ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೊರ್ಮುಜ್ ಜಲಸಂಧಿಯಲ್ಲಿ 20 ತೈಲ ಟ್ಯಾಂಕರ್‌ ಸುರಕ್ಷಿತ ಸಾಗಣೆಗೆ ಇರಾನ್ ಜೊತೆ ಭಾರತ ಮಾತುಕತೆ

ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡ್ಡಿ ಪಡಿಸಿದೆ. ಇದರಿಂದ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಉಂಟಾಗಿದೆ. ಇದೀಗ ಈ ಜಲ ಸಂಧಿಯ ಮೂಲಕ ಭಾರತಕ್ಕೆ ಬರಬೇಕಿರುವ 20 ತೈಲ ಟ್ಯಾಂಕರ್ ಗಳಿಗೆ ಸುರಕ್ಷತೆ ಒದಗಿಸುವಂತೆ ಭಾರತ ಇರಾನ್ ಜೊತೆ ಮಾತುಕತೆ ನಡೆಸಿದ್ದು, ಇರಾನ್ ಇದಕ್ಕೆ ಒಪ್ಪಿಕೊಂಡಿದೆ ಎನ್ನಲಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಹೊರ್ಮುಜ್ ಜಲಸಂಧಿಯ (Strait of Hormuz) ಮೂಲಕ 20 ತೈಲ ಟ್ಯಾಂಕರ್‌ಗಳ (Oil tankers) ಸುರಕ್ಷಿತ ಸಾಗಣೆ ಕುರಿತು ಭಾರತವು ಇರಾನ್ (iran war) ಜೊತೆ ಮಾತುಕತೆ ನಡೆಸುತ್ತಿದೆ. ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಸರಕು ಸಾಗಿಸುವ ಹಡಗುಗಳ ಮೇಲೆ ಇರಾನ್ ದಾಳಿ ನಡೆಸುತ್ತಿದೆ. ಇದರ ಪರಿಣಾಮ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು (oil crisis) ಉಂಟಾಗಿದೆ.

ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ನಡೆಸುವ ದಾಳಿಗೆ ಪ್ರತಿಯಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಇಲ್ಲಿ ಸರಕು ಸಾಗಣೆಗೆ ಅಡ್ಡಿ ಪಡಿಸಿದೆ. ಹೀಗಾಗಿ ಈ ಜಲಸಂಧಿಯ ಮೂಲಕ 20 ತೈಲ ಮತ್ತು ಅನಿಲ ಟ್ಯಾಂಕರ್‌ಗಳ ಸಾಗಾಟಕ್ಕೆ ಅವಕಾಶ ನೀಡುವಂತೆ ಇರಾನ್‌ನೊಂದಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾತುಕತೆಗಳನ್ನು ನಡೆಸುತ್ತಿದೆ.

ತೈಲ ಖರೀದಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಹೊರ್ಮುಜ್ ಜಲಸಂಧಿಯ ಮೂಲಕ 20ಕ್ಕೂ ಹೆಚ್ಚು ತೈಲ ಮತ್ತು ಅನಿಲ ಟ್ಯಾಂಕರ್‌ಗಳಿಗೆ ಸುರಕ್ಷಿತವಾಗಿ ಸಾಗಿಸಲು ಅವಕಾಶ ನೀಡುವಂತೆ ಮತ್ತು ಇದನ್ನು ಖಚಿತ ಪಡಿಸಿಕೊಡುವಂತೆ ಭಾರತವು ಇರಾನ್‌ನೊಂದಿಗೆ ಮಾತುಕತೆ ನಡೆಸುತ್ತಿದೆ . ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಗೆ ಸಂಪರ್ಕಿಸುವ ಕಿರಿದಾದ ಜಲಮಾರ್ಗ ಇದಾಗಿದ್ದು, ಇರಾನ್ ಯುದ್ಧದ ಪರಿಣಾಮ ಇದು ಈಗ ಮುಚ್ಚಲ್ಪಟ್ಟಿದೆ. ವಿಶ್ವದ ಕಚ್ಚಾ ತೈಲದ ಐದನೇ ಒಂದು ಭಾಗವು ಈ ಜಲಸಂಧಿಯಲ್ಲಿ ಹಾದು ಹೋಗುತ್ತದೆ.

ಭಾರತಕ್ಕೆ ಬರಬೇಕಿದ್ದ ದ್ರವೀಕೃತ ಪೆಟ್ರೋಲಿಯಂ ಅನಿಲ, ದ್ರವೀಕೃತ ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲವನ್ನು ಒಳಗೊಂಡಿರುವ ಟ್ಯಾಂಕರ್‌ಗಳು ಇರಾನ್ ಮೇಲೆ ಯುಎಸ್ ಮತ್ತು ಇಸ್ರೇಲ್ ದಾಳಿ ನಡೆಸಿದ ಬಳಿಕ ಮಾಡಿದ ನಂತರ ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದೆ.

