ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

I Love Muhammad Controversy: 50 ವರ್ಷಗಳ ಹಿಂದೆ ಹುಟ್ಟಿಕೊಂಡ ಲೋಗೋ 'ಐ ಲವ್ ಮುಹಮ್ಮದ್' ಪೋಸ್ಟರ್‌ಗಳಿಗೆ ಸ್ಫೂರ್ತಿಯಾಗಿದ್ದು ಹೇಗೆ?

ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ತೀವ್ರಗೊಂಡಿರುವ 'ಐ ಲವ್ ಮುಹಮ್ಮದ್' ಅಭಿಯಾನಕ್ಕೆ ಸ್ಫೂರ್ತಿ ಸುಮಾರು 50 ವರ್ಷಗಳ ಹಿಂದೆ ರೂಪಿಸಿದ್ದ ಪೋಸ್ಟರ್. ಭಾರತದಲ್ಲಿ ಇದು 2000ರ ದಶಕದ ಆರಂಭದ ವೇಳೆಗೆ ಹುಟ್ಟುಕೊಂಡಿದ್ದರೂ ಇದರ ಹಿನ್ನೆಲೆ ಬಹು ದೂರದಿಂದ ಬಂದಿರುವಂತದ್ದು.

ನವದೆಹಲಿ: ಸುಮಾರು 50 ವರ್ಷಗಳ ಹಿಂದಿನ ಘಟನೆಯೊಂದು ಮತ್ತೆ ಈಗ ಭಾರಿ ಚರ್ಚೆಯಲ್ಲಿದೆ. 'ಐ ಲವ್ ಮುಹಮ್ಮದ್' ಅಭಿಯಾನ (I Love Muhammad Controversy) ಇತ್ತೀಚೆಗೆ ತೀವ್ರಗೊಂಡಿದ್ದರೂ ಈ ಅಭಿಯಾನಕ್ಕೆ ಪ್ರೇರಣೆಯಾಗಿದ್ದು ಸುಮಾರು 50 ವರ್ಷಗಳ ಹಿಂದಿನ ಪೋಸ್ಟರ್. 2000ರ ದಶಕದ ಆರಂಭದ ವೇಳೆಗೆ ಹುಟ್ಟುಕೊಂಡಿದ್ದ ಈ ಪೋಸ್ಟರ್ (I love poster) ಪ್ರೀತಿ, ಗುರುತು ಮತ್ತು ಸಾರ್ವತ್ರಿಕ ಅಭಿವ್ಯಕ್ತಿಯಾಗಿ ರೂಪುಗೊಂಡಿತ್ತು. ಇದು ಕಳೆದ ಸೆಪ್ಟೆಂಬರ್ ಅಂತ್ಯದಲ್ಲಿ ರಾವತ್‌ಪುರದಲ್ಲಿ (Rawatpur) ಭುಗಿಲೆದ್ದ ಉದ್ವಿಗ್ನತೆಗೆ (I Love Muhammad) ಮುನ್ನುಡಿ ಬರೆದಿತ್ತು.

ಭಕ್ತಿಯ ರೂಪದಲ್ಲಿದ್ದ ಪೋಸ್ಟರ್ ಒಂದು ಬಹುಬೇಗನೆ ವಿವಾದವನ್ನು ಉಂಟು ಮಾಡಿತು. ಇದರಿಂದ ಬರೇಲಿ ಸೇರಿದಂತೆ ಉತ್ತರ ಪ್ರದೇಶದ ಕೆಲವು ನಗರಗಳಲ್ಲಿ ಮೆರವಣಿಗೆಗಳು, ಪ್ರತಿಭಟನೆಗಳು ನಡೆದವು. ಎಫ್‌ಐಆರ್‌ಗಳು ದಾಖಲಾದವು. ಧಾರ್ಮಿಕ ಅಭಿವ್ಯಕ್ತಿ ಪ್ರಚೋದನೆಯಾಗಿ ಕಂಡು ವಾದ ವಿವಾದವನ್ನು ಮತ್ತಷ್ಟು ಹೆಚ್ಚಿಸಿತ್ತು.

ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬಿರಿದ ಈ ʼಐ ಲವ್ ಮುಹಮ್ಮದ್ʼ ಚಿಹ್ನೆ ಮೊದಲು ಹುಟ್ಟಿಕೊಂಡಿದ್ದು 1970 ರ ದಶಕದಲ್ಲಿ. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ. ಅಪರಾಧ, ಆರ್ಥಿಕ ಕುಸಿತದಿಂದ ಕಂಗೆಟ್ಟಿದ್ದ ನ್ಯೂಯಾರ್ಕ್ ರಾಜ್ಯ ಮತ್ತೆ ಚಿಗುರಲು ಜಾಹೀರಾತು ಅಭಿಯಾನವನ್ನು ನಡೆಸಿತ್ತು. ಇದಕ್ಕಾಗಿ ವೆಲ್ಸ್ ರಿಚ್ ಗ್ರೀನ್ ಸಂಸ್ಥೆಯು ʼಐ ಲವ್ ನ್ಯೂಯಾರ್ಕ್ʼ ಎಂಬ ಘೋಷಣೆಯನ್ನು ಬರೆದಿತ್ತು. ಅನಂತರ ಗ್ರಾಫಿಕ್ ಡಿಸೈನರ್ ಮಿಲ್ಟನ್ ಗ್ಲೇಸರ್ ʼI 🤍 NYʼ ಲೋಗೋವನ್ನು ಬರೆದರು. ಇದು ವ್ಯಕ್ತಿಯನ್ನು ಪ್ರತಿನಿಧಿಸುತ್ತದೆ, ಹೃದಯದ ಭಾವನೆಯನ್ನು ಸಂಕೇತಿಸುತ್ತದೆ ಮತ್ತು ಸ್ಥಳವನ್ನು ಸೂಚಿಸುತ್ತದೆ ಎಂದು ಹೇಳಿರುವ ಅವರು ಇದನ್ನು ಸ್ಪಷ್ಟತೆ ಮತ್ತು ಅಸ್ಪಷ್ಟತೆಯ ಮಿಶ್ರಣ ಎಂದು ಕರೆದರು.

ಮೊದಲ ಬಾರಿಗೆ 1977ರಲ್ಲಿ ಈ ಲೋಗೋ ಕಾಣಿಸಿಕೊಂಡಿತ್ತು. ಬಳಿಕ ಬಹುಬೇಗನೆ ಇದು ಜನಪ್ರಿಯತೆ ಗಳಿಸಿತು. 9/11ರ ಅನಂತರ ಗ್ಲೇಸರ್ ಇದನ್ನು ʼಐ ಲವ್ ನ್ಯೂಯಾರ್ಕ್ ಮೋರ್ ದನ್ ಎವರ್ʼ ಎಂದು ಮರುರೂಪಿಸಿದರು. ಈ ಲೋಗೋ ನ್ಯೂಯಾರ್ಕ್ ರಾಜ್ಯದ ಆರ್ಥಿಕ ಅಭಿವೃದ್ಧಿ ಇಲಾಖೆಯಿಂದ ಈಗಲೂ ಟ್ರೇಡ್‌ಮಾರ್ಕ್ ಆಗಿದೆ.

ನ್ಯೂಯಾರ್ಕ್ ಬಳಿಕ ಹೃದಯ ಲೋಗೋ ತೆಗೆದು ಹಾಕಿದರೂ ಇದು ಭಾರತದ ಸಂಪರ್ಕಕ್ಕೆ ಬಹುಬೇಗನೆ ಬಂದಿತ್ತು. ಇದರಿಂದಲೇ "ಐ 🤍 ಮುಹಮ್ಮದ್" ಹುಟ್ಟಿಕೊಂಡಿತ್ತು.

ಇದನ್ನೂ ಓದಿ: I Love Muhammad: ಮತ್ತೆ ಸದ್ದು ಮಾಡಿದ ಬಲ್ಡೋಜರ್; 'ಐ ಲವ್ ಮುಹಮ್ಮದ್’ ವಿವಾದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಯೋಗಿ ಸರ್ಕಾರ

"ಐ ಲವ್ ಮುಹಮ್ಮದ್" ವಿನ್ಯಾಸವನ್ನು ಹೊರಗಿನಿಂದ ನೇರವಾಗಿ ಆಮದು ಮಾಡಿಕೊಂಡಿಲ್ಲ. ಇದು ಸರಕು ಸಂಸ್ಕೃತಿಯೊಳಗೆ ವಿಕಸನಗೊಂಡ ಪದವಾಗಿದೆ. ಈಗಾಗಲೇ ಭಾರತದಾದ್ಯಂತ ಹರಡಿರುವ ಐ 🤍 ಪದ ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು.

ವಿದ್ಯಾ ಇರ್ವತ್ತೂರು

View all posts by this author