ಪುಣೆ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ (Middle East) ಉಂಟಾಗಿರುವ ಸಂಘರ್ಷದ ಪರಿಣಾಮ ಈಗ ದೇಶದಲ್ಲಿ ಇಂಧನ ಕೊರತೆ ( energy crisis) ಎದುರಾಗಿದೆ. ಇದರಿಂದ ಸ್ಮಶಾನದಲ್ಲಿ ಶವ ಸಂಸ್ಕಾರ ಕಾರ್ಯಗಳಿಗೆ ಅಡ್ಡಿಯಾಗಿದೆ. ಇಸ್ರೇಲ್ ಮತ್ತು ಯುಎಸ್ ಸೇನಾಪಡೆಯು ಜಂಟಿಯಾಗಿ ಇರಾನ್ ಮೇಲೆ ದಾಳಿ (Iran war) ನಡೆಸಿದ ಪರಿಣಾಮ ಎಲ್‌ಪಿಜಿ (LPG) ಪೂರೈಕೆಗೆ ಅಡ್ಡಿಯಾಗಿದೆ. ಇದರಿಂದ ಪುಣೆಯ ಅತಿದೊಡ್ಡ ಸ್ಮಶಾನ ವೈಕುಂಠ ಧಾಮದಲ್ಲಿ (Punes Vaikunth Dham) ಈಗ ಸಂಕಷ್ಟ ಎದುರಾಗಿದೆ. ಪ್ರತಿ ದಿನ ಸುಮಾರು 20 ಶವಸಂಸ್ಕಾರಗಳನ್ನು ನಡೆಸುವ ಇಲ್ಲಿ ಈಗ ಕೇವಲ ಎರಡು ಶವಸಂಸ್ಕಾರಗಳಿಗೆ ಸಾಕಾಗುವಷ್ಟು ಮಾತ್ರ ಇಂಧನ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಅತಿದೊಡ್ಡ ಸ್ಮಶಾನವಾದ ಪುಣೆಯ ವೈಕುಂಠ ಧಾಮದಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲದ ತೀವ್ರ ಕೊರತೆ ಉಂಟಾಗಿದೆ. ಇದರಿಂದಾಗಿ ಎಲ್ಲಾ ಅನಿಲ ಆಧಾರಿತ ಶವಸಂಸ್ಕಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ವೈಕುಂಠ ಧಾಮದಲ್ಲಿ ಮೂರು ಅನಿಲ ಆಧಾರಿತ ಕುಲುಮೆಗಳಿದ್ದು, ಇವನ್ನು ಮುಚ್ಚುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಂಧನ ಬಿಕ್ಕಟ್ಟು ಎಫೆಕ್ಟ್: ವಿದ್ಯುತ್ ಉಳಿತಾಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚಿದ ಬಾಂಗ್ಲಾದೇಶ
ದೇಶಾದ್ಯಂತ ಇಂಧನ ಪೂರೈಕೆ ಬಗ್ಗೆ ಆತಂಕ ನಿವಾರಣೆಯಾಗಿದ್ದರೂ ಕೂಡ ಸಂಘರ್ಷದ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾಕಷ್ಟು ಇಂಧನವನ್ನು ಸಂಗ್ರಹಿಸಿಡಲಾಗಿದೆ. ಇದರ ನಡುವೆ ಇಂಧನ ಉಳಿತಾಯಕ್ಕೂ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ವೈಕುಂಠ ಧಾಮದಲ್ಲಿ ಇನ್ನು ಮುಂದೆ ಎಲ್ಲಾ ಶವಸಂಸ್ಕಾರಗಳನ್ನು ವಿದ್ಯುತ್ ಚಿತಾಗಾರಗಳನ್ನು ಬಳಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ನ ಕಾರ್ಯನಿರ್ವಾಹಕ ಎಂಜಿನಿಯರ್ ನೀಲೇಶ್ ಕಾಲೇಕರ್, ಪುಣೆಯ ನವಿ ಪೇಠದಲ್ಲಿ ಸುಮಾರು 17 ಎಕರೆಗಳಷ್ಟು ವಿಸ್ತೀರ್ಣದಲ್ಲಿರುವ ವೈಕುಂಠ ಧಾಮದಲ್ಲಿ ಪ್ರಸ್ತುತ ಎರಡು ಶವಸಂಸ್ಕಾರಗಳಿಗೆ ಮಾತ್ರ ಸಾಕಷ್ಟು ಎಲ್‌ಪಿಜಿ ಉಳಿದಿದೆ. ಪ್ರತಿಯೊಂದಕ್ಕೂ ಶವ ಸಂಸ್ಕಾರಕ್ಕೂ ಸುಮಾರು 18 ಕಿಲೋಗ್ರಾಂಗಳಷ್ಟು ಇಂಧನದ ಅಗತ್ಯವಿರುತ್ತದೆ. ಹೀಗಾಗಿ ಮುಂದಿನ ಆದೇಶದವರೆಗೆ ಅನಿಲ ಆಧಾರಿತ ದಹನ ಘಟಕಗಳು ಮುಚ್ಚಲಾಗುವುದು. ಎಲ್ಲಾ ಅಂತ್ಯಕ್ರಿಯೆಗಳನ್ನು ವಿದ್ಯುತ್ ಕುಲುಮೆಗಳಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆದೇಶದ ಪ್ರಕಾರ ಪ್ರಾಥಮಿಕವಾಗಿ ಮನೆಗಳಿಗೆ ಎಲ್ ಪಿಜಿ ಹಂಚಿಕೆ ಮಾಡಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು, ಇದರ ಪರಿಣಾಮ ವೈಕುಂಠ ಧಾಮವು ಹೊಸ ಎಲ್‌ಪಿಜಿ ಸರಬರಾಜುಗಳನ್ನು ಸ್ವೀಕರಿಸಿಲ್ಲ. ಇದರಿಂದಾಗಿ ಅನಿಲ ಚಿತಾಗಾರಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು. ಪರ್ಯಾಯ ದಹನ ಆಯ್ಕೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
T20 World Cup: 2014ರ ಪೆಟ್ರೋಲ್ ಬಂಕ್‌ನಲ್ಲಿನ ಫೋಟೋಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್!
ದೇಶದಲ್ಲಿ ಇಂಧನ ಕೊರತೆ ಬಗ್ಗೆ ಪ್ರತಿಕ್ರಿಯಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶದಲ್ಲಿ ಎಲ್‌ಪಿಜಿ ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ. ಭಾರತದಲ್ಲಿ ಸಾಕಷ್ಟು ಇಂಧನ ದಾಸ್ತಾನುಗಳಿವೆ. ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿಗೆ ಸಂಬಂಧಿಸಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.