ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅವಲಕ್ಕಿ ಚಿತ್ನಾನ್ನಕ್ಕೆ 500 ರೂ.! ನಟ ಗೋವಿಂದ ಪತ್ನಿಯ ಪ್ರತಿಕ್ರಿಯೆ ಹೀಗಿತ್ತು

ಬಾಲಿವುಡ್ ನಟ ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ತಮ್ಮ ಮೊದಲ ಯೂಟ್ಯೂಬ್ ವಿಡಿಯೊದೊಂದಿಗೆ ಅಭಿಮಾನಿಗಳ ಮನಗೆದ್ದಿದ್ದಾರೆ. ವಿಮಾನಗಳಲ್ಲಿನ ದುಬಾರಿ ಊಟದ ಬಗ್ಗೆ ತಮ್ಮ ಪ್ರಾಮಾಣಿಕ ಪ್ರತಿಕ್ರಿಯೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾರೆ.

ಅವಲಕ್ಕಿ ಚಿತ್ನಾನ್ನಕ್ಕೆ 500 ರೂ.!; ನಟ ಗೋವಿಂದ ಪತ್ನಿ ಹೇಳಿದ್ದೇನು?

Priyanka P Priyanka P Aug 23, 2025 7:06 PM

ಮುಂಬೈ: ಬಾಲಿವುಡ್ ನಟ ಗೋವಿಂದ ಅವರ ಪತ್ನಿ ಸುನೀತಾ ಅಹುಜಾ (Sunita Ahuja) ಸಾಮಾಜಿಕ ಮಾಧ್ಯಮ ಜಗತ್ತಿಗೆ ಪ್ರವೇಶಿಸಿದ್ದಾರೆ. ತಮ್ಮ ಮೊದಲ ಯೂಟ್ಯೂಬ್ ವಿಡಿಯೊದೊಂದಿಗೆ ಸುನೀತಾ ಹಲವರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲದೆ, ವಿಮಾನಗಳಲ್ಲಿನ ದುಬಾರಿ ಊಟದ ಬಗ್ಗೆ ತಮ್ಮ ಪ್ರಾಮಾಣಿಕ ಪ್ರತಿಕ್ರಿಯೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು (social media) ನಗುವಂತೆ ಮಾಡಿದ್ದಾರೆ.

ತಮ್ಮ ಚೊಚ್ಚಲ ವ್ಲಾಗ್‌ನಲ್ಲಿ ಸುನೀತಾ ಮುಂಬೈನಿಂದ ಚಂಡೀಗಢಕ್ಕೆ ಪ್ರಯಾಣ ಮಾಡಿದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅಲ್ಲಿ ಅವರು ಮಾತೆ ಮಹಾಕಾಳಿ ಮತ್ತು ಕಾಲಭೈರವ ದೇವಸ್ಥಾನಕ್ಕೆ ಭೇಟಿ ನೀಡಿದರು. ಅದಕ್ಕೂ ಮುನ್ನ ವಿಮಾನ ಪ್ರಯಾಣದ ವೇಳೆ ಊಟ ಮಾಡಲು ನಿರ್ಧರಿಸಿದಾಗ ಅವರಿಗೆ ಅವಲಕ್ಕಿ ಚಿತ್ರಾನ್ನದ ಬೆಲೆ ಕೇಳಿ ಶಾಕ್ ಆಗಿದೆ. ವಿಮಾನ ಪ್ರಯಾಣದ ಸಮಯದಲ್ಲಿ ಸುನೀತಾ ಅವಲಕ್ಕಿ ಚಿತ್ರಾನ್ನ ತಿನ್ನಲು ಮುಂದಾದರು. ಅದರ ಬೆಲೆ ಬರೋಬ್ಬರಿ 500 ರೂ.

