ʼʼಡೀಸೆಲ್ ಬೆಲೆ 50 ರೂಪಾಯಿ ಹೆಚ್ಚಿಸಬೇಕಿತ್ತು; ಹೊರೆಯಾಗಬಾರದೆಂದು 7 ರೂಪಾಯಿ ಮಾತ್ರ ಏರಿಸಲಾಗಿದೆʼʼ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಗ್ಗೆ ನರೇಂದ್ರ ಮೋದಿ ಮುಕ್ತ ಮಾತು
Narendra Modi: ಪೆಟ್ರೋಲ್, ಡೀಸಲ್ ದರ ಏರಿಕೆ ಕುರಿತು ಪ್ರಧಾನಿ ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಏಷ್ಯಾ ಯುದ್ದದ ಸಂದರ್ಭದಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆಯಾದಾಗ ಸರ್ಕಾರ ಡೀಸೆಲ್ ಬೆಲೆಯನ್ನು 50ರ ಬದಲು 7 ರೂಪಾಯಿ ಮಾತ್ರ ಹೆಚ್ಚಿಸಿ 43 ರೂಪಾಯಿ ಹೊರೆಯನ್ನು ಹೊತ್ತುಕೊಂಡಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ ಮತ್ತು ಸಾಂದರ್ಭಿಕ ಚಿತ್ರ -
ನವದೆಹಲಿ, ನ. 13: ಪೆಟ್ರೋಲ್, ಡೀಸೆಲ್ ಏರಿಕೆ ಕುರಿತು ಪ್ರಧಾನಿ ಮೋದಿ (Narendra Modi) ಮಹತ್ವದ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಏಷ್ಯಾ ಯುದ್ಧದ ಸಮಯದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿತ್ತು. ಈ ಸಂದರ್ಭದಲ್ಲಿ ತಾವು ತೆಗೆದುಕೊಂಡ ನಿರ್ಧಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಏರಿದರೂ, ಕೇಂದ್ರ ಸರ್ಕಾರ ನಾಗರಿಕರು ಮತ್ತು ವಿಶೇಷವಾಗಿ ರೈತರ ಮೇಲೆ ನೇರ ಹೊರೆ ಬೀಳದಂತೆ ಹೇಗೆ ನೋಡಿಕೊಂಡಿತು ಎಂಬುದನ್ನು ವಿವರಿಸಿದ್ದಾರೆ.
ಗುರುವಾರ ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ಇಂಡಿಯಾ ಟುಡೇ ಗ್ರೂಪ್ನ 'ಕಿಸಾನ್ ತಕ್ ಭಾರತ್ ಕೃಷಿ ಸಮ್ಮೇಳನ 2026'ರ (Kisan Tak Bharat Agriculture Conference 2026) ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ʼʼಪಶ್ಚಿಮ ಏಷ್ಯಾದಲ್ಲಿ ಯುದ್ಧ ಬಿಕ್ಕಟ್ಟು ತೀವ್ರವಾದಂತೆ, ಕಚ್ಚಾ ತೈಲದ ಬೆಲೆ ಕೆಲವೇ ವಾರಗಳಲ್ಲಿ ಬ್ಯಾರೆಲ್ಗೆ 70 ಡಾಲರ್ನಿಂದ 122 ಡಾಲರ್ಗೆ ಏರಿತು. ಭಾರತದಲ್ಲಿ ಡೀಸೆಲ್ ಬೆಲೆಯನ್ನು ಲೀಟರ್ಗೆ ಕನಿಷ್ಠ 50 ರೂಪಾಯಿ ಹೆಚ್ಚಿಸುವಂತೆ ಒತ್ತಡ ಬಂದಿತ್ತು. ಆದರೆ ಸರ್ಕಾರ ರೈತರ ಮತ್ತು ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಕೇವಲ 7 ರೂಪಾಯಿ ಮಾತ್ರ ಹೆಚ್ಚಿಸಿದೆ. ಉಳಿದ 43 ರೂಪಾಯಿ ಸರ್ಕಾರವೇ ಭರಿಸಿದೆ ಎಂದು ಹೇಳಿದರು.
ಇಂಧನ ಬೆಲೆ ಏರಿಕೆ ಬಗ್ಗೆ ನರೇಂದ್ರ ಮೋದಿ ಮಾತು:
When the West Asia crisis drove crude oil from 70 dollars to 122 dollars a barrel in just a few weeks, India faced the prospect of a diesel price hike of at least 50 rupees a litre. The Modi government refused to pass that entire shock onto ordinary citizens and farmers. It raised diesel by only 7 rupees a litre and absorbed the remaining 43 rupees itself. While neighbouring countries saw diesel prices jump 40 to 50 percent, India protected its people. The government has been bearing a monthly loss of 14,000 crore rupees ever since, simply so farmers would not suffer. This is what it looks like when a government puts farmers first and treats citizens as its real responsibility.
