ಜಮ್ಮು-ಕಾಶ್ಮೀರದ ಭಯೋತ್ಪಾದಕರ ಅಡಗುತಾಣದಲ್ಲಿ ಐಇಡಿ ಪತ್ತೆ; ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆ
IED detected at terrorist hideout: ಜಮ್ಮು–ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಭಯೋತ್ಪಾದಕರ ಅಡಗುತಾಣವೊಂದರಲ್ಲಿ ಐಇಡಿ ಪತ್ತೆಯಾಗಿದೆ. ಈ ಘಟನೆ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಕಟ್ಟುನಿಟ್ಟಿನ ಕಾರ್ಯಾಚರಣೆಗಳ ಭಾಗವಾಗಿದೆ.
ಸಾಂದರ್ಭಿಕ ಚಿತ್ರ -
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu-Kashmir) ರಾಜೌರಿಯ ಥನಮಂಡಿಯಲ್ಲಿ ಸೇನೆ, ಪೊಲೀಸ್ ಮತ್ತು ಸಿಆರ್‌ಪಿಎಫ್ (CRPF) ಜಂಟಿ ತಂಡವು ಭಯೋತ್ಪಾದಕರ ಅಡಗುತಾಣವನ್ನು ಭೇದಿಸಿ, ಸುಧಾರಿತ ಸ್ಫೋಟಕ ಸಾಧನವನ್ನು (IED) ವಶಪಡಿಸಿಕೊಂಡಿದೆ.
ಭಯೋತ್ಪಾದಕರನ್ನು ಸದೆಬಡಿಯುವ ನಿರಂತರ ಪ್ರಯತ್ನದ ಭಾಗವಾಗಿ ನಡೆಸಲಾಗುತ್ತಿದ್ದ ಶೋಧ ಕಾರ್ಯಾಚರಣೆಯ ವೇಳೆ, ದಟ್ಟ ಕಾಡಿನೊಳಗೆ ಒಂದು ಅಡಗುದಾಣ ಪತ್ತೆಯಾಯಿತು. ಆ ಅಡಗುದಾಣವನ್ನು ಶೋಧಿಸುವ ಸಂದರ್ಭದಲ್ಲಿ ಭದ್ರತಾ ಪಡೆಗಳಿಗೆ ಐಇಡಿ (IED) ಇಟ್ಟಿರುವುದು ಗಮನಕ್ಕೆ ಬಂದಿದೆ. ಪ್ರಮಾಣಿತ ಕಾರ್ಯಾಚರಣೆ ಕ್ರಮವನ್ನು (SOP) ಅನುಸರಿಸಿ, ನಿಯಂತ್ರಿತ ಸ್ಫೋಟದ ಮೂಲಕ ಐಇಡಿ (IED) ಅನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಯಿತು. ಇದರಿಂದ ಜೀವ ಹಾಗೂ ಆಸ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗೆ ಬಂದು ಆಹಾರ ಕೇಳಿದ ಭಯೋತ್ಪಾದಕರು: ಬಕರಾಲ್ ಕುಟುಂಬದಿಂದ ಸ್ಪೋಟಕ ಮಾಹಿತಿ, ಭದ್ರತಾ ಪಡೆಗಳಿಂದ ತೀವ್ರ ಶೋಧ
ಭದ್ರತಾ ಪಡೆಗಳು ಭಯೋತ್ಪಾದಕರನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವ ಉದ್ದೇಶದಿಂದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ. ಪೂಂಚ್ ಮತ್ತು ರಾಜೌರಿಯಲ್ಲಿ ಗಲಭೆ ಸೃಷ್ಟಿಸಲು ಗಡಿಯಾಚೆಯಿಂದ ನುಸುಳಿದ 300ಕ್ಕೂ ಹೆಚ್ಚು ಮಂದಿ ಪ್ರಯತ್ನಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ, ಪೂಂಚ್ ಮತ್ತು ರಾಜೌರಿ ಪ್ರದೇಶಗಳಲ್ಲಿ ಏಜೆನ್ಸಿಗಳು ಕಟ್ಟೆಚ್ಚರ ವಹಿಸಿವೆ.