ವಿಮಾನದಲ್ಲಿ ಅವಲಕ್ಕಿ ಚಿತ್ರಾನ್ನದ ಬೆಲೆ ಕೇಳಿ ಅವರು ಅಚ್ಚರಿಗೊಂಡಿದ್ದಾರೆ. “ನಾನು ಬೆಲೆ ಕೇಳದೆಯೇ ಅವಲಕ್ಕಿ ಚಿತ್ರಾನ್ನ ಖರೀದಿಸಿದೆ. ಅದು 500 ರೂಪಾಯಿ ಎಂದು ಅವರು ಹೇಳಿದಾಗ, ನನಗೆ ಆಘಾತವಾಯಿತು. 500 ರೂ.ಗೆ ನಾನು ಐದು ಕೆಜಿ ಅವಲಕ್ಕಿಯನ್ನೇ ಖರೀದಿಸಬಹುದಿತ್ತು. ಅದು ಇಡೀ ವಿಮಾನದ ಪ್ರಯಾಣಿಕರಿಗೆ ಆಹಾರ ನೀಡಲು ಸಾಕಾಗುತ್ತಿತ್ತು. ಆದರೂ, ನಾನು ಅದನ್ನು ತಿಂದೆ. ಆದರೆ ನಾಳೆ ಬೆಳಗ್ಗೆ ಅದು 500 ರೂ. ಮೌಲ್ಯದ ಅವಲಕ್ಕಿ ಚಿತ್ರಾನ್ನ ಹೊರಬರುತ್ತದೆ!” ಎಂದು ಗಹಗಹಿಸಿ ನಕ್ಕಿದ್ದಾರೆ.

ವಿಡಿಯೊ ವೀಕ್ಷಿಸಿ:

ಸುನೀತಾ ಅವರ ಪ್ರಾಮಾಣಿಕ ಪ್ರತಿಕ್ರಿಯೆ ಮತ್ತು ನೇರ ವ್ಯಕ್ತಿತ್ವವು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ. ಇದುವರೆಗಿನ ಅತ್ಯಂತ ಪ್ರಾಮಾಣಿಕ ಪ್ರತಿಕ್ರಿಯೆ ಎಂದು ನೆಟ್ಟಿಗರು ಹೊಗಳಿದ್ದಾರೆ. ಸುನೀತಾ ಅವರ ವ್ಲಾಗ್‌ನ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬಳಕೆದಾರರು ಕಮೆಂಟ್‌ಗಳ ಮಹಾಪೂರವನ್ನೇ ಹರಿಸಿದ್ದಾರೆ. ಅನೇಕರು ಸುನೀತಾ ಅವರ ಮಾತುಗಳನ್ನು ಒಪ್ಪಿಕೊಂಡಿದ್ದಾರೆ.

ಸುನೀತಾ ಅಹುಜಾ ಜೀವನದಲ್ಲಿ ಬಿರುಗಾಳಿ

ನಗು ಮತ್ತು ಸಂತೋಷದ ಕ್ಷಣಗಳನ್ನು ಮೀರಿ, ಸುನೀತಾ ಅಹುಜಾ ಅವರ ವೈಯಕ್ತಿಕ ಜೀವನವು ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ಅಭಿಮಾನಿಗಳನ್ನು ಬೆಚ್ಚಿಬೀಳಿಸಿದ ಬೆಳವಣಿಗೆಯೊಂದರಲ್ಲಿ, ಅವರು ತಮ್ಮ ಪತಿ, ನಟ ಗೋವಿಂದ ಬಾಂದ್ರಾ ಅವರೊಂದಿಗಿನ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಇಬ್ಬರೂ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಅರ್ಜಿಯಲ್ಲಿ ಕ್ರೌರ್ಯ ಮತ್ತು ಕೆಲವು ಆರೋಪಗಳನ್ನು ಉಲ್ಲೇಖಿಸಲಾಗಿದೆ. ಈ ಮೂಲಕ 38 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಲಿದ್ದಾರೆ ಎನ್ನಲಾಗಿದ್ದು, ಈ ಕುರಿತು ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ: Viral Video: ಭಾರತ ಕೊಳೆಗೇರಿ, ಕಸದ ರಾಶಿಗಳಿರುವ ದೇಶವಲ್ಲ; ಇಂಡಿಯಾ ಸುಂದರವಾಗಿದೆ ಎಂದ ವಿದೇಶಿ ವ್ಲಾಗರ್