ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಹೊಸ ದೋಷಾರೋಪ ಪಟ್ಟಿಯಲ್ಲಿ ನಾಂದೇಡ್ ನಿವಾಸಿಯ ಹೆಸರು ಸೇರ್ಪಡೆ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಹೊಸ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಇದರಲ್ಲಿ ನಾಂದೇಡ್ ನಿವಾಸಿಯೊಬ್ಬರ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. ಅಲ್ಲದೇ , ತನಿಖೆಯ ವೇಳೆ ಲಭ್ಯವಾದ ವಿಧಿವಿಜ್ಞಾನ ಪರೀಕ್ಷೆಯ ವರದಿಯನ್ನು ಕೂಡ ಸೇರಿಸಲಾಗಿದೆ. ಈ ಮೂಲಕ ತನಿಖೆಯನ್ನು ಪೂರ್ಣಗೊಳಿಸಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ -
ದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ (NEET paper leak case) ಸಂಬಂಧ ಕೇಂದ್ರೀಯ ತನಿಖಾ ದಳ (CBI) ನಡೆಸಿರುವ ತನಿಖಾ ವರದಿಯಲ್ಲಿ ನಾಂದೇಡ್ ನಿವಾಸಿ ಶೇಷರಾವ್ ಬಜರಂಗ್ ಸೂರ್ಯವಂಶಿ ಅವರನ್ನು ಆರೋಪಿಯನ್ನಾಗಿ ಗುರುತಿಸಲಾಗಿದ್ದು, ಇದರೊಂದಿಗೆ ತನಿಖೆ ವೇಳೆ ಲಭ್ಯವಾದ ವಿಧಿವಿಜ್ಞಾನ ಪರೀಕ್ಷೆಯ ಫಲಿತಾಂಶಗಳನ್ನು ಒಳಗೊಂಡ ವರದಿಯನ್ನು ದೆಹಲಿ ನ್ಯಾಯಾಲಯಕ್ಕೆ (delhi court) ಬುಧವಾರ ಸಲ್ಲಿಸಲಾಗಿದೆ. ಕಳೆದ ಜುಲೈ 28ರಂದು ಸಲ್ಲಿಸಲಾದ ಮೊದಲ ದೋಷಾರೋಪ ಪಟ್ಟಿಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮೂವರು ವಿಷಯ ತಜ್ಞರು, ಮಧ್ಯವರ್ತಿಗಳು ಮತ್ತು ಕೋಚಿಂಗ್ ಸೆಂಟರ್ ಪ್ರತಿನಿಧಿಗಳು ಸೇರಿದಂತೆ ಒಟ್ಟು 13 ಮಂದಿಯನ್ನು ಆರೋಪಿಗಳನ್ನಾಗಿ ಗುರುತಿಸಲಾಗಿತ್ತು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಿಬಿಐ ಬುಧವಾರ ಹೊಸ ದೋಷಾರೋಪ ಪಟ್ಟಿಯನ್ನು ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ಹೊಸ ಆರೋಪಿಯೊಬ್ಬರ ಹೆಸರಿನ ಜೊತೆಗೆ ತನಿಖೆಯ ವೇಳೆ ಲಭ್ಯವಾದ ವಿಧಿವಿಜ್ಞಾನ ಪರೀಕ್ಷೆಯ ವರದಿಗಳನ್ನು ಸೇರಿಸಲಾಗಿದೆ. ಈ ಮೂಲಕ ತಮ್ಮ ತನಿಖೆಯನ್ನು ಸಿಬಿಐ ಪೂರ್ಣಗೊಳಿಸಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಕಳೆದ ಜುಲೈ 28ರಂದು 13 ಮಂದಿಯನ್ನು ಆರೋಪಿಗಳನ್ನಾಗಿ ಗುರುತಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಈ ಪಟ್ಟಿ ಮತ್ತು ಈಗ ಸಲ್ಲಿಕೆಯಾಗಿರುವ ಹೊಸ ಪಟ್ಟಿಯಲ್ಲಿ ಯಾವುದೇ ಸರ್ಕಾರಿ ಅಧಿಕಾರಿಯ ಹೆಸರೂ ಇಲ್ಲ.
ಹೆಚ್ಚುವರಿ ಆರೋಪಿಯಾಗಿ ಗುರುತಿಸಲಾದ ನಾಂದೇಡ್ ನಿವಾಸಿ ಶೇಷರಾವ್ ಬಜರಂಗ್ ಸೂರ್ಯವಂಶಿ ಅಲಿಯಾಸ್ ರಾಜ್ ಸೂರ್ಯವಂಶಿಯನ್ನು ಸೆಪ್ಟೆಂಬರ್ 2 ರಂದು ಬಂಧಿಸಲಾಗಿತ್ತು. ಈತ ಇನ್ನೋರ್ವ ಆರೋಪಿ ಶುಭಂ ಖೈರ್ನಾರ್ ಅವರ ಆಪ್ತರೆಂದು ಹೇಳಲಾಗಿದೆ. ಶುಭಂ ಖೈರ್ನಾರ್ ಅವರು ಪರೀಕ್ಷಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಆತನನ್ನು ಮೇ 13ರಂದು ಬಂಧಿಸಲಾಗಿತ್ತು.
ಶೇಷರಾವ್ ಬಜರಂಗ್ ಸೂರ್ಯವಂಶಿ ಪರೀಕ್ಷಾರ್ಥಿಗಳನ್ನು ನಾಂದೇಡ್ನ ನಿರ್ದಿಷ್ಟ ಸ್ಥಳವೊಂದಕ್ಕೆ ಕರೆಸಿ ಹಂಚಿಕೆ ಮಾಡಿದ್ದರು. ಪರೀಕ್ಷೆ ಬಳಿಕ ವಿದ್ಯಾರ್ಥಿಗಳು ಹಣ ಪಾವತಿ ಮಾಡುವಂತೆ ಪರೀಕ್ಷಾರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರಗಳು ಮತ್ತು ಗುರುತಿನ ಚೀಟಿಗಳಂತಹ ಮೂಲ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದನು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2018ರ ಬಿಜೆಪಿ ಐಟಿ ಸೆಲ್ ವಿಡಿಯೊ ಕುರಿತ ಮಾನನಷ್ಟ ಮೊಕದ್ದಮೆ ಪ್ರಕರಣ: ಧ್ರುವ ರಾಠಿಗೆ ಹೊಸ ಸಮನ್ಸ್ ಜಾರಿ
ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಮೇ 12 ರಂದು ನಡೆಯಬೇಕಿದ್ದ ನೀಟ್ ಪರೀಕ್ಷೆಯನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು. ಈ ಪರೀಕ್ಷೆಗಾಗಿ ಸಿದ್ಧಪಡಿಸಿದ ಪ್ರಶ್ನೆಗಳಲ್ಲಿ ಕನಿಷ್ಠ 120 ಪ್ರಶ್ನೆಗಳು ಮೇ 3 ರಂದು ನಡೆಸಿದ್ದ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆಯಲ್ಲಿದ್ದಿತು. ಹೀಗಾಗಿ ಇದನ್ನು ರದ್ದುಗೊಳಿಸಲಾಯಿತು ಎಂದು ಸಿಬಿಐ ವರದಿ ತಿಳಿಸಿದೆ.