ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

I Love Muhammad: ಮತ್ತೆ ಸದ್ದು ಮಾಡಿದ ಬಲ್ಡೋಜರ್; 'ಐ ಲವ್ ಮುಹಮ್ಮದ್’ ವಿವಾದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಯೋಗಿ ಸರ್ಕಾರ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊತ್ತಿಕೊಂಡ ‘ಐ ಲವ್ ಮುಹಮ್ಮದ್’ ವಿರುದ್ಧ ಯೋಗಿ ಸರ್ಕಾರ ಮಹತ್ತರವಾದ ನಿರ್ಧಾರ ತೆಗೆದುಕೊಂಡಿದ್ದು, ಧಾರ್ಮಿಕ ನಾಯಕ ತೌಖೀರ್ ರಾಜಾ ಖಾನ್‌ನ ಮತ್ತೊಬ್ಬ ಸಹಾಯಕನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ವಿಸ್ತರಿಸುತ್ತಿರುವ ಅಧಿಕಾರಿಗಳು, ಆರೋಪಿಗಳ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬಲ್ಡೋಜರ್ ಕ್ರಮವನ್ನು ಜಾರಿಗೊಳಿಸಿದೆ.

ಧಾರ್ಮಿಕ ನಾಯಕ ಸಹಾಯಕನ ಬಂಧನ

ಸಾಂಧರ್ಬಿಕ ಚಿತ್ರ -

Profile Sushmitha Jain Oct 6, 2025 3:05 PM

ಲಖನೌ: ಉತ್ತರ ಪ್ರದೇಶದ ಕಾನ್ಪುರ್‌ನಲ್ಲಿ ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯಿಂದ ಆರಂಭವಾದ ‘ಐ ಲವ್ ಮುಹಮ್ಮದ್’ (I love muhammad) ವಿವಾದ (Controversy) ದಿನ ಕಳೆದಂತೆ ಜಟಿಲವಾಗುತ್ತಿದೆ. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಈ ಪೋಸ್ಟರ್ ದೇಶಾದ್ಯಂತ ಇಂತಹ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗಿದೆ.

ಹೌದು, ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊತ್ತಿಕೊಂಡ ಈ ಒಂದು ಸಣ್ಣ ಕಿಡಿ, ಇಂದು ಉತ್ತರಖಂಡ, ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕಕ್ಕೂ ವ್ಯಾಪಿಸಿದ್ದು, ಎಲ್ಲೆಡೆ ಕೋಲಾಹಲ ಸೃಷ್ಟಿಸಿ ಗಲಭೆ-ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ. ಉತ್ತರ ಪ್ರದೇಶದ ಜಂಕ್ಷನ್‌ಗಳು, ಅಂಗಡಿಗಳ ಮುಂಭಾಗದಲ್ಲಿ ಈ ʼಐ ಲವ್ ಮುಹಮ್ಮದ್ʼ ಎಂದು ಬರೆದಿದ್ದ ಪೋಸ್ಟರ್‌ಗಳನ್ನು ಅಳವಡಿಸಲಾಇತ್ತು. ಆದರೆ ಇದಕ್ಕೆ ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸಿತ್ತು. ಅನುಮತಿ ಪಡೆಯದೆ ಪೋಸ್ಟರ್‌ ಹಾಕಿದ್ದಕ್ಕಾಗಿ ಅದನ್ನು ಪೊಲೀಸರು ತೆರವುಗೊಳಿಸಿದ್ದರು. ಈ ಘಟನೆ ಬಳಿಕ ಬೀದಿಗಳಲ್ಲಿ ಪ್ರತಿಭಟನೆ, ರ‍್ಯಾಲಿ, ಪೊಲೀಸ್ ಘರ್ಷಣೆ, ಕಲ್ಲು ತೂರಾಟ ನಡೆದು, ನೂರಾರು ಜನರ ಮೇಲೆ ಎಫ್‌ಐಆರ್ ಆಗಿದೆ.