ಈ ಕುರಿತು ಇರಾನ್ ಸಚಿವ ಅಬ್ಬಾಸ್ ಅರಘ್ಚಿ ಅವರೊಂದಿಗೆ ಮಾತುಕತೆ ನಡೆಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಇರಾನ್ ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಹೊರ್ಮುಜ್ ಜಲಸಂಧಿಯಲ್ಲಿ ಹಾದು ಹೋಗಲು ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದರು.

ಇತ್ತೀಚೆಗೆ ಜೈಶಂಕರ್ ಅವರು ತಾವು ಅರಘ್ಚಿಯವರೊಂದಿಗೆ ಮಾತನಾಡಿರುವುದಾಗಿ ಹೇಳಿದ್ದರು. ಎರಡೂ ಕಡೆಯವರು ಟ್ಯಾಂಕರ್ ಗಳ ಸಾಗಾಟಕ್ಕೆ ಸಂಬಂಧಿಸಿ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದರು.

ಸಂಸತ್ತಿನಲ್ಲಿ ಗುರುವಾರ ಮಾತನಾಡಿದ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶದಲ್ಲಿ ಇಂಧನ ಕೊರತೆ ಇಲ್ಲ. ಭಾರತದ ಕಚ್ಚಾ ತೈಲ ಪೂರೈಕೆಯ ಸ್ಥಾನ ಸುರಕ್ಷಿತವಾಗಿದೆ. ಇಂಧನ ಇತಿಹಾಸದಲ್ಲಿ ಜಗತ್ತು ಈ ರೀತಿಯ ಕ್ಷಣವನ್ನು ಇದುವರೆಗೆ ಎದುರಿಸಿಲ್ಲ. ಹೊರ್ಮುಜ್ ಜಲಸಂಧಿಯಿಂದ ಬರಬಹುದಾದ ಪ್ರಮಾಣಕ್ಕಿಂತಲೂ ಹೆಚ್ಚು ತೈಲ ಭಾರತಕ್ಕೆ ಸಿಕ್ಕಿದೆ. ಬಿಕ್ಕಟ್ಟಿನ ಮೊದಲು,ಭಾರತದ ಕಚ್ಚಾ ತೈಲ ಆಮದು ಸರಿಸುಮಾರು ಶೇ. 45ರಷ್ಟು ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತಿತ್ತು. ಆದರೆ ಈಗ ಪ್ರಧಾನ ಮಂತ್ರಿಯವರ ಅತ್ಯುತ್ತಮ ರಾಜತಾಂತ್ರಿಕ ಸಂಪರ್ಕ ಮತ್ತು ಸದ್ಭಾವನೆಯಿಂದಾಗಿ ಅದಕ್ಕಿಂತ ಹೆಚ್ಚಿನ ಕಚ್ಚಾ ತೈಲವನ್ನು ಭಾರತ ಪಡೆದುಕೊಂಡಿದೆ ಎಂದು ತಿಳಿಸಿದ್ದರು.

ʼʼಸಮಸ್ಯೆ ಈಗ ಆರಂಭವಾಗಿದೆʼʼ; ಇರಾನ್-ಇಸ್ರೇಲ್‌ ಯುದ್ಧ ಭಾರತದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದ ರಾಹುಲ್‌ ಗಾಂಧಿ

ತೈಲ ಸಂಸ್ಕರಣಾಗಾರಗಳಲ್ಲಿ ತೈಲ ಸಂಗ್ರಹ ಶೇಕಡಾ 100 ಕ್ಕಿಂತ ಹೆಚ್ಚಿವೆ ಎಂದು ಸಚಿವರು, ಕಚ್ಚಾ ತೈಲ ಆಮದು ಹೊರ್ಮುಜ್ ಜಲಸಂಧಿ ಮೂಲಕ ಬರುವುದಕ್ಕಿಂತ ಸುಮಾರು ಶೇ. 70 ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಎಟಿಎಫ್ ಅಥವಾ ಇಂಧನ ತೈಲದ ಕೊರತೆಯಿಲ್ಲ. ಇಂಧನ ತೈಲದ ಲಭ್ಯತೆಯನ್ನು ಸಂಪೂರ್ಣವಾಗಿ ಖಚಿತಪಡಿಸಲಾಗಿದೆ ಎಂದು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author