ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ಶವವನ್ನು ಚೀಲದಲ್ಲಿಟ್ಟು ಜಿಲ್ಲಾಧಿಕಾರಿಯ ಕಚೇರಿಗೆ ತಂದ ತಂದೆ

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನವಜಾತ ಶಿಶುವೊಂದು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಸತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆಯು ಶುಲ್ಕವನ್ನು ಪದೇ ಪದೆ ಹೆಚ್ಚಿಸಿ, ತನ್ನ ಪತ್ನಿಯ ಡೆಲಿವರಿಯನ್ನು ತಡ ಮಾಡಿದೆ ಎಂದು ಆರೋಪಿಸಿದ್ದಾರೆ. ಇದರಿಂದಾಗಿ ಶಿಶುವಿನ ಸಾವು ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ಲಖನೌ: ಉತ್ತರ ಪ್ರದೇಶದ (Uttar Pradesh) ಲಖಿಂಪುರ್ ಖೇರಿಯಲ್ಲಿ, ವಿಪಿನ್ ಗುಪ್ತಾ ಎಂಬ ವ್ಯಕ್ತಿಯು ತನ್ನ ನವಜಾತ ಶಿಶುವಿನ (Newborn Baby) ಮೃತದೇಹವನ್ನು ಜಿಲ್ಲಾಧಿಕಾರಿಯ ಕಚೇರಿಗೆ ತಂದು ದೂರು ದಾಖಲಿಸಿದ ನಂತರ, ಜಿಲ್ಲಾಧಿಕಾರಿಯು (District Collector) ಗೋಲ್ಡರ್ ಆಸ್ಪತ್ರೆಯನ್ನು ಸೀಲ್ ಮಾಡಿದ್ದಾರೆ. ವಿಪಿನ್ ಗುಪ್ತಾ, ಆಸ್ಪತ್ರೆಯು ಶುಲ್ಕವನ್ನು ಪದೇ ಪದೆ ಹೆಚ್ಚಿಸಿ, ತನ್ನ ಪತ್ನಿಯ ಡೆಲಿವರಿಯನ್ನು ತಡ ಮಾಡಿದೆ ಎಂದು ಆರೋಪಿಸಿದ್ದಾರೆ, ಇದರಿಂದಾಗಿ ಶಿಶುವಿನ ಸಾವು ಸಂಭವಿಸಿದೆ ಎಂದು ಆರೋಪಿಸಲಾಗಿದೆ.

ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಜಿಲ್ಲಾಧಿಕಾರಿ “ನವಜಾತ ಶಿಶುವಿನ ಸಾವಿನ ಪ್ರಕರಣದಲ್ಲಿ, ಜಿಲ್ಲಾಡಳಿತವು ಗೋಲ್ಡರ್ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ. ಜಿಲ್ಲಾಧಿಕಾರಿಯ ಸೂಚನೆಯಂತೆ, ಎಡಿಎಂಎಕೆ ರಾಸ್ತೋಗಿ ಶ್ರೀಜನ್ ಆಸ್ಪತ್ರೆಗೆ ಭೇಟಿ ನೀಡಿ, ಗರ್ಭಿಣಿಯ ಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ. ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆಗಳನ್ನು ನೀಡಲಾಗಿದೆ. ಜಿಲ್ಲಾಡಳಿತವು ಸಂತ್ರಸ್ತರ ಕುಟುಂಬದೊಂದಿಗೆ ಇದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಅವಲಕ್ಕಿ ಚಿತ್ನಾನ್ನಕ್ಕೆ 500 ರೂ.! ನಟ ಗೋವಿಂದ ಪತ್ನಿಯ ಪ್ರತಿಕ್ರಿಯೆ ಹೀಗಿತ್ತು
ಈ ಬಗ್ಗೆ ಮಾತನಾಡಿದ ವಿಪಿನ್ ಗುಪ್ತಾ, ʼʼಆಸ್ಪತ್ರೆಯು ಸಾಮಾನ್ಯ ಡೆಲಿವರಿಗೆ 10,000 ರೂ. ಮತ್ತು ಸಿಸೇರಿಯನ್‌ಗೆ 12,000 ರೂ. ಶುಲ್ಕವೆಂದು ತಿಳಿಸಿತ್ತು. ಆದರೆ ನನ್ನ ಪತ್ನಿಯ ಪ್ರಸವ ವೇದನೆ ತೀವ್ರವಾದಂತೆ ಶುಲ್ಕವನ್ನು ಹೆಚ್ಚಿಸಿತುʼʼ ಎಂದು ಆರೋಪಿಸಿದ್ದಾರೆ. “ನಾನು ನನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದೆ. ಆದರೆ ಪ್ರಸವದ ಸಮಯದಲ್ಲಿ ಶುಲ್ಕವನ್ನು ಪದೇ ಪದೆ ಹೆಚ್ಚಿಸಿದರು. ರಾತ್ರಿ 2:30ರ ವೇಳೆಗೆ ನಾನು ಹಣವನ್ನು ಒಟ್ಟುಗೂಡಿಸಿದೆ. ಆದರೆ ಆಸ್ಪತ್ರೆಯವರು ಇನ್ನಷ್ಟು ಹಣ ಕೇಳಿದರು. ಶಸ್ತ್ರಚಿಕಿತ್ಸೆಗೆ ಮೊದಲು ಹಣ ಕೊಡದಿದ್ದರೆ ಆಪರೇಷನ್ ಮಾಡುವುದಿಲ್ಲ ಎಂದರು” ಎಂದು ಗುಪ್ತಾ ಹೇಳಿದರು.

ನನ್ನ ನವಜಾತ ಶಿಶು ಮೃತಪಟ್ಟಿತು. ಆ ನಂತರ ಆಸ್ಪತ್ರೆಯವರು ನನ್ನ ಪತ್ನಿಯನ್ನು ರಸ್ತೆಗೆ ಎಸೆದರು. ನಾವು ಬಳಿಕ ಶಸ್ತ್ರಚಿಕಿತ್ಸಕರ ಬಳಿಗೆ ಹೋದೆವು. ನಾನು ಜಿಲ್ಲಾಧಿಕಾರಿಯವರ ಬಳಿಗೆ ತೆರಳಿದೆ, ಶಿಶುವಿನ ಶವವನ್ನು ಚೀಲದಲ್ಲಿ ಒಯ್ಯುತ್ತಿದ್ದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿಯು ಗುಪ್ತಾ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿ ಕ್ರಮಕ್ಕೆ ಆದೇಶಿಸಿದರು. ಈ ಘಟನೆಯಿಂದ ಆಸ್ಪತ್ರೆಗಳ ಶುಲ್ಕ ವಿಧಾನ ಮತ್ತು ರೋಗಿಗಳ ಚಿಕಿತ್ಸೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.