ಇದಕ್ಕೆ ಪ್ರತಿಯಾಗಿ `ಐ ಲವ್ ಯೋಗಿ ಆದಿತ್ಯನಾಥ್’ (I Love Yogi Adityanath), ‘ಐ ಲವ್ ಬುಲ್ಡೋಜರ್’ (I Love Bulldozer) ಹೆಸರಿನಲ್ಲಿ ಬಿಜೆಪಿ ಯುವ ಮೋರ್ಚಾ ಅಭಿಯಾನ ಆರಂಭಿಸಿದೆ. ಲಖನೌವ (Lucknow) ಪ್ರಮುಖ ರಸ್ತೆಗಳಲ್ಲಿ ಈ ಬ್ಯಾನರ್ ಅಳವಡಿಸಲಾಗಿದೆ. ಸಿಎಂ ಮತ್ತು ಬುಲ್ಡೋಜರ್ ಕ್ರಮವನ್ನು ಸಮರ್ಥಿಸಿಕೊಂಡು ಬಿಜೆಪಿ ಯುವ ಮೋರ್ಚಾ ನಾಯಕರು ಫ್ಲೆಕ್ಸ್ ಅಳವಡಿಸಿದ್ದಾರೆ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಮಿತ್ ತ್ರಿಪಾಠಿ ನೇತೃತ್ವದಲ್ಲಿ ಫ್ಲೆಕ್ಸ್ ಅಳವಡಿಸಲಾಗಿತ್ತು.

ಅಸಾದುದ್ದೀನ್ ಓವೈಸಿ ಬೆಂಬಲ

ಈ ಮಧ್ಯೆ ‘ಐ ಲವ್ ಮುಹಮ್ಮದ್’ ಹೇಳಿಕೆಗೆ AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬೆಂಬಲ ಸೂಚಿಸಿದ್ದು, “ಈ ಹೇಳಿಕೆ ಅಪರಾಧವಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಈ ಎಲ್ಲ ಬೆಳವಣಿಗಳ ಬಳಿಕ ಯೋಗಿ ಸರ್ಕಾರ ಮಹತ್ತರವಾದ ನಿರ್ಧಾರ ತೆಗೆದುಕೊಂಡಿದ್ದು, ಧಾರ್ಮಿಕ ನಾಯಕ ತೌಖೀರ್ ರಾಜಾ ಖಾನ್‌ನ ಮತ್ತೊಬ್ಬ ಸಹಾಯಕನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ವಿಸ್ತರಿಸುತ್ತಿರುವ ಅಧಿಕಾರಿಗಳು, ಆರೋಪಿಗಳ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬಲ್ಡೋಜರ್ ಕ್ರಮವನ್ನು ಜಾರಿಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಬರೆಲಿ ಅಭಿವೃದ್ಧಿ ಪ್ರಾಧಿಕಾರ (BDA), ಬಂಧಿತನಾಗಿರುವ ರಾಜಾ ಖಾನ್‌ನ ಸಹಾಯಕ ನಫೀಸ್‌ಗೆ ಸೇರಿದ 'ರಝಾ ಪ್ಯಾಲೆಸ್' ಎಂಬ ಬ್ಯಾಂಕ್ವೆಟ್ ಹಾಲ್‌ನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದು, ವಕ್ಫ್ ಬೋರ್ಡ್ ಆಸ್ತಿಯಡಿ ಈ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎನ್ನಲಾಗಿದೆ.

