Pune Man Murder Case: ಕೇತನ್ ಕೊಲೆಯ ಕೆಲವೇ ತಾಸುಗಳ ಮೊದಲು ಕೆಫೆಯೊಂದರಲ್ಲಿ ಪ್ರಿಯಕರನನ್ನು ಭೇಟಿಯಾದ ಸಿಯಾ; ಮರ್ಡರ್ ಪ್ಲ್ಯಾನ್ ತಯಾರಾಗಿದ್ದೇ ಇಲ್ಲಿ
Siya Goyal: ಮಹಾರಾಷ್ಟ್ರದಲ್ಲಿ ನಡೆದ ಯುವ ಉದ್ಯಮಿಯ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ ತನ್ನ ಪ್ರಿಯಕರ ಚೇತನ್ ಜತೆ ಸೇರಿ ಕೊಲೆ ಮಾಡಿದ್ದು, ಇವರಿಬ್ಬರ ಸಂಚಿನ ವಿವರ ಇದೀಗ ಬೆಳಕಿವೆ ಬಂದಿದೆ.
ಕೇತನ್ ಮತ್ತು ಸಿಯಾ ಗೋಯಲ್ (ಸಂಗ್ರಹ ಚಿತ್ರ) -
ಮುಂಬೈ, ಜೂ. 24: ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ ಜೂನ್ 18ರಂದು ನಡೆದಿದ್ದ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರ ಸಾವಿನ ಪ್ರಕರಣದ ನಿಗೂಢತೆ ಒಂದೊಂದಾಗಿ ಹೊರ ಬೀಳುತ್ತಿದೆ (Pune Man Murder Case). ಕೇತನ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಬಾಬುಲಾಲ್ ಚೌಧರಿ ಕೊಲೆ ಮಾಡಿದ್ದು, ಸದ್ಯ ಅವರನ್ನು ಬಂಧಿಸಲಾಗಿದೆ. ಇದೀಗ ಅವರು ಕೇತನ್ ಕೊಲೆಗೆ ರೂಪಿಸಿದ ಸಂಚಿನ ವಿವರ ಬಯಲಾಗಿದೆ. ಕೊಲೆಗೆ ಗಂಟೆಗಳ ಮುನ್ನ ಅವರಿಬ್ಬರು ಕೆಫೆಯೊಂದರಲ್ಲಿ ಭೇಟಿಯಾಗಿ ಕೊಲೆಯ ರೂಪುರೇಷೆ ತಯಾರಿಸಿದ್ದರು ಎನ್ನುವುದು ಗೊತ್ತಾಗಿದೆ.
ತನ್ನ ಹುಟ್ಟುಹಬ್ಬದ ನೆಪದಲ್ಲಿ 20 ವರ್ಷದ ಸಿಯಾ ಕೇತನ್ ಅವರನ್ನು ಲೋಹಗಢ ಕೋಟೆಗೆ ಕರೆದುಕೊಂಡು ಬಂದು ಅಲ್ಲಿ ಪ್ರಿಯಕರ ಚೇತನ್ (22) ಸಹಾಯದಿಂದ ಕಣಿವೆಗೆ ದೂಡಿ ಕೊಲೆ ಮಾಡಿ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದಳು. ಫೆಬ್ರವರಿಯಲ್ಲಿ ಕೇತನ್ ಮತ್ತು ಸಿಯಾ ನಿಶ್ಚಿತಾರ್ಥ ನಡೆದಿದ್ದು, ನವೆಂಬರ್‌ನಲ್ಲಿ ಮದುವೆ ನಿಗಧಿಯಾಗಿತ್ತು.
ಸಿಯಾ ಗೋಯಲ್ ಹುಟ್ಟುಹಬ್ಬದಂದು ಸರ್‌ಪ್ರೈಸ್ ನೀಡಿದ್ದ ಕೇತನ್:
Dear girls for God's sake,don't kill an innocent guy for your own lust
— Munesh Yadav🇮🇳 (@95MuneshYadav) June 24, 2026
Here is the Ketan Agrawal from Pune a well known businessman is allegedly killed by his fiancee Siya Agarwal with the help of her BF Chetan
He gave 1 precious gift to her daily but she planned something else😭 pic.twitter.com/e0VWySIgca
ಕೆಫೆಯಲ್ಲಿ ಭೇಟಿಯಾಗಿ ಸಂಚು ರೂಪಿಸಿದ್ದ ಜೋಡಿ
ʼʼಕೇತನ್ ಅವರನ್ನು ಲೋಹಗಢ ಕೋಟೆಗೆ ಬರುವಂತೆ ಸೂಚಿಸಿದ್ದ ಸಿಯಾ ಬಳಿಕ ಕೆಫೆಯೊಂದರಲ್ಲಿ ಚೇತನ್‌ನನ್ನು ಭೇಟಿಯಾಗಿ ಯಾವ ರೀತಿ ಕೊಲೆ ಮಾಡಬಹುದು ಎಂದು ಸಂಚು ರೂಪಿಸಿದ್ದಳುʼʼ ಎಂದು ಪೊಲೀಸರು ತಿಳಿಸಿದ್ದಾರೆ. ʼʼಸಹ್ಯಾದ್ರಿ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 3,300 ಅಡಿ ಎತ್ತರದಲ್ಲಿರುವ ಲೋಹಗಡ್ ಕೋಟೆಗೆ ಭೇಟಿ ನೀಡುವಂತೆ ಸಿಯಾ ಹಲವು ಬಾರಿ ಕೇತನ್‌ನ ಮನವೊಲಿಸಿದ್ದಳುʼʼ ಎಂದು ತನಿಖೆಯ ಭಾಗವಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಮದುವೆಗಾಗಿ 17 ಕೋಟಿ ರುಪಾಯಿ ಕೊಟ್ಟು ಅರಮನೆ ಬುಕ್ ಮಾಡಿದವ ಹೆಣವಾದ!
ಅಚ್ಚರಿ ಎಂದರೆ ಮೇ 31ರಂದು ಕೇತನ್ ಮತ್ತು ಸಿಯಾ ಲೋಹಗಢ ಕೋಟೆಗೆ ತೆರಳಿದ್ದರು. ಅದಾಗಿ 4 ದಿನಗಳ ಬಳಿಕ ಮತ್ತೆ ಕೋಟೆಗೆ ಭೇಟಿ ನೀಡುವಂತೆ ಸಿಯಾ ಹೇಳಿದ್ದಳು. ಆದರೆ ಕೇತನ್ ತಾಯಿ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈ ಮೂಲಕ ಕೇತನ್ ಸಾವಿನಿಂದ ಬಚಾವಾಗಿದ್ದ. ಇದರಿಂದ ನಿರಾಸೆಗೊಳಗಾದರೂ ಸಿಯಾ ಪ್ರಯತ್ನ ಬಿಡಲಿಲ್ಲ. ಮತ್ತೆ ಜೂನ್ 14ರಂದು ಕೇತನ್ ಬಳಿ ಇನ್ನೊಮ್ಮೆ ಲೋಹಗಢ ಕೋಟೆಗೆ ಭೇಟಿ ನೀಡಲು ಪ್ರಸ್ತಾವಿಸಿದ್ದಳು. ಈ ಬಾರಿ ಕೇತನ್ ಒಪ್ಪಿಕೊಂಡಿದ್ದರು.
ಆ ದಿನ ಸಿಯಾ ಬಂಡೆಯಿಂದ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಳು. ಆದರೆ ಕೇತನ್ ಪೊದೆ ಹಿಡಿದು ಬದುಕಿಕೊಂಡಿದ್ದರು. ತಳ್ಳಿದ್ದು ಏಕೆ ಎಂದು ಕೇಳಿದಾಗ ಹಾವು ಇತ್ತು ಎಂದು ಹೇಳಿ ತಪ್ಪಿಸಿಕೊಂಡಿದ್ದಳು.
ಕೊಲೆ ಮಾಡಲು ಮಾಸ್ಟರ್ ಪ್ಲಾನ್; ವಿದೇಶಕ್ಕೆ ಹೋಗದಂತೆ ತಡೆಯಲು ಭಾವಿ ಪತಿಯ ಪಾಸ್‌ಪೋರ್ಟ್ ಕದ್ದಿದ್ದ ಸಿಯಾ
ಕೊಲೆಯ ಪಯತ್ನ ಕೈಬಿಡದ ಸಿಯಾ
ಇಷ್ಟಾಗಿಯೂ ಸಿಯಾ ಸುಮ್ಮನಾಗಿರಲಿಲ್ಲ. ಕೊಲೆಗೆ ಸಂಚು ರೂಪಿಸುತ್ತಲೇ ಇದ್ದಳು. ಇದರ ಭಾಗವಾಗಿ ಜೂನ್ 18ರ ಬೆಳಗ್ಗೆ ಪುಣೆಯ ಕೆಫೆಯೊಂದರಲ್ಲಿ ಸಿಯಾ ಮತ್ತು ಚೇತನ್ ಭೇಟಿಯಾದರು. ಅಲ್ಲಿ ಕೇತನ್‌ನ ಕೊಲೆಗೆ ಸಂಚು ರೂಪಿಸಲಾಯಿತು. ಕೋಟೆಯಲ್ಲಿ ಮೇಲಿನಿಂದ ತಳ್ಳಲು ಸೂಕ್ತ ಸ್ಥಳ ಯಾವುದು ಎನ್ನುವ ಬಗ್ಗೆ ಚರ್ಚೆ ನಡೆಸಿ ಪಕ್ಕಾ ಪ್ಲ್ಯಾನ್ ತಯಾರಿಸಿದರು. ಪ್ಲ್ಯಾನ್ ಪ್ರಕಾರ ಸಿಯಾ ಸಂಜೆ ಕೇತನ್‌ನನ್ನು ಮತ್ತೆ ಕೋಟೆಗೆ ಕರೆದುಕೊಂಡು ಹೋದಳು. ಈ ಬಾರಿ ಚೇತನ್ ಇವರನ್ನು ಹಿಂಬಾಲಿಸಿದ್ದ. ಕೋಟೆಯ ಮೇಲಿನಿಂದ ಚೇತನ್ ಮತ್ತು ಸಿಯಾ ಸೇರಿ ಕೇತನ್‌ನನ್ನು ಕಣಿವೆಗೆ ತಳ್ಳಿದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಪರಿಚಯವಾದ ಸುಮಾರು 7 ತಿಂಗಳಿಂದ ಸಿಯಾ ಮತ್ತು ಚೇತನ್ 2,004 ಬಾರಿ ಕರೆ ಮಾಡಿದ್ದು, 238 ಗಂಟೆಗಳ ಕಾಲ ಸಂಭಾಷಣೆ ನಡೆಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.