ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತೈಲ ಖರೀದಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ತೈಲ ಖರೀದಿ ವಿಚಾರದಲ್ಲಿ ಭಾರತದ ನಿಲುವಿನೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಸಂಸತ್ತಿನಲ್ಲಿ ವಿಪಕ್ಷಗಳ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು. ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ರಷ್ಯಾ ಕಚ್ಚಾ ತೈಲ ಖರೀದಿಗೆ ಭಾರತಕ್ಕೆ ಅಮೆರಿಕ ವಿನಾಯಿತಿ ನೀಡಿರುವುದಕ್ಕೆ ಸಂಬಂಧಿಸಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ತೈಲ ಖರೀದಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ: ರಾಹುಲ್ ಗಾಂಧಿ

ಸಂಗ್ರಹ ಚಿತ್ರ -

ನವದೆಹಲಿ: ಇಸ್ರೇಲ್, ಯುಎಸ್ ಸೇನಾ ಪಡೆಯು ಇರಾನ್ (iran war) ಮೇಲೆ ದಾಳಿ ನಡೆಸಿದ ಪರಿಣಾಮ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ (Middle Eastern country) ಉಂಟಾಗಿರುವ ಬಿಕ್ಕಟ್ಟಿನ ಮಧ್ಯೆ ರಷ್ಯಾದಿಂದ ಕಚ್ಚಾ ತೈಲ (Russian Crude oil) ಖರೀದಿ ಮಾಡಲು ಅಮೆರಿಕ ಭಾರತಕ್ಕೆ ವಿನಾಯಿತಿ ನೀಡಿದೆ. ಇದಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Opposition leader Rahul Gandhi) ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Petroleum and Natural Gas Minister Hardeep Singh Puri) ಅವರನ್ನು ತರಾಟೆಗೆ ತೆಗೆದುಕೊಂಡರು. ತೈಲ ಖರೀದಿ ವಿಚಾರದಲ್ಲಿ ಭಾರತದ ನಿಲುವಿನೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರತಿಯೊಂದು ರಾಷ್ಟ್ರದ ಅಡಿಪಾಯ ಎಂದರೆ ಇಂಧನ ಭದ್ರತೆ. ನಾವು ಯಾರಿಂದ ತೈಲ ಖರೀದಿ ಮಾಡಬೇಕು, ರಷ್ಯಾದಿಂದ ತೈಲ ಖರೀದಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದು ಅಮೆರಿಕವೇ ಎಂದು ಪ್ರಶ್ನಿಸಿರುವ ಅವರು, ವಿವಿಧ ತೈಲ ಪೂರೈಕೆದಾರರೊಂದಿಗಿನ ನಮ್ಮ ಸಂಬಂಧವನ್ನು ನಾವು ನಿರ್ಧರಿಸಬಹುದು. ಇದಕ್ಕೆ ಇನ್ನೊಂದು ರಾಷ್ಟ್ರದ ಏಕೆ ಅನುಮತಿ ನೀಡುತ್ತಾರೆ ಎಂದು ಪ್ರಶ್ನಿಸಿದರು.

ಒಬಿಸಿ ಕೆನೆಪದರ ನಿರ್ಧಾರಕ್ಕೆ ಪೋಷಕರ ಆದಾಯವೊಂದೇ ಮಾನದಂಡವಲ್ಲ: ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಏನಿದೆ?