ಭಯೋತ್ಪಾದಕ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿರುವ ಈ ವ್ಯಕ್ತಿಗಳು ನುಸುಳುವಿಕೆಗೆ ನೆರವು ನೀಡುವುದು ಹಾಗೂ ಸ್ಥಳೀಯ ಯುವಕರನ್ನು ಭಯೋತ್ಪಾದನೆಗೆ ಆಕರ್ಷಿಸುವುದನ್ನು ಗುರಿಯಾಗಿಸಿಕೊಂಡಿದ್ದಾರೆ. ಸ್ಥಳೀಯ ಜನರ ಸುರಕ್ಷತೆಯನ್ನು ಅತ್ಯಂತ ಪ್ರಾಮುಖ್ಯತೆಯಾಗಿ ಪರಿಗಣಿಸಿರುವ ಭದ್ರತಾ ಸಂಸ್ಥೆಗಳು ಸದಾ ಎಚ್ಚರಿಕೆಯಿಂದಿವೆ.
ಚಳಿಗಾಲದ ತಿಂಗಳುಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿರುವ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ಗಮನಾರ್ಹ ಸಂಖ್ಯೆಯ ಭಯೋತ್ಪಾದಕರು ವಿವಿಧ ಲಾಂಚ್‌ಪ್ಯಾಡ್‌ಗಳಲ್ಲಿ ನೆಲೆಸಿದ್ದಾರೆ ಎಂದು ಗುಪ್ತಚರ ಮಾಹಿತಿಗಳು ಸೂಚಿಸುತ್ತವೆ.
ಈ ಭಯೋತ್ಪಾದಕರು ಗಡಿ ದಾಟಲು ಸೂಕ್ತ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಈ ಪ್ರದೇಶದಲ್ಲಿ ಹಿಂಸಾಚಾರವನ್ನು ಮತ್ತೆ ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿದ್ದು, ಒಳನುಸುಳುವಿಕೆಯನ್ನು ತಡೆಗಟ್ಟಲು ಮತ್ತು ಸ್ಥಳೀಯ ಜನಸಂಖ್ಯೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಚಳಿಗಾಲದ ತಿಂಗಳಲ್ಲಿ ಪಾಕಿಸ್ತಾನ ರೂಪಿಸಿರುವ ದುಷ್ಟ ಸಂಚನ್ನು ವಿಫಲಗೊಳಿಸುವ ಉದ್ದೇಶದಿಂದ, ಪ್ರತಿನುಸುಳಿಕೆ ಹಾಗೂ ಪ್ರತಿಭಯೋತ್ಪಾದನಾ ಜಾಲಗಳನ್ನು ಬಲಪಡಿಸಲಾಗಿದೆ.
Military Operation: ಪಾಕಿಸ್ತಾನದಲ್ಲಿ ಬೃಹತ್ ಸೇನಾ ಕಾರ್ಯಾಚರಣೆ; 11 ಸೈನಿಕರು, 19 ಭಯೋತ್ಪಾದಕರು ಬಲಿ
ಕಡಿಮೆ ಬೆಲೆಯ ಸ್ಫೋಟಕ, ಡ್ರೋನ್ ತಯಾರಿಸಿದ ಭಯೋತ್ಪಾದಕರು
ಗಣರಾಜ್ಯೋತ್ಸವ ದಿನದ ಪರೇಡ್ ಮತ್ತು ಬೀಟಿಂಗ್ ದಿ ರಿಟ್ರೀಟ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಯೋತ್ಪಾದನಾ ಕೃತ್ಯ ನಡೆಯುವ ಅಪಾಯವಿದ್ದು, ಕಡಿಮೆ ಬೆಲೆಯ ಸ್ಫೋಟಕಗಳು, ಡ್ರೋನ್‌ಗಳನ್ನು ಕೇಂದ್ರ ಭದ್ರತಾ ಸಂಸ್ಥೆಗಳು ಗುರುತಿಸಿವೆ. ಯಾವುದೇ ಅಪಾಯ ಸಂಭವಿಸದಂತೆ ಭದ್ರತಾ ವ್ಯವಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಹೊಸ ತಲೆಮಾರಿನ ಐಇಡಿಗಳು ಮೆಟಲ್ ಡಿಟೆಕ್ಟರ್‌ಗಳು, ಶೋಧಕ ಶ್ವಾನದಳಗಳು ಹಾಗೂ ಕೈಯಿಂದ ತಪಾಸಣೆ ಮಾಡುವಂತಹ ಸಾಂಪ್ರದಾಯಿಕ ಭದ್ರತಾ ಕ್ರಮಗಳಿಂದ ತಿಳಿದುಕೊಳ್ಳಲಾಗದಂತೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಭದ್ರತಾ ಪಡೆಗಳಿಗೆ ಗಂಭೀರ ಸವಾಲು ಒಡ್ಡುತ್ತಿವೆ.