ. ಆಕಾಶದಲ್ಲಿ ದಟ್ಟವಾದ ಹೊಗೆ ಆವರಿಸುತ್ತಿದ್ದಂತೆ ಜ್ವಾಲೆಗಳು ಕಟ್ಟಡವನ್ನು ಆವರಿಸುತ್ತಿರುವ ವಿಡಿಯೋ (Viral Video) ವೈರಲ್ ಆಗಿದೆ. ಅಗ್ನಿಶಾಮಕ ದಳ ಮತ್ತು ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಲು ಮತ್ತು ಅದನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದವು. ಆದರೆ ಅಷ್ಟರಲ್ಲಾಗಲೇ 25 ಜನರು ಮೃತಪಟ್ಟಿದ್ದರು.
ಬಲಿಯಾದವರಲ್ಲಿ ಮೂವರು ಮಹಿಳೆಯರು ಮತ್ತು 20 ಪುರುಷರು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಈ ದುರಂತದಿಂದ ತಾವು ತೀವ್ರ ನೊಂದಿರುವುದಾಗಿ ಬಿಜೆಪಿ ಶಾಸಕ ಮೈಕೆಲ್ ಲೋಬೊ ಹೇಳಿದ್ದಾರೆ. ಪ್ರವಾಸಿಗರು ಯಾವಾಗಲೂ ಗೋವಾವನ್ನು ಬಹಳ ಸುರಕ್ಷಿತ ತಾಣವೆಂದು ಪರಿಗಣಿಸಿದ್ದಾರೆ, ಆದರೆ ಈ ಅಗ್ನಿ ಅವಘಡವು ಬಹಳ ಅಘಾತಕಾರಿಯಾಗಿದೆ, ಮತ್ತು ಇಂತಹ ಘಟನೆಗಳು ಭವಿಷ್ಯದಲ್ಲಿ ನಡೆಯಬಾರದು. ಈ ಸಂಸ್ಥೆಗಳಲ್ಲಿರುವ ಪ್ರವಾಸಿಗರು ಮತ್ತು ಕಾರ್ಮಿಕರ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಬೆಂಕಿ ಅವಘಡ ಉಂಟಾದಾಗ ಹೆಚ್ಚಿನವರು ಬೇಸ್‌ಮೆಂಟ್ ಕಡೆಗೆ ಓಡಿದ್ದರಿಂದ ಹೆಚ್ಚಿನ ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
Massive #fire breaks out at Birch by Romeo Lane in Arpora; initial reports indicate some major casualties. Several fire tenders at the spot, reinforcement from Fire & Emergency Services at headquarters sent #BreakingNews #Goa @Goa_Police @DGP_Goa @spnorthgoa @dip_goa pic.twitter.com/FWhW5GqGSP
— The Goan 🇮🇳 (@thegoanonline) December 6, 2025
ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಈ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಇಂದು ನಮಗೆಲ್ಲರಿಗೂ ಬಹಳ ನೋವಿನ ದಿನ. ಅರ್ಪೋರಾದಲ್ಲಿ ನಡೆದ ಈ ಭೀಕರ ಅಗ್ನಿ ಅವಘಡದಲ್ಲಿ 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅನಿರೀಕ್ಷಿತ ನಷ್ಟದಲ್ಲಿ ದುಃಖಿತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ತಿಳಿಸುತ್ತೇನೆ. ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎಂದು ಅವರು ಟ್ವೀಟ್ ಮಾಡಿದ್ದಾರೆ.
ಗೋವಾ ನೈಟ್ ಕ್ಲಬ್ ಬೆಂಕಿ ದುರಂತಕ್ಕೆ ಕಾರಣವೇನು? ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಪೊಲೀಸರು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟಿರುವ ಮೃತದೇಹಗಳನ್ನು ಕ್ಲಬ್ ನಿಂದ ಹೊರತೆಗೆಯಲಾಗಿದೆ. ಭಾನುವಾರ ಮುಂಜಾನೆಯವರೆಗೂ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಪೊಲೀಸರ ಪ್ರಕಾರ, ಈ ಬೆಂಕಿ ಹೊತ್ತಿಕೊಳ್ಳಲು ಮಧ್ಯರಾತ್ರಿ ಸುಮಾರಿಗೆ ಸಿಲಿಂಡರ್ ಸ್ಫೋಟವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ.