ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೆರಿಕ ಸುಂಕ, ಜಾಗತಿಕ ಅಪಾಯಗಳನ್ನು ಎದುರಿಸಲು ಭಾರತ ಸಿದ್ದ; ಇದಕ್ಕಾಗಿಯೇ ಬಜೆಟ್ ನಲ್ಲಿ ಖರ್ಚು ಹೆಚ್ಚಿಸಿದ ನಿರ್ಮಲಾ ಸೀತಾರಾಮನ್

ಕೇಂದ್ರ ಬಜೆಟ್ ನಲ್ಲಿ ಈ ಬಾರಿ ಜಾಗತಿಕ ಅಪಾಯಮತ್ತು ಅಮೆರಿಕ ಸುಂಕಗಳನ್ನು ಎದುರಿಸಲು ಏಪ್ರಿಲ್ 1ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ವೆಚ್ಚವನ್ನು ಶೇ. 9 ರಷ್ಟು ಹೆಚ್ಚಿಸಲಾಗಿದೆ. ಸಣ್ಣ ವ್ಯವಹಾರಗಳು ಮತ್ತು ಆರೋಗ್ಯ ವಲಯದ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Niramala Sitharaman) ಅವರು ಭಾನುವಾರ ಮಂಡಿಸಿದ ಕೇಂದ್ರ ಬಜೆಟ್ (Union Budget 2026)ನಲ್ಲಿ ಜಾಗತಿಕ ಅಪಾಯಗಳನ್ನು ಮತ್ತು ಅಮೆರಿಕ ಸುಂಕಗಳನ್ನು (US tariffs) ಎದುರಿಸಲು ಏಪ್ರಿಲ್ 1ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚವನ್ನು ಶೇ. 9 ರಷ್ಟು ಹೆಚ್ಚಿಸಲಾಗಿದೆ. ಇದಕ್ಕಾಗಿ 12.2 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ರೈಲ್ವೆ, ಸಣ್ಣ ವ್ಯವಹಾರಗಳು ಮತ್ತು ಆರೋಗ್ಯ ವಲಯದ ಮೇಲೆ ಹೆಚ್ಚಿನ ಗಮನ ಹರಿಸಿರುವುದಾಗಿ ಹೇಳಿದರು.

ಈ ಹಣಕಾಸು ವರ್ಷದಲ್ಲಿ ಹಣಕಾಸಿನ ಕೊರತೆಯನ್ನು ಸುಮಾರು ಶೇ. 4.4 ರಿಂದ ಶೇ. 4.3 ಕ್ಕೆ ಇಳಿಸಲಾಗುವುದು. ಇದರೊಂದಿಗೆ ಸರ್ಕಾರಿ ಸಾಲವನ್ನು ಶೇ. 56.1 ರಿಂದ ಶೇ. 55.6 ಕ್ಕೆ ಇಳಿಸಲಾಗುವುದು ಎಂದು ತಿಳಿಸಿದ ನಿರ್ಮಲಾ ಸೀತಾರಾಮನ್, ಹೆಚ್ಚುತ್ತಿರುವ ಜಾಗತಿಕ ಅಪಾಯಗಳಿಂದ ದೇಶದ ಆರ್ಥಿಕತೆಯನ್ನು ರಕ್ಷಿಸಲು ಹಣಕಾಸು ಶಿಸ್ತನ್ನು ಈ ಬಾರಿಯ ಬಜೆಟ್ ನಲ್ಲಿ ಕಾಪಾಡಿಕೊಂಡಿದ್ದಾರೆ.

ದೇಶದ ಅಭಿವೃದ್ಧಿ, ಸ್ವಾವಲಂಬನೆಗೆ ಈ ಬಾರಿಯ ಬಜೆಟ್ ಪೂರಕ: ವೀರೇಂದ್ರ ಹೆಗ್ಗಡೆ

ದೇಶದ ಅತಿದೊಡ್ಡ ರಫ್ತು ಮಾರುಕಟ್ಟೆಯಾದ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಇನ್ನು ಅಂತಿಮ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವು ತೆರಿಗೆ ಬದಲಾವಣೆಗಳು ಮತ್ತು ಆರ್ಥಿಕ ಸುಧಾರಣೆಗಳ ಮೇಲೆ ಗಮನಹರಿಸಿದೆ.

ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿ ದೇಶದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು ಮೊದಲ ಕರ್ತವ್ಯ ಎಂದು ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಶಾಸಕರಿಗೆ ತಿಳಿಸಿದ್ದರು. ಅದರಂತೆ ಸೀತಾರಾಮನ್ ಅವರು ಕೆಲವು ಷೇರು ವಹಿವಾಟುಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಿದ್ದರಿಂದ ಷೇರು ಸೂಚ್ಯಂಕವು ಹಿಂದಿನ ಲಾಭಗಳನ್ನು ಅಳಿಸಿ ಮಧ್ಯಾಹ್ನ 12.35ರ ಸುಮಾರಿಗೆ ಶೇ. 1.5 ರಷ್ಟು ಇಳಿಕೆಯಾಯಿತು.

ಈ ಬಾರಿ ಬಜೆಟ್‌ನಲ್ಲಿ ಬಂಡವಾಳ ವೆಚ್ಚದಲ್ಲಿ ಸರಿಸುಮಾರು ಶೇ. 9ರಷ್ಟು ಹೆಚ್ಚಳ ಮಾಡಲಾಗಿದೆ. ಇದು ಕಳೆದ ದಶಕದಲ್ಲಿ ಮೂಲಸೌಕರ್ಯದಲ್ಲಿ ಸರ್ಕಾರ ಸ್ಥಿರತೆಯನ್ನು ಕಾಯ್ದುಕೊಂಡಿರುವುದನ್ನು ತಿಳಿಸುತ್ತದೆ. ಒಂದೇ ಬಾರಿಗೆ ಒತ್ತು ನೀಡುವ ಬದಲು ನಿರಂತರತೆಯನ್ನು ಇದು ಬಲಪಡಿಸುತ್ತದೆ ಎಂದು ಡೆಲಾಯ್ಟ್ ಇಂಡಿಯಾದ ನಿರ್ದೇಶಕ ರಾಘವ್ ಮದನ್ ತಿಳಿಸಿದ್ದಾರೆ.

ಇವುಗಳಲ್ಲದೇ ಸೀತಾರಾಮನ್ ಅವರು ಖನಿಜಗಳು, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಔಷಧಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಹಲವಾರು ಉತ್ಪಾದನಾ ಉಪಕ್ರಮಗಳಿಗೆ ಒತ್ತು ನೀಡಿರುವುದಾಗಿ ಹೇಳಿದ್ದು. ಸಣ್ಣ ವ್ಯವಹಾರಗಳನ್ನು ಉತ್ತೇಜಿಸಲು, ರಸ್ತೆ, ರೈಲ್ವೆ, ವಿಮಾನ ನಿಲ್ದಾಣ, ಬಂದರು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳ ಮೇಲೆ ಗಮನ ಕೇಂದ್ರೀಕರಿಸಲು ಒತ್ತು ನೀಡಿರುವುದಾಗಿ ತಿಳಿಸಿದ್ದಾರೆ.

Union Budget 2026: ಗ್ರಾಮೀಣ ಆರ್ಥಿಕತೆಗೆ ಬಲ, 2026ರ ಬಜೆಟ್‌ನಲ್ಲಿ ರೈತರು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಆದ್ಯತೆ!

ಈ ಬಾರಿಯ ಬಜೆಟ್ ಮುಂದಿನ ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಸರ್ಕಾರವು ಶೇಕಡಾ 6.8 ರಿಂದ 7.2 ರಷ್ಟು ಆರ್ಥಿಕ ಬೆಳವಣಿಗೆಯ ಮುನ್ಸೂಚನೆ ನೀಡಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಇವಿಷ್ಟು ಅಲ್ಲದೇ ಮುಂದಿನ ಹಣಕಾಸು ವರ್ಷದಲ್ಲಿ ಸರ್ಕಾರ 17.2 ಲಕ್ಷ ಕೋಟಿ ರೂ. ಸಾಲ ಪಡೆಯಲು ಯೋಜನೆ ಮಾಡಿದೆ. ಎಲೆಕ್ಟ್ರಾನಿಕ್ಸ್ ಘಟಕ ವಲಯದ ಕಾರ್ಯಕ್ರಮಗಳಿಗೆ 400 ಶತಕೋಟಿ ರೂ., ಜೈವಿಕ ಔಷಧ ಸಂಶೋಧನೆಗೆ ಮುಂದಿನ ಐದು ವರ್ಷಕ್ಕೆ 100 ಶತಕೋಟಿ ರೂ. ಹೂಡಿಕೆ ಮಾಡಲು ಹಾಗೂ ಷೇರು ವಹಿವಾಟುಗಳ ಮೇಲಿನ ತೆರಿಗೆಯನ್ನು ಶೇ. 0.02 ರಿಂದ ಶೇ. 0.05 ಕ್ಕೆ ಹೆಚ್ಚಿಸುವುದಾಗಿ ಸೀತಾರಾಮನ್ ಅವರು ಬಜೆಟ್ ನಲ್ಲಿ ವಿವರಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author