ಈ ಬಗ್ಗೆ BDA ಉಪಾಧ್ಯಕ್ಷ ಮಣಿಕಂಡನ್ ಎ ಪ್ರತಿಕ್ರಿಯಿಸಿದ್ದು, ಸರ್ಕಾರದ ಆದೇಶ ಮೇರೆಗೆ ಶೇ. 70 ಕಟ್ಟಡವನ್ನು ನೆಲಸಮಗೊಳಿಸಿದ್ದೇವೆ. ಮುಂದಿನ ಹಂತದಲ್ಲಿ ಸಂಪೂರ್ಣ ತೆರವು ಕಾರ್ಯಚಾರಣೆ ಮಾಡಿದ್ದೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಕಿರಿದಾದ ರಸ್ತೆಯಲ್ಲಿ ಸಮೋಸಾ ಟ್ರೇ ಬ್ಯಾಲೆನ್ಸ್ ಮಾಡುತ್ತಾ ವ್ಯಕ್ತಿಯ ಬೈಕ್ ಸವಾರಿ; ನೋಡುಗರು ನಿಬ್ಬೆರಗು, ಇಲ್ಲಿದೆ ವೈರಲ್ ವಿಡಿಯೊ

ವೈದ್ಯಕೀಯ ವಂಚನೆ ಆರೋಪ

ಸೆಪ್ಟೆಂಬರ್ 26ರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲಿನಲ್ಲಿರುವ ನಫೀಸ್ ಮೇಲೆ ಇದೀಗ ವಂಚನೆ ಆರೋಪವೂ ಕೇಳಿ ಬಂದಿದ್ದೂ, ನಕಲಿ ಸರ್ಟಿಫಿಕೇಟ್ ಬಳಸಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ನಫೀಸ್ ವಿರುದ್ಧ ವಂಚನೆ ಮತ್ತು ಅಕ್ರಮ ವೈದ್ಯಕೀಯ ದಂಧೆ ನಡೆಸುತ್ತಿದ್ದ ಎಂಬ ಸೆಕ್ಷನ್‌ಗಳಡಿ ಪ್ರಕರಣ ದಾಖಲಿದ್ದು, ಶೀಘ್ರದಲ್ಲೇ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡುತ್ತೇನೆ ಎಂದು ಬರೆಲಿ ಜಿಲ್ಲಾ ವೈದ್ಯಾಧಿಕಾರಿ (CMO) ವಿಷ್ರಾಮ್ ಸಿಂಗ್ ತಿಳಿಸಿದ್ದಾರೆ.

ಅಧಿಕಾರಿಗಳ ಹಂಚಿಕೊಂಡ ಮಾಹಿತಿ ಪ್ರಕಾರ, ಮೆಡಿಕಲ್ ಕೌನ್ಸಿಲ್‌ನಲ್ಲಿ ಲೈಸನ್ಸ್ ಪಡೆಯದೇ ನಫೀಸ್ ಕುತುಬ್ಖಾನಾ ಪ್ರದೇಶದಲ್ಲಿ "ಆಪ್ಟಿಕಲ್ ಮತ್ತು ಕ್ಲಿನಿಕ್ ಸೆಟ್‌ಅಪ್" ನಡೆಸುತ್ತಿದ್ದು, ವೈದ್ಯಕೀಯ ಶಿಕ್ಷಣ ಪಡೆಯದೇ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಅಕ್ರಮ ದಂಧೆಗೆ ತೌಖೀರ್ ರಾಜಾ ಹೆಸರನ್ನು ಬಳಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದ್ದು, ಸತ್ಯಾಂಶ ಹೊರ ಬರುತ್ತಿದ್ದಂತೆ ಈ ಆರೋಗ್ಯ ಕೇಂದ್ರವನ್ನು ಮುಚ್ಚಲಾಗಿದೆ.

ಫರ್ಹತ್ ಮತ್ತು ಪುತ್ರನ ಬಂಧನ

ಇನ್ನು ತೌಖೀರ್ ರಾಜಾ ಅವರ ಪ್ರಮುಖ ಸಹಾಯಕನಾದ ಫರ್ಹತ್ ಮತ್ತು ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದು, ಜಖೀರಾ ಪ್ರದೇಶದಲ್ಲಿರುವ ಫರ್ಹತ್ ನಿವಾಸವನ್ನು ಬಿಎಡಿಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.