ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಿರಿದಾದ ರಸ್ತೆಯಲ್ಲಿ ಸಮೋಸಾ ಟ್ರೇ ಬ್ಯಾಲೆನ್ಸ್ ಮಾಡುತ್ತಾ ವ್ಯಕ್ತಿಯ ಬೈಕ್ ಸವಾರಿ; ನೋಡುಗರು ನಿಬ್ಬೆರಗು, ಇಲ್ಲಿದೆ ವೈರಲ್ ವಿಡಿಯೊ

Man Balances Samosa Tray: ವ್ಯಕ್ತಿಯೊಬ್ಬ ತಲೆ ಮೇಲೆ ಸಮೋಸಾ ತುಂಬಿರುವ ಟ್ರೇ ಇಟ್ಟುಕೊಂಡು ಬೈಕ್ ಸವಾರಿ ಮಾಡಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಕಿರಿದಾದ, ಜನನಿಬಿಡ ರಸ್ತೆಯಾಗಿದ್ದರೂ, ಆ ವ್ಯಕ್ತಿ ಎಚ್ಚರಿಕೆಯಿಂದ ಮತ್ತು ವಿಶ್ವಾಸದಿಂದ ಬೈಕ್ ಚಲಾಯಿಸಿದ್ದಾನೆ.

ಸಮೋಸಾ ಟ್ರೇ ಬ್ಯಾಲೆನ್ಸ್ ಮಾಡುತ್ತಾ ವ್ಯಕ್ತಿಯ ಬೈಕ್ ಸವಾರಿ

-

Priyanka P Priyanka P Oct 5, 2025 6:53 PM

ಲಖನೌ: ಸಾಮಾಜಿಕ ಮಾಧ್ಯಮದಲ್ಲಿ ಬೆರಗುಗೊಳಿಸುವ ವಿಡಿಯೊ ಆಗಾಗ ವೈರಲ್ ಆಗುತ್ತಿರುತ್ತದೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೊವು ಇದಕ್ಕೆ ಹೊರತಾಗಿಲ್ಲ. ವ್ಯಕ್ತಿಯೊಬ್ಬ ತಲೆ ಮೇಲೆ ಸಮೋಸಾ ತುಂಬಿರುವ ಟ್ರೇ ಇಟ್ಟುಕೊಂಡು ಬೈಕ್ ಸವಾರಿ ಮಾಡಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ ಈ ಘಟನೆ ನಡೆದಿದೆ. ಇದರಲ್ಲೇನು ಆಶ್ಚರ್ಯ ಅಂತ ಅಂದುಕೊಳ್ಳಬಹುದು. ಆದರೆ ಟ್ರೇಯನ್ನು ಕೈಯಲ್ಲಿ ಹಿಡಿದುಕೊಳ್ಳದೆ ಆತ ತಲೆಯಲ್ಲಿ ಬ್ಯಾಲೆನ್ಸ್ ಮಾಡಿರುವುದು ಮಾತ್ರ ಬಹಳ ವಿಶೇಷ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಗುರುತ್ವಾಕರ್ಷಣೆಗೆ ಪ್ರತಿರೋಧ ವ್ಯಕ್ತಪಡಿಸುವಂತಿರುವ ಈ ಘಟನೆಯು ತನ್ನ ದಿನಚರಿಯ ಭಾಗವಾಗಿದೆಯೋ ಎಂಬಂತೆ ಆ ವ್ಯಕ್ತಿ ಶಾಂತವಾಗಿ ಬೀದಿಗಳಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತದೆ. ಕಿರಿದಾದ, ಜನನಿಬಿಡ ರಸ್ತೆಯಾಗಿದ್ದರೂ, ಆ ವ್ಯಕ್ತಿ ಎಚ್ಚರಿಕೆಯಿಂದ ಮತ್ತು ವಿಶ್ವಾಸದಿಂದ ಬೈಕನ್ನು ಚಲಾಯಿಸಿದ್ದಾನೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಕಾಮೆಂಟ್‌ ವಿಭಾಗದಲ್ಲಿ ಪ್ರತಿಕ್ರಿಯೆಗಳ ಅಲೆಯನ್ನು ಹುಟ್ಟುಹಾಕಿತು. ಸಾಮಾಜಿಕ ಮಾಧ್ಯಮ ಬಳಕೆದಾರರು ತಮಾಷೆಯ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಆ ವ್ಯಕ್ತಿಯ ಅಸಾಧಾರಣ ಸಮತೋಲನ ಮತ್ತು ಆತ್ಮವಿಶ್ವಾಸವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಮುಚ್ಚಳವಿಲ್ಲದ ಆಹಾರದ ಬಗ್ಗೆ ನೈರ್ಮಲ್ಯದ ಕಾಳಜಿ ಬಗ್ಗೆ ಮಾತನಾಡಿದರು.