— Sandiip Gandotra (@sandiipgandotra) November 12, 2026
ಸರ್ಕಾರಕ್ಕೆ ಪ್ರತಿ ತಿಂಗಳು 14,000 ಕೋಟಿ ರೂಪಾಯಿ ಹೊರೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಇಂಧನ ಬೆಲೆಗಳ ಆಘಾತವನ್ನು ನಿಭಾಯಿಸಲು ಸರ್ಕಾರವು ಪ್ರತಿ ತಿಂಗಳು ಸುಮಾರು 14,000 ಕೋಟಿ ರೂಪಾಯಿ ಭರಿಸುತ್ತಿದೆ ಎಂದು ಮೋದಿ ಹೇಳಿದರು. ʼʼಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಈ ಬೆಲೆ ಏರಿಕೆಯ ಸಂಪೂರ್ಣ ಹೊರೆಯನ್ನು ದೇಶದ ರೈತರು ಮತ್ತು ಸಾಮಾನ್ಯ ಜನರ ಮೇಲೆ ಹೇರಲು ಕೇಂದ್ರವು ಬಯಸುವುದಿಲ್ಲʼʼ ಎಂದರು.
ಮಾಧ್ಯಮಗಳೊಂದಿಗಿನ ದಶಕಗಳ ನಂಟು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ
ವಾಣಿಜ್ಯ ಸಾರಿಗೆ, ಕೃಷಿ ಯಂತ್ರೋಪಕರಣಗಳು ಮತ್ತು ಹಲವು ಕೈಗಾರಿಕಾ ಚಟುವಟಿಕೆಗಳಿಗೆ ಶಕ್ತಿ ತುಂಬುವ ಡೀಸೆಲ್ ಭಾರತದ ಆರ್ಥಿಕತೆಗೆ ನಿರ್ಣಾಯಕ. ಡೀಸೆಲ್ ಬೆಲೆಯಲ್ಲಿನ ತೀವ್ರ ಏರಿಕೆಯು ಸರಕು ಸಾಗಣೆ ಶುಲ್ಕ ಮತ್ತು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಬಹುದು. ಇದು ಆಹಾರ ಬೆಲೆಗಳು ಮತ್ತು ಹಣದುಬ್ಬರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಪಶ್ಚಿಮ ಏಷ್ಯಾ ಸಂಘರ್ಷದ ನಂತರ ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿನ ಏರಿಳಿತದ ಮಧ್ಯೆ ಹೆಚ್ಚುವರಿ ಹೊರೆಯನ್ನು ಭರಿಸುವ ನಿರ್ಧಾರ ಸರ್ಕಾರಕ್ಕೆ ಬಂದಿದೆ.
ನೆರೆಯ ದೇಶಗಳಲ್ಲಿ ಡೀಸೆಲ್ ಬೆಲೆ ಶೇ. 50ರಷ್ಟು ಏರಿಕೆ
ಅದೇ ಸಮಯದಲ್ಲಿ, ನೆರೆಯ ದೇಶಗಳಲ್ಲಿ ಡೀಸೆಲ್ ಬೆಲೆ ಶೇಕಡಾ 40ರಿಂದ 50 ರೂಪಾಯಿ ಹೆಚ್ಚಾಗಿತ್ತು. ಆದರೆ ಭಾರತದಲ್ಲಿ ಆ ಹೊರೆ ಜನರ ಮೇಲೆ ಬೀಳಲು ಅವಕಾಶ ನೀಡಲಿಲ್ಲ ಎಂದು ಮೋದಿ ಹೇಳಿದರು. ಟ್ರ್ಯಾಕ್ಟರ್ಗಳು, ನೀರಾವರಿ ಪಂಪ್ಗಳು ಮತ್ತು ಕೃಷಿಯಲ್ಲಿ ಸರಕುಗಳ ಸಾಗಣೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಡೀಸೆಲ್ ಪ್ರಮುಖ ಪಾತ್ರ ವಹಿಸುತ್ತದೆ. ಪರಿಣಾಮವಾಗಿ, ಡೀಸೆಲ್ ಬೆಲೆ ಹೆಚ್ಚಾದರೆ, ಕೃಷಿ ವೆಚ್ಚ ಮತ್ತು ಆಹಾರ ಉತ್ಪನ್ನಗಳ ಸಾಗಣೆ ವೆಚ್ಚವೂ ಹೆಚ್ಚಾಗಬಹುದು. ಅದಕ್ಕಾಗಿಯೇ ರೈತರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು.