ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

No Army Countries: ಇವು ಜಗತ್ತಿನ ಅತ್ಯಂತ ಸುರಕ್ಷಿತ ದೇಶಗಳು; ಇಲ್ಲಿ ಸೈನ್ಯವೇ ಇಲ್ಲ..!

ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳು ತಮ್ಮ ಗಡಿಗಳನ್ನು ಕಾಪಾಡಲು ಬಲಿಷ್ಠ ಸೈನ್ಯವನ್ನು ಹೊಂದಿದ್ದು, ಶತ್ರು ದಾಳಿಗಳನ್ನು ತಡೆಗಟ್ಟಲು, ಭದ್ರತೆ ಒದಗಿಸಲು, ಯುದ್ಧ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸೈನ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಒಂದು ಆಶ್ಚರ್ಯಕರ ವಿಚಾರ ಏನು ಗೊತ್ತಾ ವಿಶ್ವದ ಈ ಐದು ದೇಶಗಳಲ್ಲಿ ಸೈನ್ಯವೇ ಇಲ್ಲವಂತೆ ಈ ದೇಶಗಳಲ್ಲಿ ಹೇಳಿಕೊಳ್ಳುವುದಕ್ಕೂ ಒಬ್ಬ ಸೈನಿಕನ್ನೂ ಇಲ್ಲವಂತೆ....!

ಯಾವುದೇ ಸೈನ್ಯ, ಸೈನಿಕನಿಲ್ಲದ ದೇಶಗಳಿದು!

ಸೇನೆಯೇ ಇಲ್ಲದ ದೇಶಗಳು (ಸಾಂಧರ್ಬಿಕ ಚಿತ್ರ) -

Profile
Sushmitha Jain Nov 19, 2025 8:00 AM

ಬೆಂಗಳೂರು: ಒಂದು ದೇಶದ ಭದ್ರತೆಯನ್ನು ಖಾತರಿಪಡಿಸುವಲ್ಲಿ ಸೇನೆ(Army) ಬಹಳ ಪ್ರಮುಖ ಪಾತ್ರವಹಿಸುತ್ತದೆ. ಸೈನಿಕರು ದೇಶದ ಪ್ರಗತಿ ಮತ್ತು ಸಮೃದ್ಧಿಗಾಗಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸಲು ಹಗಲು ರಾತ್ರಿಯನ್ನದೇ ಶ್ರಮಿಸುತ್ತಾರೆ. ಗಡಿ ಭಾಗಗಳಲ್ಲಿ ಮಳೆ-ಗಾಳಿ, ಬಿಸಿಲು-ಚಳಿಯನ್ನು ಲೆಕ್ಕಿಸದೇ ತಮ್ಮ ಪ್ರಾಣವನ್ನು ಒತ್ತೆಗಿಟ್ಟು ದೇಶವನ್ನು ಹಾಗೂ ಪ್ರಜೆಗಳನ್ನು ಕಾಪಾಡುತ್ತಾರೆ. ಸೇನೆಯ ದೇಶದ ಬೆನ್ನೆಲುಬಾಗಿದ್ದು, ವಿವಿಧ ಯುದ್ಧಗಳಲ್ಲಿ ಮತ್ತು ಶಾಂತಿಕಾಲದ ಕಾರ್ಯಾಚರಣೆಗಳಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತವೆ. ಒಂದು ದೇಶದಲ್ಲಿ ಶಾಂತಿ-ಭದ್ರತೆ, ಸುರಕ್ಷತೆ ನೆಲೆಸಿರುತ್ತದೆ ಎಂದರೆ ಅದಕ್ಕೆ ಮುಖ್ಯ ಕಾರಣವೇ ಸೈನ್ಯ ಹಾಗು ಸೈನಿಕರಾಗಿರುತ್ತಾರೆ. ಹೀಗೆ ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳು ತಮ್ಮ ಗಡಿಗಳನ್ನು ಕಾಪಾಡಲು ಬಲಿಷ್ಠ ಸೈನ್ಯವನ್ನು ಹೊಂದಿದ್ದು, ಶತ್ರು ದಾಳಿಗಳನ್ನು ತಡೆಗಟ್ಟಲು, ಭದ್ರತೆ ಒದಗಿಸಲು, ಯುದ್ಧ ಪರಿಸ್ಥಿತಿಯನ್ನು ಎದುರಿಸುವಲ್ಲಿ ಸೈನ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಒಂದು ಆಶ್ಚರ್ಯಕರ ವಿಚಾರ ಏನು ಗೊತ್ತಾ ವಿಶ್ವದ ಈ ಐದು ದೇಶಗಳಲ್ಲಿ ಸೈನ್ಯವೇ ಇಲ್ಲವಂತೆ(No Army Countries), ಈ ದೇಶಗಳಲ್ಲಿ ಹೇಳಿಕೊಳ್ಳುವುದಕ್ಕೂ ಒಬ್ಬ ಸೈನಿಕನ್ನೂ ಇಲ್ಲವಂತೆ....!

ಹೌದು, ನಾವಿಂದು ನಿಮಗೆ ಹೇಳ ಹೊರಟಿರುವುದು ಸೈನ್ಯ ಹಾಗೂ ಸೈನಿಕರೇ ಇಲ್ಲದ ದೇಶಗಳ ಬಗ್ಗೆ, ಈ ರಾಷ್ಟ್ರಗಳಲ್ಲಿ ನಿಯೋಜಿತ ಸೈನ್ಯಗಳಲ್ಲ, ಹಾಗಾಗಿ ತಮ್ಮ ದೇಶ ಹಾಗೂ ಪ್ರಜೆಗಳ ಭದ್ರತೆಗಾಗಿ ಇತರ ರಾಷ್ಟ್ರಗಳನ್ನು ಅವಲಂಬಿತವಾಗಿದ್ದು, ಅವರ ಸಹಕಾರ, ಅಂತರರಾಷ್ಟ್ರೀಯ ಒಪ್ಪಂದಗಳನ್ನೊಳಗೊಂಡ ವಿಶಿಷ್ಠ ಭದ್ರತಾ ವ್ಯವಸ್ಥೆಗಳನ್ನು ಹೊಂದಿದೆ.. ನಿಮ್ಗೂ ಆ ದೇಶಗಳು ಯಾವುವು..? ಹೇಗೆ ತನ್ನ ರಾಷ್ಟ್ರದಲ್ಲಿ ರಕ್ಷಣೆಯನ್ನು ಕಾಯ್ದುಕೊಳ್ಳುತ್ತದೆ ಎಂಬಿತ್ಯಾದಿ ತಿಳಿದುಕೊಳ್ಳುವು ಇಚ್ಛೆ ಇದ್ದರೆ ಈ ಸುದ್ದಿ ಓದಿ.

ಸಿಂಗಾಪುರ್:

ಸಿಂಗಾಪುರ ಸುಂದರ ದೇಶ. ತನ್ನ ಸೌಂದರ್ಯದ ಮೂಲಕವೇ ಈ ದೇಶ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿರುತ್ತದೆ. ಭಾರತದಿಂದಲೂ ಸಾಕಷ್ಟು ಪ್ರವಾಸಿಗರು ಸಿಂಗಾಪುರಕ್ಕೆ ಭೇಟಿ ನೀಡುತ್ತಾರೆ. ಆದರೆ ಅತೀ ಹೆಚ್ಚು ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಈ ದೇಶದಲ್ಲಿ ಸೈನ್ಯವೇ ಇಲ್ಲ.

ಆದರೆ ತನ್ನ ದೇಶವನ್ನು ರಕ್ಷಸಿಕೊಳ್ಳಲು ಸಿಂಗಾಪುರ ಪ್ರತಿ ವರ್ಷ 11.5 ಬಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡುತ್ತದೆ, ಇದು ಅದರ ಒಟ್ಟು GDPಯ ಶೇ.2.8% ಆಗಿದೆ. ಇನ್ನು ಈ ರಾಷ್ಟ್ರ ಶಾಂತಿಪೂರ್ಣ ವಾತಾವರಣಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿ ಅಪರಾಧ ಪ್ರಮಾಣವೂ ಕಡಿಮೆ ಇದೆ.

ಈ ಸುದ್ದಿಯನ್ನು ಓದಿ: Viral Video: ನಿರ್ಮಾಣ ಹಂತದ ಫ್ಲೈ ಓವರ್‌ ನಿಂದ ಹಾರಿದ ಕಾರು: ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ನ್ಯೂಜಿಲೆಂಡ್:

ಅದ್ಭುತ ನೈಸರ್ಗಿಕ ಸೌಂದರ್ಯ, ಪ್ರಾಕೃತಿಕ ಸಂಪತ್ತು ಹೊಂದಿರುವ ರಮಣೀಯ ಪ್ರೇಕ್ಷಣೀಯ ಸ್ಥಳ ನ್ಯೂಜಿಲೆಂಡ್. ಕೊರೆಯುವ ಚಳಿ ಇದ್ದರೂ ಪ್ರವಾಸಿಗರ ಪಾಲಿಗೆ ಇದು ನೆಚ್ಚಿನ ಟೂರಿಸ್ಟ್ ಸ್ಪಾಟ್. ಆದ್ರೆ ಇಲ್ಲಿ ನಿಯೋಜಿತ ಸೈನ್ಯವಾಗಲಿ - ಸೈನಿಕನಾಗಲಿ. ಈ ಕಾರಣಕ್ಕಾಗಿಯೇ ನ್ಯೂಜಿಲೆಂಡ್ ರಕ್ಷಣೆಯನ್ನು ಒದಗಿಸಿಕೊಳ್ಳಲು 3.9 ಬಿಲಿಯನ್ ಡಾಲರ್‌ಗಳನ್ನು ವ್ಯಯಿಸುತ್ತಿದೆ, ಇದು ಅದರ GDP ರ ಶೇ.1ಕ್ಕಿಂತ ಕಡಿಮೆಯಾಗಿದೆ. ಇಲ್ಲಿನ ಭೌಗೋಳಿಕ ಸ್ಥಿತಿ ಸ್ವಾಭಾವಿಕವಾಗಿಯೇ ದೇಶಕ್ಕೆ ರಕ್ಷಣೆಯನ್ನು ಒದಗಿಸುತ್ತಿದ್ದು, ಬಲವಾದ ನ್ಯಾಯಾಂಗ ವ್ಯವಸ್ಥೆ ರಕ್ಷಣಾ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತಿದೆ.

