ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದರೆ, ಭೌಗೋಳಿಕ ಸಾಮೀಪ್ಯವನ್ನು ಉಲ್ಲೇಖಿಸಿ, ಭಾರತವು ಪಾಕಿಸ್ತಾನದ ಪರವಾಗಿ ನಿಲ್ಲುತ್ತದೆ ಎಂದು ಹೇಳುವ ಮೂಲಕ ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಮದನ್ ರಾಥೋಡ್ ಗುರುವಾರ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
"ನಾವೆಲ್ಲರೂ ಇದನ್ನು ಅರ್ಥಮಾಡಿಕೊಳ್ಳಬೇಕು. ನೋಡಿ, ಭಾರತದ ವಿಷಯಕ್ಕೆ ಬಂದರೆ, ಒಂದು ವೇಳೆ ಇಂದು ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧವೇನಾದರೂ ಸಂಭವಿಸಿದರೆ, ನಾವು ಪಾಕಿಸ್ತಾನದ ಪರವಾಗಿರುತ್ತೇವೆ. ಏಕೆಂದರೆ ಅದು ನಮ್ಮ ನೆರೆಯ ರಾಷ್ಟ್ರವಾಗಿದೆ," ಎಂದು ಸಾರ್ವಜನಿಕ ಕಾರ್ಯಕ್ರಮವೊಂದರ ಭಾಷಣದಲ್ಲಿ ರಾಥೋಡ್ ಹೇಳಿದರು. ಅವರ ಈ ಹೇಳಿಕೆ ಇದೀಗ ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ಮಾತ್ರವಲ್ಲದೆ ಅವರ ಹೇಳಿಕೆಗಳು ಕಾಂಗ್ರೆಸ್ ನಾಯಕರು ಮತ್ತು ಇತರ ರಾಜಕೀಯ ವ್ಯಕ್ತಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಶಾಮಾ ಮೊಹಮ್ಮದ್ ಅವರು ಈ ಹೇಳಿಕೆಗಳನ್ನು 'ರಾಷ್ಟ್ರವಿರೋಧಿ' ಎಂದು ಬಣ್ಣಿಸಿದ್ದು, ರಾಜಸ್ಥಾನ ಘಟಕದ ಮುಖ್ಯಸ್ಥರ ವಿರುದ್ಧ ಬಿಜೆಪಿ ಯಾವ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನಿಸಿದ್ದಾರೆ.
"ನಮ್ಮ ಸೈನಿಕರನ್ನು ಮತ್ತು ನಮ್ಮ ಜನರನ್ನು ಕೊಲ್ಲುವ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಮೇಲಿನ ಬಿಜೆಪಿಯ ಪ್ರೀತಿ ಮತ್ತೊಮ್ಮೆ ಬಯಲಾಗಿದೆ" ಎಂದು ಶಾಮಾ ಹೇಳಿದರು.
"ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೂಡ ಪಾಕಿಸ್ತಾನದ ಪರವಾಗಿದ್ದಾರೆಯೇ? ಹಾಗಲ್ಲದಿದ್ದರೆ, ಈ ದೇಶದ್ರೋಹಿಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ನಮಗೆ ತಿಳಿಸಿ," ಎಂದು ಶಾಮಾ ಪ್ರಶ್ನೆ ಮಾಡಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಹೊಸ ದೋಷಾರೋಪ ಪಟ್ಟಿಯಲ್ಲಿ ನಾಂದೇಡ್ ನಿವಾಸಿಯ ಹೆಸರು ಸೇರ್ಪಡೆ
ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ಸಂದೀಪ್ ಗುಪ್ತಾ ಅವರು, ರಾಥೋರ್ ಅವರ ಹೇಳಿಕೆಗಳು ಪಾಕಿಸ್ತಾನದ ಬಗ್ಗೆ ಬಿಜೆಪಿಯ ಒಲವನ್ನು ಬಯಲುಗೊಳಿಸಿವೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನವನ್ನು ಅವರು "ಭಯೋತ್ಪಾದಕ ರಾಷ್ಟ್ರ" ಎಂದು ಬಣ್ಣಿಸಿದ್ದಾರೆ.
"ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ನಾವು ಪಾಕಿಸ್ತಾನದ ಪರವಾಗಿರುತ್ತೇವೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋರ್ ಹೇಳಿದ್ದಾರೆ. ಭಯೋತ್ಪಾದಕ ರಾಷ್ಟ್ರವಾದ ಪಾಕಿಸ್ತಾನದ ಮೇಲಿನ ಬಿಜೆಪಿಯ ಪ್ರೀತಿ ಮತ್ತೊಮ್ಮೆ ಬಹಿರಂಗವಾಗಿದೆ. ಬಿಜೆಪಿಗೆ ಪಾಕಿಸ್ತಾನವೆಂದರೆ ಇಷ್ಟ!" ಎಂದು ಅವರು 'ಎಕ್ಸ್' (X) ನಲ್ಲಿ ಬರೆದಿದ್ದಾರೆ.
ರಾಥೋಡ್ ಅವರ ಹೇಳಿಕೆಗಳನ್ನು ಎಎಪಿ (AAP) ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಮತ್ತು ಪಾಕಿಸ್ತಾನದ ನಡುವೆ ಸೈದ್ಧಾಂತಿಕ ಸಾಮ್ಯತೆಯಿದೆ ಎಂಬುದನ್ನು ಈ ಹೇಳಿಕೆಗಳು ಬಹಿರಂಗಪಡಿಸಿವೆ ಎಂದು ಎಎಪಿ ಉತ್ತರ ಪ್ರದೇಶ ಉಪಾಧ್ಯಕ್ಷ ರಾಮ್ ಗುಪ್ತಾ ಆರೋಪಿಸಿದ್ದಾರೆ.