ನಮ್ಮಲ್ಲಿ ತೈಲ ಮಂತ್ರಿಯಾಗಿರುವ ಒಬ್ಬ ಸಂಭಾವಿತ ವ್ಯಕ್ತಿ ಕುಳಿತಿದ್ದಾನೆ. ತೈಲ ಖರೀದಿ ನೀತಿಗೆ ರಾಜಿ ಮಾಡಿಕೊಳ್ಳಲು ಜೆಫ್ರಿ ಎಪ್ಸ್ಟೀನ್ ಅವರೊಂದಿಗಿನ ಪುರಿ ಅವರ ಸಂಬಂಧವೇ ಕಾರಣ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಹರ್ದೀಪ್ ಸಿಂಗ್ ಪುರಿ, ಇಂಧನ ಇತಿಹಾಸದಲ್ಲಿ ಜಗತ್ತು ಈ ರೀತಿಯ ಕ್ಷಣವನ್ನು ಎದುರಿಸಿಲ್ಲ. ಭಾರತದ ಕಚ್ಚಾ ತೈಲ ಪೂರೈಕೆ ಸ್ಥಾನ ಸುರಕ್ಷಿತವಾಗಿದೆ. ನಾವು ಪಡೆದುಕೊಂಡ ಪ್ರಮಾಣವು ಹೊರ್ಮುಜ್ ಜಲಸಂಧಿಯಿಂದ ಬರಬಹುದಾದ ಪ್ರಮಾಣಕ್ಕಿಂತಲೂ ಹೆಚ್ಚು. ಬಿಕ್ಕಟ್ಟಿನ ಮೊದಲು,ಭಾರತದ ಕಚ್ಚಾ ತೈಲ ಆಮದು ಸರಿಸುಮಾರು ಶೇ. 45ರಷ್ಟು ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತಿತ್ತು. ಆದರೆ ಈಗ ಪ್ರಧಾನ ಮಂತ್ರಿಯವರ ಅತ್ಯುತ್ತಮ ರಾಜತಾಂತ್ರಿಕ ಸಂಪರ್ಕ ಮತ್ತು ಸದ್ಭಾವನೆಯಿಂದಾಗಿ ಅದಕ್ಕಿಂತ ಹೆಚ್ಚಿನ ಕಚ್ಚಾ ತೈಲವನ್ನು ಭಾರತ ಪಡೆದುಕೊಂಡಿದೆ ಎಂದರು.

ಲೋಕಸಭೆಯಲ್ಲಿ ಎಪ್ಸ್ಟೀನ್ ವರದಿ ಪ್ರಸ್ತಾಪ ವಾಗ್ವಾದಕ್ಕೆ ಕಾರಣವಾಯಿತು. ಇದಕ್ಕೆ ತಡೆಯೊಡ್ಡಿದ ಸ್ಪೀಕರ್ ಓಂ ಬಿರ್ಲಾ, ಸದನದ ಕಲಾಪಗಳ ಮೊದಲು ನೀಡಿದ ನೋಟಿಸ್‌ನಲ್ಲಿ ಉಲ್ಲೇಖಿಸಲಾದ ವಿಷಯಗಳ ಮೇಲೆ ಗಮನಹರಿಸಲು ರಾಹುಲ್ ಗಾಂಧಿಯವರಲ್ಲಿ ಕೇಳಿಕೊಂಡರು.

ತೈಲ ಬೆಲೆ ಬ್ಯಾರೆಲ್‌ಗೆ 200 ಡಾಲರ್‌ ತಲುಪಲಿದೆ: ಹಡಗುಗಳ ಮೇಲಿನ ದಾಳಿಗೆ ಇರಾನ್ ಖಡಕ್‌ ಎಚ್ಚರಿಕೆ

ಬಳಿಕ ರಾಹುಲ್ ಗಾಂಧಿಯವರು ದೇಶದಲ್ಲಿ ನಡೆಯುತ್ತಿರುವ ಎಲ್‌ಪಿಜಿ ಕೊರತೆಯ ಬಗ್ಗೆ ಮಾತನಾಡಲು ಬಯಸಿದ್ದರು. ಆದರೆ ಅವರು ಸೂಚನೆ ಇಲ್ಲದೆ ಇತರ ವಿಷಯಗಳನ್ನು ಚರ್ಚಿಸುವುದು ಸಂಸತ್ತಿನ ಕಾರ್ಯವಿಧಾನಗಳು ಮತ್ತು ನಿಯಮಗಳ ವ್ಯಾಪ್ತಿಯಲ್ಲಿಲ್ಲ. ಎಪ್ಸ್ಟೀನ್ ಬಗ್ಗೆ ಗಾಂಧಿಯವರ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗುವುದಿಲ್ಲ ಎಂದು ಹೇಳಿದ ಬಿರ್ಲಾ ಅವರು ತಮ್ಮ ಕುರ್ಚಿಯಿಂದ ಕೆಳಗಿಳಿದರು.