ಆಸ್ಟ್ರೀಯಾ:

ಇನ್ನು ಸೇನೆ ಇಲ್ಲದ ದೇಶಗಳಲ್ಲಿ ಆಸ್ಟ್ರೀಯಾ ದೇಶವೂ ಒಂದಾಗಿದ್ದು, ಯುರೋಪಿನ ಆಸ್ಟ್ರಿಯಾ ಪ್ರತಿ ವರ್ಷ 3.4 ಬಿಲಿಯನ್ ಡಾಲರ್ ರಕ್ಷಣೆಗೆ ಖರ್ಚು ಮಾಡುತ್ತಿದೆ. ದೇಶದ ದೀರ್ಘಕಾಲದಿಂದ ನಡೆಸಿಕೊಂಡು ಬಂದಿರುವ ಕಟ್ಟುನಿಟ್ಟಾದ ಗಡಿ ನಿಯಂತ್ರಣಗಳು ಇದರ ಭದ್ರತಾ ವ್ಯವಸ್ಥೆಯ ಪ್ರಮುಖ ಅಂಶಗಳಾಗಿವೆ.

ಐಸ್‌ಲೆಂಡ್:

ಯುರೋಪ್ ಅತ್ಯಂತ ಸುಂದರವಾದ ದ್ವೀಪಗಳಲ್ಲಿ ಒಂದಾಗಿರುವ ಐಸ್‌ಲೆಂಡ್ ಕೂಡ ಶಾಶ್ವತವಾದ ಸೈನ್ಯವಿಲ್ಲ, ಐಸ್‌ಲ್ಯಾಂಡ್‌ಗೆ ಅದರ ರಾಷ್ಟ್ರೀಯ ರಕ್ಷಣಾ ಪಡೆಗಳು ಮತ್ತು ಕರಾವಳಿ ಕಾವಲುಪಡೆ ಇದೆ, ಇದು ಗಡಿ ಸಂರಕ್ಷಣೆ ಮತ್ತು ಕಡಲ ಕಾರ್ಯಾಚರಣೆಗಳಿಗೆ ಜವಾಬ್ದಾರವಾಗಿರುತ್ತದೆ. ಇದಕ್ಕಾಗಿ ಐಸ್‌ಲೆಂಡ್ ರಕ್ಷಣಾ ಬಜೆಟ್ ಕೇವಲ 40 ಮಿಲಿಯನ್ ಡಾಲರ್ ಅನ್ನು ವ್ಯಯಿಸುತ್ತಿದೆ.

ಐರ್ಲೆಂಡ್:

ಇನ್ನು ಸೇನೆ ಇಲ್ಲದ ರಾಷ್ಟ್ರಗಳ ಪೈಕಿ ಐರ್ಲೆಂಡ್ ದೇಶವೂ ಒಂದಾಗಿದ್ದು, ಪ್ರತಿ ವರ್ಷ 1.3 ಬಿಲಿಯನ್ ಡಾಲರ್ ತನ್ನ ರಕ್ಷಣೆಗೆ ಖರ್ಚು ಮಾಡುತ್ತಿದೆ. ಇದು ಅದರ GDP ರ ಶೇ.0.3ರಷ್ಟು ಜಮ್ಮು ರಕ್ಷಣಾ ಕಾರ್ಯಚಾರಣೆಗೆ ವ್ಯಯಿಸುತ್ತಿದ್ದು, ಇದು ಜಗತ್ತಿನ ಅತ್ಯಂತ ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಸೈನಿಕ ಮೈತ್ರಿಗಳ ಕೊರತೆಯೊಂದಿಗೆ, ಐರ್ಲೆಂಡ್ ಬಲವಾದ ಮತ್ತು ಪರಿಣಾಮಕಾರಿ ಪೊಲೀಸ್ ದಳದ ಬೆಂಬಲದಿಂದ ಬೆಂಬಲದಿಂದ ದೇಶದಲ್ಲಿ ಶಾಂತಿ ಸುಭಿಕ್ಷೆ ನೆಲೆಸಿದೆ.