ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶಾಂತಿ ಕಾಪಾಡಲು ಆದ್ಯತೆ; ಭಾರತ- ಚೀನಾ ಸೇನೆ ನಡುವೆ ಮಾತುಕತೆ

India- Chinese army: ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಶಾಂತಿ ಕಾಪಾಡಲು ಭಾರತ ಮತ್ತು ಚೀನಾ ಸೇನೆಗಳು ಮಾತುಕತೆ ನಡೆಸುತ್ತಿವೆ. ಅರುಣಾಚಲ ಪ್ರದೇಶ ವಲಯದ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಪರಿಸ್ಥಿತಿಯನ್ನು ಪರಿಶೀಲಿಸಿದ ಎರಡು ರಾಷ್ಟ್ರಗಳ ಸೇನಾ ನಿಯೋಗವು ಬಳಿಕ ಕಿಬಿಥೂ ಪ್ರದೇಶದ ವಾಚಾ- ದಮೈ ಗಡಿ ಭಾಗದಲ್ಲಿ ಸಭೆ ನಡೆಸಿತ್ತು.

ಸಂಗ್ರಹ ಚಿತ್ರ

ಅರುಣಾಚಲ ಪ್ರದೇಶ: ಭಾರತ ಮತ್ತು ಚೀನಾ (India-china) ನಡುವಿನ ಗಡಿ ನಿಯಂತ್ರಣ ರೇಖೆಯ (Line of Actual Control) ಉದ್ದಕ್ಕೂ ಶಾಂತಿಯನ್ನು ಕಾಪಾಡಲು ಎರಡು ರಾಷ್ಟ್ರಗಳ ಸೇನಾ (India- Chinese army) ನಿಯೋಗವು ಅರುಣಾಚಲ ಪ್ರದೇಶದ (Arunachal Pradesh) ಕಿಬಿಥೂ ಪ್ರದೇಶದ ವಾಚಾ- ದಮೈ ಗಡಿ ಭಾಗದಲ್ಲಿ ಸಭೆ ನಡೆಸಿತ್ತು. ಭಾರತ ನಿಯೋಗದ ನೇತೃತ್ವವನ್ನು ದಿಮಾಪುರ ಮೂಲದ ಸೇನೆಯ 3 ಕಾರ್ಪ್ಸ್‌ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಗಿರೀಶ್ ಕಾಲಿಯಾ (Lt General Girish Kalia) ಅವರು ವಹಿಸಿದ್ದರು. ಯಾವೆಲ್ಲ ವಿಷಯಗಳ ಕುರಿತು ಮಾತುಕತೆ ನಡೆಸಲಾಗಿದೆ ಎನ್ನುವ ಕುರಿತು ಎರಡು ಕಡೆಯವರು ಸ್ಪಷ್ಟ ಮಾಹಿತಿ ನೀಡಿಲ್ಲ.

ಗಡಿ ಉದ್ವಿಗ್ನತೆ ಕುರಿತು ಬೀಜಿಂಗ್‌ನಲ್ಲಿ ಇತ್ತೀಚೆಗೆ ವಿಶೇಷ ಪ್ರತಿನಿಧಿಗಳು ಮಾತುಕತೆ ನಡೆಸಿದ ಬಳಿಕ ಇದೀಗ ಭಾರತ ಮತ್ತು ಚೀನಾ ಸೇನಾ ನಿಯೋಗವು ಅರುಣಾಚಲ ಪ್ರದೇಶ ವ್ಯಾಪ್ತಿಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾನುವಾರ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿತು. ಬಳಿಕ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವ ಕುರಿತು ಮಾತುಕತೆ ನಡೆಸಿದವು.

ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಗದ್ದಲ; ಸಿಎಂ ವಿಜಯ್‌ ವಿರುದ್ಧ ಆಕ್ರೋಶ, ಡಿಎಂಕೆ ಶಾಸಕರ ಉಚ್ಚಾಟನೆ

ಅರುಣಾಚಲ ಪ್ರದೇಶದ ಮೇಲ್ಭಾಗದ ಸುಬನ್ಸಿರಿ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾ ಪಡೆಗಳು ಆಕ್ರಮಣಕಾರಿ ಮಿಲಿಟರಿ ಪ್ರದರ್ಶನ ನಡೆಸುತ್ತಿವೆ ಎನ್ನುವ ಮಾಹಿತಿಯ ನಡುವೆ ಈ ಮಾತುಕತೆಗಳು ನಡೆದಿವೆ.

ಬೀಜಿಂಗ್ ನಲ್ಲಿ ಆಗಸ್ಟ್ 25 ರಂದು ನಡೆದ ವಿಶೇಷ ಪ್ರತಿನಿಧಿಗಳ ಮಾತುಕತೆಯಲ್ಲಿ ದ್ವಿಪಕ್ಷೀಯ ಸಂಬಂಧಗಳಿಗಾಗಿ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳಲು ಚೀನಾಕ್ಕೆ ಭಾರತ ಸಲಹೆ ನೀಡಿತ್ತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಅವರಿಬ್ಬರು ಗಡಿ ನಿರ್ಣಯ ಮತ್ತು ಗಡಿಯಾಚೆಗಿನ ಸಹಕಾರದ ಕುರಿತು ಚರ್ಚೆ ನಡೆಸಿದ್ದರು.

ಈ ಸಭೆಯ ಬಳಿಕ ವಿದೇಶಾಂಗ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಭಾರತ ಮತ್ತು ಚೀನಾ ನಡುವಿನ ಮಾತುಕತೆಗಳು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವುದರ ಕುರಿತಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ನಾಳೆ ವಡೋದರಾ ಭೇಟಿ: ಮೊದಲ ಬಾರಿಗೆ BookMyShow ಮೂಲಕ ಕಾರ್ಯಕ್ರಮದ ನೋಂದಣಿ; ಗಂಟೆಯಲ್ಲೇ ಎಲ್ಲ ಸೀಟ್ ಭರ್ತಿ

ದ್ವಿಪಕ್ಷೀಯ ಸಂಬಂಧದ ನಿರಂತರ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಭಾರತ ಮತ್ತು ಚೀನಾ ಗಡಿಯ 3,488 ಕಿಮೀ ವಿಸ್ತೀರ್ಣದ ವಿವಾದವನ್ನು ಸಮಗ್ರವಾಗಿ ಪರಿಹರಿಸಲು 2003 ರಲ್ಲಿ ಸ್ಥಾಪಿಸಲಾದ ಗಡಿ ಮಾತುಕತೆ ಕಾರ್ಯವಿಧಾನಕ್ಕೆ ಸಂಬಂಧಿಸಿ ಮಾತುಕತೆ ನಡೆದಿರುವುದಾಗಿ ತಿಳಿಸಿತ್ತು.

ವಿದ್ಯಾ ಇರ್ವತ್ತೂರು

View all posts by this author