ಮುಂಬೈ: ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ (PM Keir Starmer) ಅವರು ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ನಿನ್ನೆ ಮುಂಬೈಗೆ ಬಂದಿಳಿದ ಅವರು ಪ್ರಧಾನಿ ಮೋದಿ ಅವರನ್ನೂ ಭೇಟಿಯಾಗಿದ್ದಾರೆ. ಇಂದು ಇನ್ಫೋಸಿಸ್ (Infosys) ಸಹ-ಸಂಸ್ಥಾಪಕ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ (Nandan Nilekani ) ಅವರನ್ನು ಸ್ಟಾರ್ಮರ್ ಭೇಟಿ ಮಾಡಿದ್ದರು. ಆಧಾರ್ (Aadhaar) ಮಾದರಿಯಲ್ಲಿ ಯುಕೆಯಲ್ಲಿ ಡಿಜಿಟಲ್ ಐಡಿ ವ್ಯವಸ್ಥೆಯನ್ನು ಜಾರಿಗೆ ತರುವ ಯೋಜನೆ ಕುರಿತು ಮಾತುಕತೆ ನಡೆದಿದೆ. ನಿಲೇಕಣಿ ಅವರೊಂದಿಗಿನ ಭೇಟಿಯು ಇನ್ಫೋಸಿಸ್‌ನೊಂದಿಗಿನ ಸಂಭಾವ್ಯ ವಾಣಿಜ್ಯ ಒಪ್ಪಂದದ ಬಗ್ಗೆ ಅಲ್ಲ ಮತ್ತು ಯುಕೆ ಸರ್ಕಾರವು ಈ ಯೋಜನೆಯ ತನ್ನದೇ ಆದ ಆವೃತ್ತಿಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಸ್ಟಾರ್ಮರ್ ಅವರ ವಕ್ತಾರರು ಹೇಳಿದ್ದಾರೆ.
ಯುಕೆಯಲ್ಲಿ ಡಿಜಿಟಲ್ ಐಡಿ ಕಾರ್ಡ್‌ಗಳಿಗೆ ಬೆಂಬಲ ಕುಸಿದಿದೆ ಮತ್ತು ಎಲ್ಲಾ ವಿರೋಧ ಪಕ್ಷಗಳು ಈ ಯೋಜನೆಯನ್ನು ವಿರೋಧಿಸುವುದಾಗಿ ಹೇಳಿವೆ. ಆದಾಗ್ಯೂ, ಯುಕೆ ಪ್ರಧಾನಿ ತಮ್ಮ ಯೋಜನೆಯ ಬಗ್ಗೆ ಆಶಾವಾದಿಯಾಗಿದ್ದಾರೆ. ನಾವು ಭಾರತ ಎಂಬ ದೇಶಕ್ಕೆ ಹೋಗುತ್ತಿದ್ದೇವೆ, ಅಲ್ಲಿ ಅವರು ಈಗಾಗಲೇ ಐಡಿ ಮಾಡಿ ಅದರಲ್ಲಿ ಭಾರಿ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಅವರು ಹೇಳಿದ್ದೆರು. ಕಳೆದ ತಿಂಗಳು, ಬ್ರಿಟಿಷ್ ನಾಗರಿಕರು ಮತ್ತು ಖಾಯಂ ನಿವಾಸಿಗಳು ಕೆಲಸ ಪಡೆಯಲು ಕಡ್ಡಾಯ ಡಿಜಿಟಲ್ ಗುರುತಿನ ಚೀಟಿ ಅಗತ್ಯವಿದೆ ಎಂದು ಸ್ಟಾರ್ಮರ್ ಘೋಷಿಸಿದ್ದಾರೆ.
ಅನಧಿಕೃತ ವಲಸೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಡಿಜಿಟಲ್ ಐಡಿ, ಜನರು ಆರೋಗ್ಯ ರಕ್ಷಣೆ, ಕಲ್ಯಾಣ, ಮಕ್ಕಳ ಆರೈಕೆ ಮತ್ತು ಇತರ ಸಾರ್ವಜನಿಕ ಸೇವೆಗಳನ್ನು ಪಡೆಯಲು ಮತ್ತಷ್ಟು ಅನುಕೂಲ ಎಂದು ಅವರು ಹೇಳಿದ್ದಾರೆ. ಎರಡನೇ ಮಹಾಯುದ್ಧದ ನಂತರ, ಬ್ರಿಟನ್ ಸಾಮಾನ್ಯ ನಾಗರಿಕರಿಗೆ ಕಡ್ಡಾಯ ಗುರುತಿನ ಚೀಟಿಗಳನ್ನು ಹೊಂದಿಲ್ಲ. ಅಂತಹ ಐಡಿ ವೈಯಕ್ತಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುತ್ತದೆ ಮತ್ತು ಖಾಸಗಿ ಮಾಹಿತಿಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ವಿಪಕ್ಷಗಳು ವಿರೋಧಿಸಿವೆ.
ಈ ಸುದ್ದಿಯನ್ನೂ ಓದಿ: Tatkal Ticket Booking: ರೈಲು ಪ್ರಯಾಣಕ್ಕೆ ಹೊಸ ನಿಯಮ; ಅ.1ರಿಂದ ಆನ್‌ಲೈನ್ ಟಿಕೆಟ್‌ಗೆ ಆಧಾರ್ ಧೃಡೀಕರಣ ಕಡ್ಡಾಯ
ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಲು ಜುಲೈನಲ್ಲಿ ಪಿಎಂ ಮೋದಿ ಯುಕೆಗೆ ಭೇಟಿ ನೀಡಿದ ಕೆಲ ತಿಂಗಳ ನಂತರ ಇದೀಗ ಸ್ಟಾರ್ಮರ್ ಭಾರತಕ್ಕೆ ಭೇಟಿ ನೀಡಿದ್ದಾರೆ. ವಿಶ್ವಸಂಸ್ಥೆ ಸಾಮಾನ್ಯ ಮಂಡಳಿಯಲ್ಲಿ ಸ್ಥಾನ ಪಡೆಯುವ ಭಾರತದ ಪ್ರಯತ್ನವನ್ನು ಅವರು ಬೆಂಬಲಿಸಿದ್ದಾರೆ. ಹಿಂದಿಯಲ್ಲಿ ನಮಸ್ಕಾರ್ ದೋಸ್ತಾನ್ ("Namaskar doston) ಎಂಜದು ಭಾಷಣ ಆರಂಭಿಸಿದ ಕೀರ್ ಸ್ಟಾರ್ಮರ್, 2028 ರ ವೇಳೆಗೆ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. 2047ರೊಳಗೆ ನಿಮ್ಮ ವಿಕಸಿತ ಭಾರತ ಕಲ್ಪನೆ ಸಾಕಾರಗೊಳ್ಳಲಿ ಎಂದು ಅವರು ಹೇಳಿದರು.