ವಿಡಿಯೊ ವೀಕ್ಷಿಸಿ:

ನಾನು ಸಮೋಸಾಗಳಿಗೆ ಅಂಟಿಕೊಳ್ಳುವ ಕೊಳಕು ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ರಸ್ತೆಯ ಉತ್ತಮ ಗುಣಮಟ್ಟವನ್ನು ತೋರಿಸುತ್ತದೆ. ಅದಕ್ಕಾಗಿಯೇ ಆತ ಸಮೋಸಾ ಬೀಳುವುದಿಲ್ಲ ಎಂಬ ಆತ್ಮವಿಶ್ವಾಸದಿಂದ ಬೈಕ್ ಓಡಿಸುತ್ತಿದ್ದಾನೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಆತ ಚೆನ್ನಾಗಿಯೇ ಸಮತೋಲನ ಮಾಡಿದ್ದಾನೆ. ಆದರೆ, ಸಮೋಸಾವನ್ನು ಯಾಕೆ ಮುಚ್ಚಿಲ್ಲ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ಈ ತಂತ್ರವು ಬರೇಲಿಯಿಂದ ಹೊರಬರಬಾರದು ಎಂದು ವ್ಯಕ್ತಿಯೊಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ: Viral Video: ಅಣ್ಣನ ಸ್ಥಾನದಲ್ಲಿ ನಿಂತು ಹುತಾತ್ಮ ಯೋಧನ ಸಹೋದರಿಯ ಮದುವೆ ನೆರವೇರಿಸಿದ ಸೈನಿಕರು; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

ಕೆಲವರಿಗೆ ಭಾರವಾದ ಆಹಾರದ ಟ್ರೇ ಅನ್ನು ಹೊತ್ತುಕೊಂಡು ಹೋಗುವುದು ಸವಾಲಿನ ಕೆಲಸವಾಗಬಹುದು. ಆದರೆ ಈ ಹಿಂದೆ ವೈರಲ್ ಆಗಿದ್ದ ವಿಡಿಯೊದಲ್ಲಿ ಒಬ್ಬ ಮಾಣಿ ಎರಡು ಭಾರವಾದ ಟ್ರೇಗಳನ್ನು ಏಕಕಾಲದಲ್ಲಿ ಸಮತೋಲನಗೊಳಿಸುವ ವಿಡಿಯೊ ವೈರಲ್ ಆಗಿತ್ತು. ಮಾಣಿಯು ಎರಡೂ ಟ್ರೇಗಳನ್ನು ತೆಗೆದುಕೊಳ್ಳಲು ಕುಳಿತುಕೊಳ್ಳುತ್ತಾನೆ. ಒಂದನ್ನು ತನ್ನ ಭುಜದ ಮೇಲೆ ಇಟ್ಟು ಇನ್ನೊಂದನ್ನು ಯಾವುದೇ ಹೆಚ್ಚುವರಿ ಬೆಂಬಲವಿಲ್ಲದೆ ತನ್ನ ಎದುರು ಕೈಯಲ್ಲಿ ಹಿಡಿದಿದ್ದ. ನಂತರ ನುರಿತ ಮಾಣಿ ರೆಸ್ಟೋರೆಂಟ್‍ನಲ್ಲಿ ಸಾಕಷ್ಟು ದೂರ ನಡೆದು ಹೋಗಿ ಗ್ರಾಹಕರ ಟೇಬಲ್‌ಗೆ ಆಹಾರವನ್ನು ತಲುಪಿಸಲು ಮೆಟ್ಟಿಲುಗಳನ್ನು ಹತ್ತಿದನು. ಇದು ನೆಟ್ಟಿಗರ ಅಚ್ಚರಿಗೆ ಕಾರಣವಾಗಿತ್ತು. ವೇಟರ್‌ನ ಕೌಶಲ್ಯ ಮಾತ್ರವಲ್ಲ ಅವನ ಶಕ್ತಿಯನ್ನೂ ತೋರಿಸಿತು.